Advertisement
ಪೊಲೀಸ್ ಠಾಣೆ ಆವರಣದಿಂದ ಬ್ಯಾಂಡ್ ಸಮೇತ್ ಪೊಲೀಸ್ ಪಥ ಸಂಚಲನವನ್ನು ಶಿವಾಜಿ ಸರ್ಕಲ್, ವನಶ್ರೀ ಸರ್ಕಲ್, ಬಸ್ ಸ್ಟ್ಯಾಂಡ್ ರಸ್ತೆ, ಮೇದಾರಗಲ್ಲಿ, ವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ವೃತ್ತ, ಬಜಾರ, ಮುಖ್ಯರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಪಿಎಸೈ ಆನಂದಮೂರ್ತಿ ಸೇರಿದಂತೆ 50ಕ್ಕೂ ಅ ಧಿಕ ಪೊಲೀಸರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಅಲ್ಲದೇ ಪೊಲೀಸ್ ವಾಹಗಳು ಸಹ ಸಾಥ್ ನೀಡಿದವು. ಸಿಪಿಐ ಬಿ.ಎಸ್. ಲೋಕಾಪುರ ಮಾತನಾಡಿ, ಪಥ ಸಂಚಲನದ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸ ನಮ್ಮದಾಗಿದೆ. ಪೊಲೀಸ್ ಪರೇಡ್‌ನಿಂದ ಸಾಮಾನ್ಯ ಜನರಲ್ಲಿ ಉತ್ಸಾಹ ಬರುವುದರ ಜೊತೆಗೆ ನಮ್ಮೊಂದಿಗೆ ಪೊಲೀಸರು ಇದ್ದಾರೆ ಎಂಬ ಭಾವನೆ ಮೂಡುತ್ತದೆ. ಇದರ ಮೂಲಕ ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಜನರು ಆಸಕ್ತಿ ವಹಿಸುತ್ತಾರೆ ಎಂದರು.
Advertisement
ಶಾಂತಿಯುತ- ನ್ಯಾಯಸಮ್ಮತ ಮತದಾನಕ್ಕೆ ತಯಾರಿ
05:11 PM Mar 31, 2019 | Naveen |
Advertisement
Udayavani is now on Telegram. Click here to join our channel and stay updated with the latest news.