Advertisement

ಚಂದ್ರಯಾನ-2ಕ್ಕೆ ಸಿದ್ಧತೆ

06:20 AM Oct 26, 2017 | Harsha Rao |

ಹೊಸದಿಲ್ಲಿ: ಚಂದ್ರಯಾನ-2ಕ್ಕೆ ಇಸ್ರೋ ತಯಾರಿ ನಡೆಸಿದ್ದು, ಅಂತಿಮ ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. 2018ರ ಮಾರ್ಚ್‌ನಲ್ಲಿ 2ನೇ ಚಂದ್ರಯಾನ ನಡೆಸಲು ನಿರ್ಧರಿಸಲಾಗಿದೆ. ಚಂದ್ರನ ಮೇಲೆ ಇಳಿಯಲಿರುವ ಲ್ಯಾಂಡರ್‌ ಮತ್ತು ರೋವರ್‌ ಪರೀಕ್ಷೆ ನಡೆಯುತ್ತಿದೆ. ಒಂಬತ್ತು ವರ್ಷಗಳ ಹಿಂದೆ ನಡೆಸಿದ ಮೊದಲನೇ ಚಂದ್ರಯಾನಕ್ಕಿಂತ ಸುಧಾರಿತ ರೀತಿಯಲ್ಲಿ ಈ ಬಾರಿ ನಡೆಸಲು ನಿರ್ಧರಿಸಲಾಗಿದೆ. ಇದು ಮೂರು ವಿಧವಾದ ಆರ್ಬಿಟರ್‌, ಲ್ಯಾಂಡರ್‌ ಮತ್ತು ರೋವರ್‌ ಅನ್ನು ಒಳಗೊಂಡಿರುತ್ತದೆ.

Advertisement

1ನೇ ಚಂದ್ರಯಾನದಲ್ಲಿ ಕ್ರ್ಯಾಶ್‌ ಲ್ಯಾಂಡ್‌ ಮಾಡಲಾಗಿತ್ತು. ಆದರೆ ಈ ಬಾರಿ ಸಾಫ್ಟ್ ಲ್ಯಾಂಡ್‌ ಮಾಡಲಾಗುತ್ತದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಅಂದರೆ ಚಂದ್ರನ ಮೇಲ್ಪದರ ಸಮೀಪಿಸುತ್ತಿದ್ದಂತೆಯೇ ಲ್ಯಾಂಡರ್‌ ವೇಗ ನಿಧಾನಗೊಳಿಸಲಾಗುತ್ತದೆ. ಇದರಿಂದ ಲ್ಯಾಂಡರ್‌ನ ಭಾಗಗಳಿಗೆ ಹಾನಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಇನ್ನೊಂದೆಡೆ ರೋವರ್‌ ಪರೀಕ್ಷೆಯೂ ನಡೆಯುತ್ತಿದ್ದು, ಇಳಿಯುವಾಗ ಚಂದ್ರನ  ಮೇಲ್ಪದರದ ಮಣ್ಣಿಗೆ ಚಕ್ರಗಳು ಹೊಂದಿ ಕೊಳ್ಳುವಂತೆ ಮಾರ್ಪಡಿಸಲಾಗುತ್ತಿದೆ. ಚಂದ್ರ ಯಾನ 1ರಲ್ಲಿ ಅನಿಯಂತ್ರಿತ ವಿಧಾನದಲ್ಲಿ ಸಂಶೋಧನೆ ನಡೆಸಲಾಗಿತ್ತು. ಆದರೆ ಈ ಬಾರಿ ರೇಡಿಯೋ ತರಂಗಗಳ ಮೂಲಕ ರೋವರ್‌ ಜತೆಗೆ ಸಂಪರ್ಕ ಸಾಧಿಸಲಾಗುತ್ತದೆ. ಲ್ಯಾಂಡರ್‌ನಿಂದ ರೋವರ್‌ ಹೊರಬಂದು ಮಾದರಿಗಳನ್ನು ಸಂಗ್ರಹಿಸಲಿದೆ ಮತ್ತು ಹಲವು ಅಧ್ಯಯನ  ನಡೆಸಲು ರೇಡಿಯೋ ತರಂಗಗಳ ಸಂಕೇತ ರವಾನಿಸಲಾಗುತ್ತದೆ. ಹಲವು ಮಹತ್ವದ ಸಂಶೋಧನೆಗಳನ್ನು ಈ ಬಾರಿ ನಡೆಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next