Advertisement

ಮಹದಾಯಿ ಅಭಯಾರಣ್ಯದ 22 ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ

11:34 PM Feb 15, 2020 | Team Udayavani |

ಪಣಜಿ: ಮಹದಾಯಿ ಅಭಯಾರಣ್ಯದ ನಾಲ್ಕು ಗ್ರಾಮಗಳಲ್ಲಿನ 22 ಕುಟುಂಬಗಳನ್ನು ಬೇರೆಡೆ ಸ್ಥಳಾಂತರಿಸಲು ಗೋವಾ ಅರಣ್ಯ ಇಲಾಖೆ ನಿರ್ಣಯಿಸಿದೆ. ಈ 22 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿ ಅವರ ಜಾನುವಾರುಗಳನ್ನು ಕೂಡ ಸ್ಥಳಾಂತರಿಸಲು ಸಜ್ಜಾಗಿದೆ.

Advertisement

ಗೋವಾದ ಸತ್ತರಿ ತಾಲೂಕಿನ ಸುರ್ಲಾ, ಸಾಟ್ರೆ, ಗೋಳಾವಲಿ, ಠಾಣೆ ಗ್ರಾಮಗಳ 12 ಕುಟುಂಬಗಳನ್ನು ಮೊದಲು ಬೇರೆಡೆ ಸ್ಥಳಾಂತರಿಸಲಾಗುವುದು. ಇನ್ನುಳಿದ ಕುಟುಂಬಗಳನ್ನು ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು ಎಂದು ಮುಖ್ಯ ವನಪಾಲಕ ಸಂತೋಷಕುಮಾರ್‌ ತಿಳಿಸಿದ್ದಾರೆ.

ಮಹದಾಯಿ ಅಭಯಾರಣ್ಯದಲ್ಲಿ ಹುಲಿಗಳ ರಕ್ಷಣೆಗೆ ಹೆಚ್ಚಿನ ಭದ್ರತೆ ಕಲ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ 5 ಲಕ್ಷ ವೆಚ್ಚದಲ್ಲಿ 60 ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾಗಿದೆ. ಅಭಯಾರಣ್ಯದಲ್ಲಿ ಯಾವುದೇ ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಕಾರಣ ಈ ಮೊಬೈಲ್‌ಗೆ ವಿಶೇಷ ಸಾಫ್ಟ್ವೇರ್‌ ಇರುವ ಚಿಪ್‌ ಅಳವಡಿಸಲಾಗುವುದು ಎಂದು ತಿಳಿಸಿದರು.

ಕೆಲ ದಿನಗಳ ಹಿಂದೆ ಮಹದಾಯಿ ಅಭಯಾರಣ್ಯದಲ್ಲಿ ಸ್ಥಳೀಯ ನಿವಾಸಿಗಳು ವಿಷ ಹಾಕಿ ನಾಲ್ಕು ಹುಲಿಗಳನ್ನು ಕೊಂದ ಘಟನೆ ನಡೆದಿತ್ತು. ತಮ್ಮ ಜಾನುವಾರುಗಳ ರಕ್ಷಣೆಗಾಗಿ ಕೃತ್ಯವೆಸಗಿರುವುದನ್ನು ಸ್ಥಳೀಯರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಭಯಾರಣ್ಯ ಪರಿಸರದಲ್ಲಿರುವ ಕುಟುಂಬಗಳ ಸ್ಥಳಾಂತರಕ್ಕೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next