Advertisement
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಕೆ.ಎನ್.ರಾಜಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಎಲ್.ಗೀತಮ್ಮ ಕೆಂಬೋಡಿ ಕ್ಷೇತ್ರದ ಇಬ್ಬರೂ ಆಯ್ಕೆಯಾಗಿದ್ದಾರೆ.
Related Articles
Advertisement
ಬಂಗಾರಪೇಟೆ: 6 ಗ್ರಾಪಂ ಕಾಂಗ್ರೆಸ್ ಬೆಂಬಲಿತರ ವಶಕ್ಕೆ :
ಬಂಗಾರಪೇಟೆ: ತಾಲೂಕಿನ ಆರು ಗ್ರಾಪಂಗಳಿಗೆ ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ನಿರೀಕ್ಷೆಯಂತೆ ಆರೂಪಂಚಾಯತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರೇಆಯ್ಕೆಯಾಗುವ ಮೂಲಕ ಆಡಳಿತರೂಢ ಬಿಜೆಪಿಗೆ ಹಿನ್ನಡೆ ಉಂಟಾಗುವಂತೆ ಮಾಡಿದ್ದಾರೆ.
ಹುಲಿಬೆಲೆ, ಬಲಮಂದೆ, ಗುಲ್ಲಹಳ್ಳಿ, ಆಲಂಬಾಡಿ ಜೋತೇನಹಳ್ಳಿ, ಚಿನ್ನಕೋಟೆ ಮತ್ತುಚಿಕ್ಕಅಂಕಂಡಹಳ್ಳಿ ಗ್ರಾಪಂಗೆ ಚುನಾವಣೆ ನಡೆದಿದ್ದು, 6ರಲ್ಲಿ 5 ಕಡೆ ಅವಿರೋಧ ಆಯ್ಕೆಯಾದರೆಹುಲಿಬೆಲೆ ಪಂಚಾಯತಿಯಲ್ಲಿ ಮಾತ್ರ ಚುನಾವಣೆ ನಡೆದಿದ್ದು, ಅಲ್ಲಿಯೂ ಕಾಂಗ್ರೆಸ್ ಬೆಂಬಲಿತ
ಅಭ್ಯರ್ಥಿ ಆರ್.ವಿ.ಸುರೇಶ್ ಮತ್ತು ಶೋಭಾರಾಣಿ ತಲಾ 7 ಮತಗಳ ಅಂತರದಿಂದ ಚುನಾಯಿತರಾಗಿ ಮಾಜಿ ಬೂದಿಕೋಟೆ ಬ್ಲಾಕ್ ಅಧ್ಯಕ್ಷ ಮಂಜುನಾಥಗೌಡರನ್ನು ಮಣಿಸಿದ್ದಾರೆ. ಬಲಮಂದೆ ಗ್ರಾಪಂ ಅಧ್ಯಕ್ಷ ರಾಮಪ್ಪ ಮತ್ತುಉಪಾಧ್ಯಕ್ಷೆ ಗೀತಾ, ಆಲಂಬಾರಿ ಜೋತೇನಹಳ್ಳಿ ಅಧ್ಯಕ್ಷೆ ನಾರಾಯಣಮ್ಮ, ಉಪಾಧ್ಯಕ್ಷೆ ಚೌಡಮ್ಮ, ಚಿಕ್ಕಅಂಕಂಡಹಳ್ಳಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ನಗೀನಾತಾಜ್, ಗುಲ್ಲಹಳ್ಳಿ ಅಧ್ಯಕ್ಷೆ ನೀಲಾಬಾಯಿ ಗೋವಿಂದರಾವ್, ಉಪಾಧ್ಯಕ್ಷೆ ಸುಷ್ಮಾ ಮತ್ತು ಚಿನ್ನಕೋಟೆ ಅಧ್ಯಕ್ಷ ಸುಬ್ರಹ್ಮಣಿ ಮತ್ತು ಉಪಾಧ್ಯಕ್ಷೆ ಸುನಂದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಆರೂ ಗ್ರಾಪಂ ಕಳೆದ ಅವಧಿಯಲ್ಲಿಯೂ ಸಹ ಕಾಂಗ್ರೆಸ್ ವಶದಲ್ಲಿತ್ತು ಎಂಬುದು ಇಲ್ಲಿನ ಗಮನಾರ್ಹ. ಸೋಮವಾರ ನಡೆದ 6 ಗ್ರಾಪಂಗಳಲ್ಲಿ 4ರಲ್ಲಿ ಕಾಂಗ್ರೆಸ್ ಜಯಗಳಿಸಿದ್ದರೆ, 2ರಲ್ಲಿ ಮಾತ್ರ ಬಿಜೆಪಿ ಖಾತೆ ತೆರೆದಿದೆ. ಈ ವರೆಗೂ ನಡೆದಿರುವ 12 ಪಂಚಾಯತಿ ಪೈಕಿ 10ರಲ್ಲಿ ಕಾಂಗ್ರೆಸ್ ಬೆಂಬಲಿಗರೇ ಅಧಿಕಾರ ಚುಕ್ಕಾಣಿ ಹಿಡಿದಿರುವುದಕ್ಕೆ ಶಾಸಕ ಎಸ್. ಎನ್.ನಾರಾಯಣಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ. ಉಳಿದಿರುವ 9ರಲ್ಲಿ 8 ಕಡೆ ಕಾಂಗ್ರೆಸ್ ಬೆಂಬಲಿಗರುಅಧಿಕಾರ ಹಿಡಿಯಲಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದರು.
ಈ ವೇಳೆ ತಾಪಂ ಅಧ್ಯಕ್ಷ ಮಹಾದೇವ್, ಸದಸ್ಯಅಮರೇಶ್, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಲ್ಲಹಳ್ಳಿ ನಾಗರಾಜ್, ಮುಖಂಡರಾದಮುನಿಕೃಷ್ಣಪ್ಪ, ಆಲಂಬಾಡಿ ಸುರೇಶ್, ಮುನಿಯಪ್ಪ,ಎಂ.ಜಿ.ಪ್ರಕಾಶ್, ವೀಣಾ ವೆಂಕಟೇಶ್, ವಿಜಯಕೃಷ್ಣಪಿಡಿಒಗಳಾದ ಮಧು, ಗಂಗೋಜಿರಾವ್, ನಾರಾಯಣಪ್ಪ ಮತ್ತಿತರರು ಇದ್ದರು.