Advertisement

ವಿಶ್ವಶ್ರೇಷ್ಠ ಸಂವಿಧಾನ ನೀಡಿದವರು ಅಂಬೇಡ್ಕರ್‌

02:59 PM Apr 14, 2017 | Team Udayavani |

ಧಾರವಾಡ: ಅತ್ಯುತ್ತಮ ಸಾಮಾಜಿಕ ಮೌಲ್ಯಗಳು ಹಾಗೂ ಆಶಯಗಳನ್ನೊಳಗೊಂಡ ಶ್ರೇಷ್ಠ ಮತ್ತು ಜಗತ್ತಿನಲ್ಲಿಯೇ ಪ್ರಬಲವಾದ ಸಂವಿಧಾನ ನೀಡಿದ ಶ್ರೇಯಸ್ಸು ಡಾ| ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು. 

Advertisement

ಇಲ್ಲಿನ ಸನ್ಮತಿ ಮಾರ್ಗದಲ್ಲಿರುವ  ಡಾ| ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ 126ನೇ ಜಯಂತಿಯ ಮುನ್ನಾದಿನ ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಹಿರಿಯರು ಅಹಿಂಸಾ ಮಾರ್ಗದಲ್ಲಿ ಹೋರಾಡಿ ಸ್ವಾತಂತ್ರ ತಂದುಕೊಟ್ಟಿದ್ದನ್ನು ಉಳಿಸಿಕೊಳ್ಳಲು ಸಂವಿಧಾನ ಪೂರಕವಾಗಿದೆ. ದೇಶದ ಸರ್ವಾಂಗೀಣ ಏಳ್ಗೆಗೆ ಸಂವಿಧಾನ ಅವಕಾಶ ಕಲ್ಪಿಸಿದೆ. ಡಾ|ಬಿ.ಆರ್‌. ಅಂಬೇಡ್ಕರ್‌ ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕವಿವಿ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ಅಧ್ಯಯನ ವಿಭಾಗದ  ಪ್ರಾಧ್ಯಾಪಕ ಡಾ|ಶಿವರುದ್ರ ಎಸ್‌. ಕಲ್ಲೋಳಿಕರ್‌ ಉಪನ್ಯಾಸ ನೀಡಿ, ಜಗತ್ತಿನಲ್ಲಿಯೇ ಶ್ರೇಷ್ಠ ವಿದ್ವಾಂಸ, ಸಮಾಜ ಸುಧಾರಕ  ಎಂಬ ಅಧಿಕೃತ ಮಾನ್ಯತೆಯನ್ನು ಅಮೆರಿಕದ ಕೋಲಂಬಿಯಾ ವಿಶ್ವವಿದ್ಯಾಲಯವು ತನ್ನ 250 ವರ್ಷಗಳ ಇತಿಹಾಸದ ಸಮೀಕ್ಷೆ ನಡೆಸಿ, ಡಾ| ಅಂಬೇಡ್ಕರ್‌ ಅವರಿಗೆ ಆ ಗೌರವ  ನೀಡಿರುವದು ಸಮಸ್ತ ಭಾರತೀಯರು ಹೆಮ್ಮೆಪಡಬೇಕಾದ ಸಂಗತಿಯಾಗಿದೆ ಎಂದರು. 

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕ ಸದಾಶಿವ ಮರ್ಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಗಿರೀಶ ಕಾಂಬಳೆ, ಮಹದೇವ ದೊಡ್ಡಮನಿ, ಪ್ರಿಯಾ ಪುರಾಣಿಕ, ಶಿವರಾಜಕುಮಾರ ಕಲ್ಲಿಗನೂರ ಇದ್ದರು. ಎನ್‌.ಮುನಿರಾಜು ಸ್ವಾಗತಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next