ವಿಜಯಪುರ: ಜಿಲ್ಲೆಯ ಭವಿಷ್ಯದಲ್ಲಿ ಸಂಭವನೀಯ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಎಲ್ಲ ಅಧಿ ಕಾರಿಗಳು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾ ಕಾರಿ ಪಿ.ಸುನೀಲಕುಮಾರ ಅಧಿ ಕಾರಿಗಳಿಗೆ ಸೂಚಿಸಿದ್ದಾರೆ. ಸೋಮವಾರ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಪ್ರಸಕ್ತ ವರ್ಷ ಸಂಭವನೀಯ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ಎದುರಿಸುವ ಕುರಿತು ನಡೆದ ಅ ಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಭೀಮಾ, ದೋಣಿ ನದಿ ಪ್ರವಾಹ ಸೃಷ್ಟಿಸುವ ಸಂಭವನೀಯ ಸ್ಥಿತಿ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಬೇಕು. ಮಹಾರಾಷ್ಟ್ರ ರಾಜ್ಯದಿಂದ ಕೃಷ್ಣಾ ಮತ್ತು ಭೀಮಾ ನದಿಗಳಿಗೆ ಹರಿದು ಬರುವ ನೀರಿನ ಬಗ್ಗೆ ನಿರಂತರ ನಿಗಾ ಇಡಬೇಕು. ಆಲಮಟ್ಟಿಯ ಶಾಸ್ತ್ರಿ ಸಾಗರ, ಭೀಮೆಯ ಸೊನ್ನ ಬ್ಯಾರೇಜ್ ವ್ಯಾಪ್ತಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆ ಮಾಡಬೇಕು.
ಸೊನ್ನ ಬ್ಯಾರೇಜ್ 29 ಗೇಟ್‌ಗಳೂ ಸುಸ್ಥಿತಿ ಇರುವ ಬಗ್ಗೆ ಇಂಡಿ ಉಪ ವಿಭಾಗಾ ಧಿಕಾರಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಜಲಾಶಯ ಒಳ-ಹೊರ ಹರಿವಿನ ಬಗ್ಗೆ ಕ್ಷೇತ್ರವ್ಯಾಪ್ತಿ, ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಸೂಕ್ತ ನೀಲನಕ್ಷೆ ಸಿದ್ಧಪಡಿಸಿಕೊಳ್ಳಬೇಕು. ಪ್ರವಾಹ ನಿಭಾಯಿಸಬೇಕಾದ ಕ್ರಮಗಳ ಬಗ್ಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಂಡು, ಜಿಲ್ಲಾಡಳಿತಕ್ಕೆ ಸಿದ್ಧತಾ ವರದಿ ಸಲ್ಲಿಸುವಂತೆ ಅಧಿ ಕಾರಿಗಳಿಗೆ ಸೂಚಿಸಿದರು. ಅತಿವೃಷ್ಟಿ, ಪ್ರವಾಹ ನಿರ್ವಹಣೆಗೆ ಯೋಜನೆ ರೂಪಿಸಿಕೊಳ್ಳಬೇಕು. ಸಂಬಂಧಿ ಸಿದ ಅ ಧಿಕಾರಿಗಳು ತುರ್ತು ಸಂದರ್ಭದಲ್ಲಿ ಸಕ್ರಿಯ ವಾಗಿ ಕಾರ್ಯನಿರ್ವಹಿಸಲು ಮತ್ತು ವಿವಿಧ ಇಲಾಖೆ ಅ ಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸನ್ನದ್ಧಗೊಳ್ಳಬೇಕು. ಯಂತ್ರ-ಮಾನವ ಚಾಲಿತ ಬೋಟ್ ಸನ್ನದ್ಧವಾಗಿ ಇಟ್ಟುಕೊಳ್ಳಬೇಕು.
ಜನರ ಪ್ರಾಣ ರಕ್ಷಣೆಗೆ ಲೈಫ್ ಜಾಕೆಟ್, ನುರಿತ ಈಜುಗಾರರು, ತುರ್ತು ಸಲಕರಣೆಗಳನ್ನು ಮುಂಚಿತವಾಗಿಯೇ ಸಿದ್ಧವಾಗಿಟ್ಟುಕೊಳ್ಳಬೇಕು. ರಕ್ಷಣಾ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಸಿದ್ಧತೆಗಳನ್ನು ಮುಂಚಿತವಾಗಿಯೇ ಮಾಡಿಕೊಳ್ಳಬೇಕು. ಆಯಾ ತಾಲೂಕು ಮಟ್ಟದ ತಹಶೀಲ್ದಾರ್‌ರು ಸೇರಿದಂತೆ ಸಂಬಂ ಧಿಸಿದ ಇಲಾಖೆ ಅ ಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಡೋಣಿ ನದಿಗೆ ಹೆಚ್ಚಿನ ನೀರು ಬರುವ ಮೊದಲು ಜಿಲ್ಲೆಯ ಅ ಧಿಕಾರಿಗಳು ನದಿ ಪಾತ್ರ ಇರುವ ಬೆಳಗಾವಿ ಜಿಲ್ಲೆಯ ಅಥಣಿ ತಹಶೀಲ್ದಾರ್‌ರೊಂದಿಗೆ ಪ್ರತಿ ದಿನ ಮಳೆ ನೀರಿನ ಪ್ರಮಾಣದ ಮಾಹಿತಿ ಪಡೆದು ಸಂಗ್ರಹಿಸಬೇಕು. ಬ್ರಿಡ್ಜ್, ಕಲ್ವರ್ಟ್ ವ್ಯಾಪ್ತಿಯಲ್ಲಿ ನೀರಿನ ಹರಿವಿಗೆ ತೊಡಕಾಗಿರುವ ಮುಳ್ಳುಕಂಟಿಗಳನ್ನು ತೆರವು ಮಾಡಬೇಕು. ನೀರು ಕುಡಿಯುವ ನೀರಿಗೆ ಚರಂಡಿ ನೀರು ಸೇರದಂತೆ ನೋಡಿಕೊಳ್ಳಬೇಕು.
ಪ್ರವಾಹದಿಂದ ಸಂಭವನೀಯ ಬಾಧಿ ತ ಸ್ಥಳಗಳ ಬಗ್ಗೆ ಮೊದಲೇ ಗುರುತಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಕೃಷ್ಣಾ ನದಿ ಪ್ರವಾಹದಂತೆ ಭೀಮಾ ನದಿ ಪ್ರವಾಹ ನಿರ್ವಹಣೆಗೂ ವಿಶೇಷ ಗಮನ ನೀಡಬೇಕು. ಮಹಾರಾಷ್ಟ್ರ ರಾಜ್ಯದೊಂದಿಗೆ ಜಿಲ್ಲೆಯ ಅ ಧಿಕಾರಿಗಳು ನಿರಂತರ ಸಂಪರ್ಕ ಇರಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ರವಾಹ ಬಂದಲ್ಲಿ ಸೂಕ್ತ ರೀತಿಯಲ್ಲಿ ನಿರ್ವಹಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿ ದರು. ಅಪರ ಜಿಲ್ಲಾ ಧಿಕಾರಿ ರಮೇಶ ಕಳಸದ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆ ಅ ಧಿಕಾರಿಗಳು ಇದ್ದರು.