Advertisement

ತಾಪಂ-ಜಿಪಂ ಚುನಾವಣೆಗೆ ಭರ್ಜರಿ ತಯಾರಿ: ಎರಡು ಕುಟುಂಬಗಳ ಮಧ್ಯೆ ಕದನ

06:34 PM Aug 25, 2021 | Team Udayavani |

ಹುಮನಾಬಾದ: ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಚುನಾವಣೆ ಕುರಿತು ಚುನಾವಣಾ ಆಯೋಗ ಅಧಿಕೃತವಾಗಿ ದಿನಾಂಕ ಘೋಷಣೆ ಮಾಡುವ ಮುನ್ನವೆ ಹುಮನಾಬಾದ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ಭರ್ಜರಿ ಚುನಾವಣಾ ತಯಾರಿ ನಡೆಸಿವೆ. ಕಳೆದ ನಾಲ್ಕು ದಶಕಗಳಿಂದ ಆಡಳಿತ ನಡೆಸಿದ ಪಾಟೀಲ ಪರಿವಾರದಲ್ಲಿ ಕಳೆದ ಕೆಲ ತಿಂಗಳಿಂದ ರಾಜಕೀಯವಾಗಿ ಬಿರುಕು ಮೂಡಿದ್ದು, ಇದೀಗ ಪಾಟೀಲ ಪರಿವಾರದಲ್ಲಿಯೇ ರಾಜಕೀಯ ಗುದ್ದಾಟ ನಡೆಯಲ್ಲಿದೆ.

Advertisement

ಬಸವಕಲ್ಯಾಣ ಉಪ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡ ಡಾ| ಸಿದ್ದಲಿಂಗಪ್ಪ ಪಾಟೀಲ ಪರಿವಾರ ಹಾಗೂ ಕಾಂಗ್ರೆಸ್‌ ಪಕ್ಷದ ಸ್ಥಳೀಯ ಶಾಸಕ ರಾಜಶೇಖರ ಪಾಟೀಲ ಪರಿವಾರ ಇದೀಗ ಖುದ್ದು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಮುಂದೆ ಬರಲ್ಲಿರುವ ಚುನಾವಣೆಗಳಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸುವ ತಯಾರಿ ನಡೆಸಿದ್ದಾರೆ.

ಶಾಸಕ ರಾಜಶೇಖರ ಪಾಟೀಲ ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಂದ ಕುಂದುಕೊರೆತಗಳನ್ನು ಆಲಿಸಿ ಸಮಸ್ಯೆಗಳು ಬಗೆಹರಿಸುವ ಪ್ರಯತ್ನ ನಡೆಸಿದ್ದಾರೆ. ಇವರಿಗೆ ವಿಧಾನ ಪರಿಷತ್‌ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಭೀಮರಾವ ಪಾಟೀಲ, ಯುವ ಮುಖಂಡ ಅಭಿಷೇಕ್‌ ಪಾಟೀಲ ಪ್ರತೇಕ ತಂಡಗಳು ರಚಿಸಿಕೊಂಡು ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಯಾವುದೇ ಸಮಸ್ಯೆಗಳು ಇದ್ದರೆ ನೇರವಾಗಿ ಬಂದು ಮಾತಾಡುವಂತೆ ಜನರಿಗೆ ಮನವರಿಕೆ ಮಾಡುತ್ತಿದ್ದಾರೆ.

ಬಿಜೆಪಿಯಿಂದ ಯುವ ಮುಖಂಡ ಡಾ| ಸಿದ್ದಲಿಂಗ ಪಾಟೀಲ, ಸಹೋದರ ಸಂತೋಷ ಪಾಟೀಲ ಸೇರಿದಂತೆ ಇತರೆ ಕಾರ್ಯಕರ್ತರ ತಂಡಗಳು ರಚಿಸಿಕೊಂಡು ಹಳ್ಳಿಗಳಲ್ಲಿ ಜನರ ಸಂಪರ್ಕ ಸಾಧಿಸುವ ಕಾರ್ಯ ನಡೆಸಿದ್ದಾರೆ. ಒಂದೇ ಕುಟುಂಬದವರು ಇರುವ ಕಾರಣ ರಾಜಕೀಯ ಲೆಕ್ಕಾಚಾರಗಳು ಪರಸ್ಪರ ಕರಗತವಾಗಿ ಮಾಡಿಕೊಂಡಿದ್ದು, ಚುನಾವಣಾ ಪೂರ್ವದಲ್ಲಿಯೇ ಭರ್ಜರಿ ತಯಾರಿಗಳು ನಡೆಸಿದ್ದಾರೆ.

ಎರಡು ಕುಟುಂಬಗಳ ಮಧ್ಯೆ ಫೈಟ್‌
ಕೆಲ ತಿಂಗಳ ಹಿಂದೆ ನಡೆದ ರಾಜಕೀಯ ಬದಲಾವಣೆ ನಂತರ ಎರೆಡು ಕುಟುಂಬಗಳು ಜನರ ಮಧ್ಯೆ ತೆರಳುತ್ತಿದ್ದು, ನಿರಂತರ ಜನರ ಸಂಪರ್ಕ ಸಾಧಿಸುವಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಬೆಂಬಲಿಗರು ಇಂದಿಗೂ ಕೂಡ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲದಲ್ಲಿ ಇದ್ದಾರೆ. ಸಾಮಾನ್ಯವಾಗಿ ಅಧಿಕಾರದಲ್ಲಿರುವ ಕಡೆಗಳಲ್ಲಿ ಜನರು ಹೆಚ್ಚಿನ ಒಲವು ತೋರುವುದು ಸಾಮಾನ್ಯವಾಗಿದ್ದು, 1999ರಲ್ಲಿ ನಡೆದ ವಿಧನ ಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿ ನಂತರ ಅಧಿಕಾರ ಕಳೆದುಕೊಂಡಿದ್ದು, ನಂತದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಈ ಕ್ಷೇತ್ರದ ಮೇಲೆ ಕಾಂಗ್ರೆಸ್‌ ಪಕ್ಷದ ಪ್ರಭಾವ ಹೆಚ್ಚಿದೆ. ಇದೀಗ ಸಿದ್ದಲಿಂಗಪ್ಪ ಪಾಟೀಲ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಮುಂದೆ ನಡೆಯಲ್ಲಿರುವ ಚುನಾವಣೆಗಳಿಂದ ಪಕ್ಷಗಳ ಬಲಾಬಲ
ಗೊತ್ತಾಗಲ್ಲಿದೆ.

Advertisement

*ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next