Advertisement

ಸಮರವೀರ ಅಭಿನಂದನ್‌ಗೆ ವೀರಚಕ್ರ

01:29 AM Nov 23, 2021 | Team Udayavani |

ಹೊಸದಿಲ್ಲಿ: 2019ರಲ್ಲಿ ಪಾಕಿಸ್ಥಾನ‌ದ ಎಫ್-16 ಯುದ್ಧ ವಿಮಾನ ಹೊಡೆದು ಉರುಳಿಸಿದ ಐಎಎಫ್ನ ಗ್ರೂಪ್‌ ಕ್ಯಾಪ್ಟನ್‌ ಅಭಿನಂದನ್‌ ವರ್ದಮಾನ್‌ ಅವರಿಗೆ ಮೂರನೇ ಅತ್ಯಂತ ದೊಡ್ಡ ಶೌರ್ಯ ಪ್ರಶಸ್ತಿ “ವೀರ್‌ ಚಕ್ರ’ ಪ್ರದಾನ ಮಾಡಲಾಗಿದೆ.

Advertisement

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಗೌರವ ಪ್ರದಾನ ಮಾಡಿದ್ದಾರೆ. ಬಾಲಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ಬೆನ್ನಲ್ಲೇ ಭಾರತದ ಮೇಲೆ ದಾಳಿ ನಡೆಸಲು ಆಗಮಿಸಿದ್ದ ಪಾಕಿಸ್ಥಾನ‌ದ ಯುದ್ಧ ವಿಮಾನಗಳನ್ನು ಅಭಿನಂದನ್‌ ಹಿಮ್ಮೆಟ್ಟಿಸಿದ್ದರು. ಆ ಸಂದರ್ಭದಲ್ಲಿ ಅವರು ಅಭಿನಂದನ್‌ ವಿಂಗ್‌ ಕಮಾಂಡರ್‌ ಆಗಿದ್ದರು.

ಈ ಸಂದರ್ಭದಲ್ಲಿ ಇಬ್ಬರು ಕನ್ನಡಿಗರೂ ಸೇರಿ ಅನೇಕ ಸೇನಾಧಿ  ಕಾರಿಗಳಿಗೆ, ನಿರ್ದಿಷ್ಟ ಸಂದರ್ಭಗಳಲ್ಲಿ ಅವರು ತೋರಿಸಿದ ಸಾಹಸ  ಗಳಿಗೆ ಅನುಗುಣವಾಗಿ ಶೌರ್ಯ ಪದಕಗಳನ್ನು ನೀಡಿ ಗೌರವಿಸಲಾಯಿತು.

ಇದನ್ನೂ ಓದಿ:ಗೋವಾ 12 ಶಾಸಕರ ಅನರ್ಹ ಪ್ರಕರಣ; ಡಿ.10 ಕ್ಕೆ ವಿಚಾರಣೆಯನ್ನು ಮುಂದೂಡಿದ ನ್ಯಾಯಾಲಯ

ಎರಡು ಪ್ರತ್ಯೇಕ ಘಟನೆಗಳಲ್ಲಿ, ಜಮ್ಮು ಕಾಶ್ಮೀರದಲ್ಲಿ ಉಗ್ರರೊಂದಿಗೆ ಸೆಣಸಾಡುವಾಗ ಹುತಾತ್ಮರಾದ ಯೋಧ ನಯೀಬ್‌ ಸುಬೇದಾರ್‌ ಸೋಮ್‌ಬೀರ್‌, ಮನೋಜ್‌ ದೌಂಡಿಯಾಲ್‌ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರದಾನ ಮಾಡಲಾಯಿತು.

Advertisement

ಸೋಮ್‌ಬೀರ್‌ ಪರವಾಗಿ ಅವರ ಪತ್ನಿ ಮತ್ತು ತಾಯಿ ಪದಕ ಪಡೆದರೆ, ಮನೋಜ್‌ ಪರವಾಗಿ ಅವರ ಪತ್ನಿ ಹಾಗೂ ಹಾಲಿ ಸೇನಾಧಿಕಾರಿಯಾಗಿರುವ ಲೆಫ್ಟನೆಂಟ್‌ ನಿಕಿತಾ ಕೌಲ್‌ ಅವರು ಪದಕ ಸ್ವೀಕರಿಸಿದರು.

ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾ ಡಿದ್ದ ಕಾರ್ಪ್‌ ಆಫ್ ಎಂಜಿನಿಯರ್ಸ್‌ ವಿಭಾಗದ ಸ್ಯಾಪರ್‌ ಪ್ರಕಾಶ್‌ ಅವರಿಗೆ ಶೌರ್ಯ ಪದಕಗಳಲ್ಲ 2ನೇ ಶ್ರೇಷ್ಠ ಪದಕಗಳಾಗಿ ರುವ ಕೀರ್ತಿ ಚಕ್ರ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next