Advertisement
ನಗರದ ಹೋಟೆಲ್ ಲಿ ಮೆರಿಡಿಯನ್‌ನಲ್ಲಿ ಬುಧವಾರ ಅಸೋಚಾಮ್ (ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಆಫ್ ಇಂಡಿಯಾ) ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವಾಹನಗಳ ಕುರಿತ “ಎಲೆಕ್ಟ್ರಿಕ್ ಮೊಬಿಲಿಟಿ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ಥಳೀಯವಾಗಿಯೇ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ, ಬ್ಯಾಟರಿಗಳ ಕೊರತೆ ಆಗದಂತೆ ದಾಸ್ತಾನು ಮಾಡುವ ವಿಧಾನಗಳ ಸುಧಾರಣೆ, ಬ್ಯಾಟರಿಗಳಿಗಾಗಿ ಅವಲಂಬನೆಯಾಗದೆ ದೇಶೀಯವಾಗಿಯೇ ನಿರ್ಮಿಸುವುದು ಸೇರಿದಂತೆ ಹಲವು ಅಂಶಗಳ ಬಗ್ಗೆ ತಯಾರಕರೊಂದಿಗೆ ಒಂದು Óುತ್ತಿನ ಮಾತುಕತೆ ಮಾಡಲಾಗಿದೆ ಎಂದು ಹೇಳಿದರು.
ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಲಿದೆ. ಇದರ ಬೆನ್ನಲ್ಲೇ ವಿದ್ಯುತ್ ಜಾಲವನ್ನೂ ವಿಸ್ತರಿಸುವ ಅವಶ್ಯಕತೆ ಇದೆ ಎಂದರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಸೇರಿದಂತೆ ಕೇಂದ್ರ ಸರ್ಕಾರದ ಯಾವುದೇ ಪ್ರಮುಖ ಯೋಜನೆಗಳನ್ನು ರಾಜ್ಯ ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದೆ. ಎಲೆಕ್ಟ್ರಿಕ್ ವಾಹನಗಳ ವಿಚಾರದಲ್ಲೂ ರಾಜ್ಯ ಹಿಂದೆಬೀಳುವುದಿಲ್ಲ ಎಂದು ಭರವಸೆ ನೀಡಿದರು. ಎಸ್. ಸಂಪತ್‌ರಾಮನ್, ಮಹೇಶ್ ಬಾಬು ಉಪಸ್ಥಿತರಿದ್ದರು.
Related Articles
2020ರ ವೇಳೆಗೆ ದೇಶದಲ್ಲಿ 60 ಲಕ್ಷ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿಯಲಿದ್ದು, 2022ರ ವೇಳೆಗೆ ದೇಶದ ಅಟೋಮೋಟಿವ್ ಉದ್ಯಮದ ಒಟ್ಟಾರೆ ವೃದ್ಧಿ ದರ (ಜಿಡಿಪಿ) ಶೇ. 15ರಿಂದ ಶೇ. 25ಕ್ಕೆ ಏರಿಕೆ ಆಗಲಿದೆ. ಕೇಂದ್ರ ಸರ್ಕಾರವು 2030ರ ವೇಳೆಗೆ ಬಹುತೇಕ ಎಲ್ಲ ವಾಹನಗಳನ್ನು ಬ್ಯಾಟರಿಚಾಲಿತವಾಗಿ ಮಾರ್ಪಡಿ ಸುವ ಗುರಿ ಹೊಂದಿದೆ. ಇದರಿಂದ ಒಂದು ಗಿಗಾ ಟನ್ ಹೊಗೆಯನ್ನು ತಗ್ಗಿಸುವುದರ ಜತೆಗೆ 60 ಬಿಲಿಯನ್ ಅಮೆರಿಕ ಡಾಲರ್‌ನಷ್ಟು ಇಂಧನ ಉಳಿತಾಯ ಆಗಲಿದೆ ಎಂದು ಅಸೋಚಾಮ್‌ನ ಅಟೋ ಮೋಟಿವ್ ಉದ್ಯಮದ ತಜ್ಞರು ವಿಚಾರ ಸಂಕಿರಣದಲ್ಲಿ ಮಾಹಿತಿ ನೀಡಿದರು.
Advertisement