Advertisement

ಜಯದೇವ ಶ್ರೀ ಸ್ಮರಣೋತ್ಸವಕ್ಕೆ ಸಿದ್ಧತೆ

01:11 PM Mar 28, 2017 | |

ದಾವಣಗೆರೆ: ನಗರದ ಶಿವಯೋಗಾಶ್ರಮದಲ್ಲಿ ನಡೆಯಲಿರುವ ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 60ನೇ ಸ್ಮರಣೋತ್ಸವದ ಸಿದ್ದತೆ ಭರದಿಂದ ಸಾಗಿದ್ದು, ಸ್ಮರಣೋತ್ಸವ ಅಂಗವಾಗಿ ಈಗಾಗಲೇ ಶ್ರೀಜಯದೇವ ಲೀಲೆ ಪ್ರವಚನ ಹಾಗೂ ಜನಜಾಗೃತಿ ಪಾದಯಾತ್ರೆ ಆರಂಭವಾಗಿದೆ ಎಂದು ವಿರಕ್ತ ಮಠದ ಶ್ರೀಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ. 

Advertisement

ಸೋಮವಾರ ಸುದ್ದಿಗೋಷ್ಟಿಯಲ್ಲಿ ಸ್ಮರಣೋತ್ಸವದ ಮಾಹಿತಿ ನೀಡಿದ ಅವರು, 30ರಂದು ಸಂಜೆ 7ಕ್ಕೆ ಸುಗಮ ಸಂಗೀತ, 31ರಂದು ಬೆಳಿಗ್ಗೆ 7-15ಕ್ಕೆ ಬಸವತತ್ವ ಧ್ವಜಾರೋಹಣ, 7-30ಕ್ಕೆ ಸಹಜ ಶಿವಯೋಗ, 10-30ಕ್ಕೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ಸಂಜೆ 6-30ಕ್ಕೆ ಮಹಾನ್‌ ಸಾಧಕರ ಸಮಾವೇಶ ನಡೆಯಲಿದ್ದು, ಇದೇ ವೇಳೆ ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರು ಜಯದೇವ ಶ್ರೀ ಮತ್ತು ಶೂನ್ಯಪೀಠ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು. 

ಮಾ.1ರಂದು ಬೆಳಿಗ್ಗೆ 7-30ಕ್ಕೆ ಸಹಜ ಶಿವಯೋಗ, 9-45ಕ್ಕೆ ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ, ಸಂಜೆ 6-30ಕ್ಕೆ ಚಿಂತನ-ಮಂಥನ, ಪ್ರತಿಭಾವಂತ  ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಜರುಗಲಿದೆ. 2ರಂದು ಬೆಳಿಗ್ಗೆ 7-30ಕ್ಕೆ ಸಹಜ ಶಿವಯೋಗ, 9-30ಕ್ಕೆ ಉಚಿತ ಆರೋಗ್ಯ ತಪಾಸಣೆ ಹಾಗು ಔಷಧಿ ವಿತರಣೆ, ಸಂಜೆ 6-30ಕ್ಕೆ ಚಿಂತನ-ಮಂಥನ ಏರ್ಪಡಿಸಲಾಗಿದೆ.

ಯುಗಾದಿ ಹಬ್ಬದ ಹಿನ್ನೆಲೆಯಲಇ ಜಮುರಾ ನಾಟಕೋತ್ಸವ ಮಾ. 3 ಹಾಗೂ 4ರಂದು ಏರ್ಪಡಿಸಲಾಗಿದೆ ಎಂದು ಅವರು ಸ್ಮರಣೋತ್ಸವದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಎಂ.ಜಯಕುಮಾರ್‌, ಹಾಸಭಾವಿ ಕರಿಬಸಪ್ಪ, ಪಲ್ಲಾಗಟ್ಟೆ ಕೊಟ್ರೇಶ್‌, ವೀರೇಂದ್ರ, ಬೆಳ್ಳೊಡಿ ಮಂಜುನಾಥ್‌, ಸಂಗಪ್ಪ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next