Advertisement

ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿ

09:05 AM Jul 27, 2020 | Suhan S |

ಚಾಮರಾಜನಗರ: ಮಳೆ ಹಾಗೂ ಜಲಾಶಯಗಳಿಂದ ಹೆಚ್ಚು ನೀರು ಬಿಡುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಥ ನಿಭಾಯಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳಿಗೆ ಸಿದ್ದರಾಗಿರುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಕುರಿತ ಸಭೆಯಲ್ಲಿ ಮಾತನಾಡಿ, ಪ್ರವಾಹ ಪರಿಸ್ಥಿತಿ ತಲೆದೋರಿದರೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಪೂರ್ವ ಸಿದ್ದತೆಯೊಂದಿಗೆ ಸನ್ನದ್ಧರಾಗಬೇಕು. ಜಲಾಶಯಗಳ ಒಳಹರಿವು, ಹೊರಹರಿವಿನ ಪ್ರಮಾಣದ ಪ್ರತಿನಿತ್ಯ ಮಾಹಿತಿ ಪಡೆಯಬೇಕು. ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣದ ಬಗ್ಗೆ ವರದಿ ಪಡೆಯಬೇಕು. ಜಿಲ್ಲೆಯ ಯಾವುದೇ ಭಾಗಕ್ಕೆ ಪ್ರವಾಹ, ನೆರೆ ಪರಿಸ್ಥಿತಿ ಉಂಟಾಗಬಹುದಲ್ಲಿ ಆ ಕುರಿತ ಸುಳಿವು ಮೊದಲೇ ತಿಳಿದುಕೊಳ್ಳಬೇಕು. ಪೂರ್ವ ಸಿದ್ದತೆಯೊಂದಿಗೆ ಎದುರಿಸಿದಾಗ ಯಾವುದೇ ಅಪಾಯಗಳಿಗೆ ಅವಕಾಶವಾಗುವುದಿಲ್ಲ. ಹೀಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕೆಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌, ಎಸಿಪಿ ಅನಿತಾ, ಉಪವಿಭಾಗಾಧಿಕಾರಿ ನಿಖೀತಾ, ಜಿಪಂ ಉಪ ಕಾರ್ಯದರ್ಶಿ ಧರಣೇಶ್‌, ತಹಶೀಲ್ದಾರ್‌ ಕೆ.ಕುನಾಲ್‌, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ನವೀನ್‌, ಡಿಎಚ್‌ಓ ಡಾ. ಎಂ.ಸಿ.ರವಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next