Advertisement

3ನೇ ಅಲೆ ಎದುರಿಸಲು ಸರ್ವಸನ್ನದ್ಧರಾಗಿ

09:23 PM Jul 03, 2021 | Team Udayavani |

ಗದಗ: ಕೋವಿಡ್‌ ಸೋಂಕಿನ ಸಂಭವನೀಯ 3ನೇ ಅಲೆ ಎದುರಾದಲ್ಲಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಸರ್ವಸನ್ನದ್ಧರಾಗುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್‌ ನಿಯಂತ್ರಣ ಕುರಿತು ನಡೆದ ತಾಲೂಕು ಮಟ್ಟದ ಅಧಿ ಕಾರಿಗಳ ವಿಡಿಯೋ ಕಾನ್ಸಫರೆನ್ಸ್‌ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿನ ತೀರ್ವ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಆಯಾ ತಾಲೂಕಿನಲ್ಲಿ ಗುರುತಿಸಲಾದ ಕೇಂದ್ರಗಳಲ್ಲಿ 14 ದಿನಗಳ ಕಾಲ ಮಕ್ಕಳೊಂದಿಗೆ ಮಗುವಿನ ತಾಯಿ ಕೇಂದ್ರದಲ್ಲಿದ್ದು, ಅಪೌಷ್ಟಿಕತೆ ನಿವಾರಣೆಗೆ ನೀಡುವ ಪೌಷ್ಟಿಕ ಆಹಾರ ಹಾಗೂ ವೈದ್ಯರು ನೀಡುವ ಸಲಹೆಗಳನ್ನು ಸರಿಯಾಗಿ ಪಾಲಿಸಬೇಕು. ಈ ಬಗ್ಗೆ ತಾಲೂಕು ಆಡಳಿತಗಳು ನಿಗಾ ವಹಿಸಬೇಕು ಎಂದರು. ಶಿಶು ಅಭಿವೃದ್ಧಿ ಅಧಿ ಕಾರಿಗಳು ಆಯಾ ತಾಲೂಕುಗಳ ಪಾಲನಾ ಕ್ಯಾಂಪ್‌ನಲ್ಲಿ ಕುಡಿಯುವ ನೀರು, ಆರೋಗ್ಯಯುಕ್ತ ಆಹಾರದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರ ಮತ್ತು ಮೇಲ್ವಿಚಾರಕರ ತಂಡ ರಚಿಸಿ ಕ್ಯಾಂಪ್‌ಗ್ಳಲ್ಲಿ ಪೌಷ್ಟಿಕ ಆಹಾರ ತಯಾರಿಕೆ, ಮಕ್ಕಳ ಕಾಳಜಿ ವಹಿಸುವಂತೆ ಸಂಬಂಧಿ ಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಎನ್‌ಆರ್‌ಸಿ ಸೂಚನೆಯಂತೆ ಕ್ಯಾಂಪ್‌ನಲ್ಲಿರುವ ಮಕ್ಕಳಿಗೆ ಉಚಿತ ಔಷಧ ಮತ್ತು ಅವರಿಗೆ ಅಗತ್ಯ ಆರೋಗ್ಯ ಕಿಟ್‌, ಮೂಲಭೂತ ವಸ್ತುಗಳ ಕಿಟ್‌ ಒದಗಿಸಬೇಕು ಎಂದರು.

ಆರೋಗ್ಯ ಇಲಾಖೆ ತೀವ್ರಗತಿಯಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಪಾಲಕರಿಗೆ ಉಚಿತವಾಗಿ ಮಾಸ್ಕ್ ಮತ್ತು ಅಗತ್ಯ ಔಷ ಧಗಳನ್ನು ನೀಡಬೇಕು. ಅವರಿಗೆ ಕ್ಯಾಂಪ್‌ನಲ್ಲಿ ಯೋಗ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಕ್ಯಾಂಪ್‌ನಲ್ಲಿ ಉತ್ತಮ ವಾತಾವರಣ ನಿರ್ಮಿಸಬೇಕು. ಕ್ಯಾಂಪ್‌ಗೆ ಆಯಾ ತಾಲೂಕುಗಳ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಯಾನಿಟೈಸ್‌ ಮಾಡಿಸಿ, ಭೇಟಿ ನೀಡಿ ಅವರಲ್ಲಿ ಧೈರ್ಯ ತುಂಬಿ, ಮೇಲ್ವಿಚಾರಣೆ ಮಾಡಬೇಕು. ಆಹಾರದಲ್ಲಿ ಸಿರಿಧಾನ್ಯ ಬಳಸಿ ಅವರ ಪೌಷ್ಟಿಕತೆಯ ಮಟ್ಟ ವೃದ್ಧಿಗೊಳಿಸುವಲ್ಲಿ ಆಯುಷ್‌ ಇಲಾಖೆ ಕೈಜೋಡಿಸಬೇಕು. ಕೋವಿಡ್‌ ಕ್ಯಾಂಪ್‌ಗ್ಳಲ್ಲಿ ಸ್ವತ್ಛತಾ ಪರಿಸರ, ಸುಚಿಯಾದ ಊಟ, ಅಗತ್ಯವಿದ್ದಲ್ಲಿ ಕುಡಿಯಲು ಬಿಸಿ ನೀರು ಒದಗಿಸಬೇಕೆಂದು ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ ಎ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 243 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆಯಾ ತಾಲ್ಲುಕುಗಳಲ್ಲಿ ತೆರೆಯಲಾದ ಕೇಂದ್ರಗಳಲ್ಲಿ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಗದಗ 24, ಮುಂಡರಗಿಯಲ್ಲಿ 14, ರೋಣ 14, ನರಗುಂದ 22, ಶಿರಹಟ್ಟಿ 14, ಲಕ್ಷ್ಮೇಶ್ವರ 24 ಮಕ್ಕಳು ಆಗಮಿಸಿದ್ದು, ಪೌಷ್ಟಿಕ ಆಹಾರ ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಂತರದಲ್ಲಿ ಇನ್ನುಳಿದ ಮಕ್ಕಳಿಗೂ ಪೌಷ್ಟಿಕ ಆಹಾರ ನೀಡಲಾಗುವುದು ಎಂದರು. ಜಿಲ್ಲಾ ಆರ್‌ಸಿಎಚ್‌ ಅಧಿ ಕಾರಿ ಡಾ.ಬಿ.ಎಂ. ಗೋಜನೂರ ಮಾತನಾಡಿ, ಜಿಲ್ಲೆಗೆ ಹಂಚಿಕೆಯಾಗುತ್ತಿರುವ ಲಸಿಕೆಗನುಗುಣವಾಗಿ ಸಮರ್ಪಕವಾಗಿ ತಾಲೂಕು ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲಾಗುತ್ತಿದೆ. ಹೆಚ್ಚಿನ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ. ಆದ್ಯತಾ ಗುಂಪುಗಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರೆಗೆ ಶೇ.33 ರಷ್ಟು ಲಸಿಕಾಕರಣವಾಗಿದೆ ಎಂದು ಮಾಹಿತಿ ನೀಡಿದರು.

Advertisement

ಜಿಲ್ಲಾ ಸಮೀಕ್ಷಣಾಧಿ ಕಾರಿ ಡಾ.ಜಗದೀಶ್‌ ನುಚ್ಚಿನ ಮಾತನಾಡಿ, ಜಿಲ್ಲೆಯಲ್ಲಿ 0-18 ವಯೋಮಾನದ ಮಕ್ಕಳ ಪೈಕಿ ಗದಗ ತಾಲೂಕಿನಲ್ಲಿ 1072 ಸೋಂಕು ದೃಢವಾಗಿದ್ದು, ಅದರಲ್ಲಿ ಪ್ರಕರಣಗಳು 11 ಸಕ್ರಿಯವಾಗಿವೆ. ಮುಂಡರಗಿಯಲ್ಲಿ 323 ಮಕ್ಕಳು ಸೋಂಕಿತರಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1, ರೋಣದಲ್ಲಿ 393 ಮಕ್ಕಳು ಸೋಂಕಿಗೆ ಒಳಗಾಗಿದ್ದು, ಅದರಲ್ಲಿ ಸಕ್ರಿಯ ಪ್ರಕರಣ 1, ಶಿರಹಟ್ಟಿಯಲ್ಲಿ 374 ಮಕ್ಕಳು ಸೋಂಕಿತರಿದ್ದು, ಸಕ್ರಿಯ ಪ್ರಕರಣ 2 ಆಗಿದೆ. ಒಟ್ಟು ಜಿಲ್ಲೆಯ ಕೋವಿಡ್‌ ಸೋಕಿಂತ ಮಕ್ಕಳ ಪೈಕಿ ಸದ್ಯಕ್ಕೆ 15 ಸಕ್ರೀಯ ಪ್ರಕರಣಗಳಿವೆ ಎಂದರು. ಸಭೆಯಲ್ಲಿ ಜಿಪಂ ಸಿಇಒ ಭರತ್‌ ಎಸ್‌., ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರ್ಯಸೇನ್‌, ಅಪರ ಜಿಲ್ಲಾ ಧಿಕಾರಿ ಸತೀಶ್‌ ಕುಮಾರ ಎಂ., ಉಪವಿಭಾಗಾ ಧಿಕಾರಿ ರಾಯಪ್ಪ ಹುಣಸಗಿ, ಡಿಎಚ್‌ಒ ಡಾ.ಸತೀಶ್‌ ಬಸರಿಗಿದಡ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗುರುಪ್ರಸಾದ, ನಗರಸಭೆ ಪೌರಾಯುಕ್ತ ರಮೇಶ ಜಾಧವ್‌, ಸೇರಿದಂತೆ ಆಯಾ ತಾಲೂಕುಗಳ ತಹಶೀಲ್ದಾರ್‌ರು, ತಾಪಂ ಇಒಗಳು, ವಿವಿಧ ಇಲಾಖೆ ಅಧಿ ಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next