Advertisement

ನೆರೆ ಎದುರಿಸಲು ಸನ್ನದ್ಧರಾಗಿ

07:24 PM Sep 19, 2020 | Suhan S |

ಬೀದರ: ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಅವಾಂತರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿ, ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗೆ ಸ್ಪಂದಿಸಬೇಕು ಮತ್ತು ಮಳೆಯಿಂದಾಗುವ ಸಮಸ್ಯೆ ಎದುರಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಸೂಚಿಸಿದ್ದಾರೆ.

Advertisement

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಬೀದರ ನಗರ ಸೇರಿ ಇಡೀ ಜಿಲ್ಲೆಯ ಚಿತ್ರಣವನ್ನೇ ಬದಲಿಸಿದೆ. ಭಾಲ್ಕಿ ತಾಲೂಕಿನಲ್ಲಿ ಇಬ್ಬರು ಮತ್ತು ಬೀದರನಲ್ಲಿ ಒಬ್ಬರು ಸೇರಿ ಜಿಲ್ಲೆಯಲ್ಲಿ ಈವರೆಗೆ ಮೂವರು ಬಲಿಯಾಗಿದ್ದಾರೆ. ಬೆಳೆ ಹಾನಿ, ಜತೆಗೆ ಮರ, ಕಂಬಗಳು ನೆಲಕ್ಕುರುಳಿವೆ. ಮಳೆಯಿಂದ ಮೃತಪಟ್ಟ ಜಾನುವಾರುಗಳು, ಬಿದ್ದ ಮನೆಗಳು, ಹಾಳಾದ ಸೇತುವೆಗಳು, ಬೆಳೆ ಹಾಳಾದ ಜಮೀನಿನ ನಿಖರ ಮಾಹಿತಿಗಾಗಿ ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ ಎಂದು “ಉದಯವಾಣಿ’ಗೆ ತಿಳಿಸಿದರು.

ಮಹಾರಾಷ್ಟ್ರದ ಲಾತೂರ ಮತ್ತುಉಸ್ಮಾನಾಬಾದ್‌ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತೇರನಾ,ಧನೆಗಾಂವ ಮತ್ತು ಇನ್ನಿತರ ನೀರಾವರಿಅಣೆಕಟ್ಟೆಗಳು ಬಹುತೇಕ ಭರ್ತಿ ಆಗಿರುವುದರಿಂದ ಮಾಂಜ್ರಾ ನದಿಗೆ ನೀರು ಬಿಡಲಾಗಿದೆ. ಹಾಗೂ ಮುಂದೆ ಮಳೆ ಕಡಿಮೆಯಾಗದೇ ಸದರಿ ಜಲಾಶಯಗಳಲ್ಲಿನ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದ್ದಲ್ಲಿ ಇನ್ನಷ್ಟು ನೀರು ನದಿಗೆ ಹರಿಸಲಾಗುವುದು ಎಂದುಮುನ್ಸೂಚನೆ ನೀಡಲಾಗಿದೆ. ಆದ್ದರಿಂದ ಮಾಂಜ್ರಾ ನದಿ ಪಾತ್ರದ ಗ್ರಾಮಗಳ ಗ್ರಾಮಸ್ಥರು ನದಿಗೆ ಇಳಿಯದಂತೆ ಹಾಗೂ ಜಾನುವಾರುಗಳು ನದಿ ದಡದತ್ತ ಹೋಗದಂತೆ ನೋಡಿಕೊಳ್ಳಬೇಕು. – ಆರ್‌. ರಾಮಚಂದ್ರನ್‌, ಡಿಸಿ

Advertisement

Udayavani is now on Telegram. Click here to join our channel and stay updated with the latest news.

Next