Advertisement

ಕಂದಾಯ ಸಚಿವರ ವಾಸ್ತವ್ಯಕ್ಕೆ ಸಿದ್ಧತೆ: ಡಿಸಿ ಸೂಚನೆ

12:29 AM Feb 17, 2022 | Team Udayavani |

ಉಡುಪಿ: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಪ್ರಯುಕ್ತ ಕಂದಾಯ ಸಚಿವ ಆರ್‌. ಅಶೋಕ್‌ ಫೆ. 19ರಂದು ಬ್ರಹ್ಮಾವರ ತಾಲೂಕಿನ ಆರೂರಿನಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದು, ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಸೂಚಿಸಿದರು.

Advertisement

ಕಂದಾಯ ಸಚಿವರು ಮೊದಲಿಗೆ ಕಾರ್ಕಳ ತಾಲೂಕಿಗೆ ಭೇಟಿ ನೀಡಿ, ಅಲ್ಲಿ ಕಡತ ವಿಲೇವಾರಿ ಸಪ್ತಾಹ ಕಾರ್ಯಕ್ರಮ, ಕಂದಾಯ ಮೇಳ ಮತ್ತು ಫ‌ಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತರ ಕೊಕ್ಕರ್ಣೆ, ಆರೂರು ಮತ್ತು ಕೆಂಜೂರು ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.

ಸಚಿವರನ್ನು ಕೊಕ್ಕರ್ಣೆಯ ಬಸ್‌ ನಿಲ್ದಾಣದ ಬಳಿ ಸ್ವಾಗತಿಸಲು ಸಿದ್ಧತೆ ಮಾಡಿ ಕೊಳ್ಳಬೇಕು. ಆರೂರಿಗೆ ತೆರಳುವ ಮಾರ್ಗದಲ್ಲಿ ಅವರು ಕುಡುಬಿ ಜನಾಂಗದವರ ಮನೆಗೆ ಭೇಟಿ ನೀಡಲಿದ್ದಾರೆ ಎಂದರು.

ಸಚಿವರು ಆರೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಾಸ್ತವ್ಯ ಹೂಡ ಲಿದ್ದು, ಸೂಕ್ತ ವ್ಯವಸ್ಥೆ ಕೈಗೊಳ್ಳು ವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಚಿವರು ಕಂದಾಯ ಇಲಾಖೆಗೆ ಸಂಬಂಧಿಸಿದ 94ಸಿ, ಸಿಸಿ, ಸಾಮಾಜಿಕ ಭದ್ರತಾ ಯೋಜನೆಯ ಫ‌ಲಾನುಭವಿಗಳಿಗೆ ಸೌಲಭ್ಯ ವಿತರಣೆ, ಕೋವಿಡ್‌ ಪರಿಹಾರದ ಚೆಕ್‌ ವಿತರಣೆ ಹಾಗೂ ನಿವೇಶನದ ಹಕ್ಕುಪತ್ರ, ವಿವಿಧ ಇಲಾಖೆಗಳ ಸವಲತ್ತು ಗಳನ್ನು ವಿತರಿಸಲಿದ್ದಾರೆ. ಪ್ರಮುಖ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿ ನೀಡುವ ಸ್ಟಾಲ್‌ ಅಳವಡಿಸಲು ಹಾಗೂ ಸಾರ್ವಜನಿಕ ರಿಂದ ಅಹವಾಲುಗಳನ್ನು ಸ್ವೀಕರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Advertisement

ಇದನ್ನೂ ಓದಿ:ಬಿಜೆಪಿ ವಿರುದ್ಧ ಹೋರಾಟ: ಚಂದ್ರಶೇಖರ್‌ಗೆ ಉದ್ಧವ್‌ ಬೆಂಬಲ

ಪೆ. 20ರ ಬೆಳಗ್ಗೆ ಕೆಂಜೂರು ಗ್ರಾಮದ ಕೊರಗರ ಕಾಲನಿಗೆ ಸಚಿವರು ಭೇಟಿ ನೀಡಿ ಉಪಾಹಾರ ಸೇವಿಸಲಿದ್ದಾರೆ ಎಂದರು.

ಸಚಿವರ ಗ್ರಾಮ ವಾಸ್ಯವ್ಯ ಕಾರ್ಯ ಕ್ರಮದ ಯಶಸ್ಸಿಗೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿ ಸುವಂತೆ, ಸ್ಥಳೀಯ ಮುಖಂಡರು -ಸಾರ್ವಜನಿಕರಿಂದ ಅಗತ್ಯ ಸಹಕಾರ ಪಡೆಯುವಂತೆ ತಿಳಿಸಿದರು.

ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ವೈ., ಎಡಿಸಿ ಸದಾಶಿವ ಪ್ರಭು, ಕುಂದಾಪುರ ಸಹಾಯಕ ಕಮೀಷನರ್‌ ಕೆ. ರಾಜು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next