ಚಿಂಚೋಳಿ: ತಾಲೂಕಿನಲ್ಲಿ ಕಳೆದ ವರ್ಷ ಸಾಕಷ್ಟು ಮಳೆ ಸುರಿದ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸಾಕಷ್ಟು ಬೆಳೆ ಹಾನಿ, ಆಸ್ತಿಪಾಸ್ತಿ ಹಾನಿಯಾಗಿದ್ದಲ್ಲದೇ ಜಾನುವಾರುಗಳು ಮೃತಪಟ್ಟಿದ್ದವು. ಆದ್ದರಿಂದ ಪ್ರಸಕ್ತ ವರ್ಷ ಮಳೆಗಾಲದಲ್ಲಿ ಎಲ್ಲ ಇಲಾಖೆ ಅ ಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡು ಯಾವುದೇ ಹಾನಿ ಉಂಟಾಗದಂತೆ ಎಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕೆಂದು ಶಾಸಕ ಡಾ| ಅವಿನಾಶ ಜಾಧವ ಅ ಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಳೆಗಾಲದ ನಿಮಿತ್ತ ನೈಸರ್ಗಿಕ ವಿಪತ್ತು ನಿರ್ವಹಣೆಯ ಮುಂಜಾಗ್ರತೆ ಕುರಿತು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿ ಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಅಕ್ಟೋಬರ್-ಸೆಪ್ಟೆಂಬರ್ ತಿಂಗಳಲ್ಲಿ ಧಾರಾಕಾರ ಮಳೆ ಆಗಿದ್ದರಿಂದ ಹೂಡದಳ್ಳಿ, ನಾಗಾಇದಲಾಯಿ, ಅರಣಕಲ್ ಕೆರೆಗಳ ಒಡ್ಡು ಒಡೆದು ಹೋಗಿತ್ತು. ದೋಟಿಕೊಳ ಕೆರೆ ಭಾಗಶಃ ಹಾನಿಯಾಗಿತ್ತು.
ಈ ವರ್ಷ ಯಾವುದೇ ರೀತಿಯಲ್ಲಿ ಹಾನಿ ಆಗದಂತೆ ಅಧಿ ಕಾರಿಗಳು ಎಚ್ಚರ ವಹಿಸಬೇಕಿದೆ. ಅರಣಕಲ್, ನಾಗಾಇದಲಾಯಿ ಗ್ರಾಮದ ಒಡೆದು ಹೋಗಿರುವ ಕೆರೆ ದುರಸ್ತಿ ಕಾರ್ಯ ನಡೆಯುತ್ತಿದೆ. ಹೂಡದಳ್ಳಿ, ದೋಟಿಕೋಳ ಕೆರೆ ನಿರ್ಮಾಣಕ್ಕಾಗಿ ಅನುದಾನ ಬರಲಿದೆ. ವಿಪತ್ತು ನಿರ್ವಹಣೆಯಲ್ಲಿ ಅ ಧಿಕಾರಿಗಳ ಸಹಕಾರ ಮುಖ್ಯವಾಗಿದೆ ಎಂದರು. ಮುಲ್ಲಾಮಾರಿ ನದಿಗೆ ನಿರ್ಮಿಸಿದ ಎಲ್ಲ ಬ್ಯಾರೇಜುಗಳ ಗೇಟ್‌ಗಳನ್ನು ತೆರೆಯಲಾಗಿದೆ. ಹೂಡದಳ್ಳಿ, ದೋಟಿಕೊಳ ಕೆರೆಗೆ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಎಇಇ ಶಿವಶರಣಪ್ಪ ಕೇಶ್ವರ ತಿಳಿಸಿದರು.
ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಮಾತನಾಡಿ, ಮಳೆಯಿಂದ ಬೆಳೆ ಹಾನಿಗೊಳಗಾದ 18,274 ರೈತರ ಪೈಕಿ 16,582 ರೈತರ ಒಟ್ಟು 12.14ಕೋಟಿ ರೂ. ಖಾತೆಗೆ ಪರಿಹಾರ ಜಮೆ ಮಾಡಲಾಗಿದೆ. ಜೀವ ಹಾನಿ, ಜಾನುವಾರು ಹಾನಿ, ಮನೆ ಹಾನಿ, ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಒಟ್ಟು 2.79 ಕೋಟಿ ರೂ. ಪರಿಹಾರ ಸರ್ಕಾರದಿಂದ ಬಂದಿದೆ ಎಂದರು. ಸಹಾಯಕ ಕೃಷಿ ಅಧಿ ಕಾರಿ ಅನಿಲಕುಮಾರ ರಾಠೊಡ ಮಾತನಾಡಿ, ಮುಲ್ಲಾಮಾರಿ ನದಿ ಪ್ರವಾಹದಿಂದ ಉಂಟಾದ ರೈತರ ಬೆಳೆ ಹಾನಿಯಾದ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿದರು. ಪಿಆರ್‌ಐ ಎಇಇ ಮಹಮ್ಮದ್ ಅಹೆಮದ್ ಹುಸೇನ, ಲೋಕೋಪಯೋಗಿ ಇಲಾಖೆ ಎಇಇ ಗುರುರಾಜ ಜೋಶಿ ಮಾತನಾಡಿ, ತಾಲೂಕಿನಲ್ಲಿ ರಸ್ತೆ ಸೇತುವೆ ಕಟ್ಟಡಗಳು ಮಳೆಯಿಂದ ಹಾನಿಯಾಗಿರುವ ಕುರಿತು ಜಿಲ್ಲಾ ಧಿಕಾರಿಗೆ ವರದಿ ಸಲ್ಲಿಸಲಾಗಿದೆ.
ಆದರೆ ಜಿಲ್ಲಾಧಿ ಕಾರಿಗಳು ಇಲಾಖೆಗೆ ನೈಸರ್ಗಿಕ ವಿಕೋಪ ಪರಿಹಾರ ನೀಡಿಲ್ಲವೆಂದು ಶಾಸಕರ ಗಮನಕ್ಕೆ ತಂದರು. ಡಿವೈಎಸ್ಪಿ ಬಸವೇಶ್ವರ ಹೀರಾ, ತಾಲೂಕು ಆರೋಗ್ಯಾಧಿ ಕಾರಿ ಡಾ| ಮಹ ಮ್ಮದ್ ಗಫಾರ ಅಹೆಮದ್, ಡಾ| ಧನರಾಜ ಬೊಮ್ಮ, ಎಇಇ ಹಣಮಂತರಾವ್ ಪೂಜಾರಿ, ಬಿಇಒ ನಾಗೇಶ ಬಧ್ರಶೆಟ್ಟಿ, ಪ್ರಭುಲಿಂಗ ಬುಳ್ಳ, ಮುಖ್ಯಾಧಿ ಕಾರಿ ಚಂದ್ರಕಾಂತ ಪಾಟೀಲ, ಜೆಇ ದೇವೇಂದ್ರಪ್ಪ ಕೋರವಾರ, ಸಿಪಿಐ ಮಹಾಂತೇಶ ಪಾಟೀಲ ಇನ್ನಿತರ ಇಲಾಖೆ ಅ ಧಿಕಾರಿಗಳು ಭಾಗವಹಿಸಿದ್ದರು. ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಸ್ವಾಗತಿಸಿದರು.