Advertisement

Udupi: ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ಧತೆ

10:54 AM Sep 05, 2023 | Team Udayavani |

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ದಿನಗಣನೆ ಆರಂಭವಾಗಿದ್ದು. ಉಡುಪಿ ಶ್ರೀಕೃಷ್ಣ ಮಠದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾಣಿಸಿ ಕೊಳ್ಳುತ್ತಿದ್ದಾರೆ. ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುವ ಉತ್ಸವಕ್ಕೆ ರಥಬೀದಿಯ ಸುತ್ತ ಗುರ್ಜಿ ಹಾಕುವ, ದೀಪಾಲಂಕಾರ ಪ್ರಕ್ರಿಯೆ ಆರಂಭಗೊಂಡಿದೆ.

Advertisement

ಶ್ರೀಕೃಷ್ಣ ಜನ್ಮಾಷ್ಟಮಿಗೆ ಮಠದ ವಿವಿಧೆಡೆ ಹೂವಿನ ಅಲಂಕಾರ, ಪಾಕಶಾಲೆಯಲ್ಲಿ ಉಂಡೆ-ಚಕ್ಕುಲಿ ತಯಾರಿ ಆರಂಭಗೊಂಡಿದೆ. ಸುಮಾರು 50 ಮಂದಿ ಬಾಣಸಿಗರು ಈ ಕೆಲಸದಲ್ಲಿ ತೊಡಗಿದ್ದಾರೆ. ಇದನ್ನು ಶ್ರೀಕೃಷ್ಣಾಷ್ಟಮಿಯ ದಿನ (ಸೆ.6) ಮಧ್ಯರಾತ್ರಿ ದೇವರಿಗೆ ನಿವೇದಿಸಲಾಗು ತ್ತದೆ. ಕೃಷ್ಣನ ಮೃಣ್ಮಯ ಮೂರ್ತಿ ವಿಟ್ಲಪಿಂಡಿ ಉತ್ಸವದಲ್ಲಿ (ಸೆ.7) ಕೃಷ್ಣನ ಮೃಣ್ಮಯ ಮೂರ್ತಿ ಪೂಜೆಗೊಳ್ಳುತ್ತದೆ. ಇದರ ವಿಗ್ರಹ ರಚಿಸುವ ಕಾರ್ಯವೂ ನಡೆದಿದೆ. 21 ವರ್ಷಗಳಿಂದ ಕಲಾವಿದ ಸೋಮನಾಥ ಚಿಟ್ಪಾಡಿ ಅವರು ಈ ಮೂರ್ತಿ ರಚಿಸುತ್ತಿದ್ದಾರೆ.

ಉತ್ಸವ ಮೂರ್ತಿಯನ್ನು ಇಡುವ ಅಟ್ಟೆ ಪ್ರಭಾವಳಿಗೆ ಸೂಕ್ತವಾಗಿ 9 ಇಂಚು ಎತ್ತರದ ಮಣ್ಣಿನ ಮೂರ್ತಿ ನಿರ್ಮಿಸಲಾಗುತ್ತದೆ. ಈಗ ಚಾತು ರ್ಮಾಸ ವ್ರತದ ಅವಧಿಯಾದ ಕಾರಣ ಉತ್ಸವಮೂರ್ತಿಯನ್ನು ಗರ್ಭಗುಡಿಯಿಂದ ಹೊರತರುವುದಿಲ್ಲ. ಹೀಗಾಗಿ ಮಣ್ಣಿನ ವಿಗ್ರಹ ತಯಾರಿಸಿ ಪೂಜಿಸಲಾಗುತ್ತದೆ.

ಈಗಾಗಲೇ ಶ್ರೀಕೃಷ್ಣಮಠ, ಪರ್ಯಾ ಯ ಶ್ರೀ ಕೃಷ್ಣಾಪುರ ಮಠದ ವತಿಯಿಂದ ಅಷ್ಟಮಿ ಪ್ರಯುಕ್ತ ಸೆ. 1ರಿಂದ 8ರ ವರೆಗೆ ಕೃಷ್ಣಮಠದ ರಾಜಾಂಗಣದಲ್ಲಿ “ಅಷ್ಟದಿನೋತ್ಸವ’ ಕಾರ್ಯಕ್ರಮ ನಡೆಯಲಿದೆ. ನಿತ್ಯ ಪ್ರವಚನ ಸೇರಿದಂತೆ ನೃತ್ಯ, ಗಾಯನ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಿಗೊಳ್ಳುತ್ತಿವೆ. ಶ್ರೀಕೃಷ್ಣ ಮಠದಲ್ಲಿ ಹಲವು ಸ್ಪರ್ಧೆಗಳು ನಡೆಯುತ್ತಿದ್ದು, ಸ್ಪರ್ಧಾಳುಗಳು ನೋಂದಾಯಿಸಿದ್ದಾರೆ.

ರಥಬೀದಿ ಪ್ರಮುಖ ಆಕರ್ಷಣೆ ಯಾಗಿದ್ದು, ವಿಟ್ಲಪಿಂಡಿಯಂದು ಗೊಲ್ಲರು ಮೊಸರು ಕುಡಿಕೆಗಳನ್ನು ಒಡೆಯಲು ಗುರ್ಜಿ ನೆಡಲಾಗುತ್ತಿದೆ.

Advertisement

ವಿಟ್ಲಪಿಂಡಿ ಉತ್ಸವ

ವಿಟ್ಲಪಿಂಡಿಯಂದು (ಸೆ. 7) ಬೆಳಗ್ಗೆ ಬೇಗ ಪೂಜೆಗಳನ್ನು ನಡೆಸಲಾಗುತ್ತದೆ.

ಇದಕ್ಕೆ ಕಾರಣ ಕೃಷ್ಣಜನ್ಮಾಷ್ಟಮಿಯಂದು ಏಕಾದಶಿ ವ್ರತದಂತೆ ನಿರ್ಜಲ ಉಪವಾಸ ಇರುವುದು. ಸೆ. 7ರಂದು ಬೆಳಗ್ಗೆ 10 ಗಂಟೆಯಿಂದ ಅನ್ನಸಂತ ರ್ಪಣೆ ನಡೆಯಲಿದೆ. ಇದು ಅನ್ನಬ್ರಹ್ಮ ಮತ್ತು ಭೋಜನ ಶಾಲೆಯಲ್ಲಿ ಭೋಜನ ಪ್ರಸಾದ ವಿತರಣೆ ನಡೆಯಲಿದೆ.

ವೇಷಧಾರಿಗಳು ಸಜ್ಜು

ಹುಲಿ ವೇಷ ತಂಡಗಳು ಅಷ್ಟಮಿಗೆ ಹುಲಿ ಕುಣಿತ ಪ್ರದರ್ಶಿಸಲು ಸಜ್ಜು ಗೊಂಡಿವೆ ಈ ಬಾರಿ ವಿಶೇಷವಾಗಿ ಮಹಿಳಾ ಹುಲಿವೇಷಧಾರಿಗಳ ತಂಡ ಗಮನ ಸೆಳೆಯಲಿದೆ. ವಿವಿಧ ಸಂಘ-ಸಂಸ್ಥೆಗಳು ಕೃಷ್ಣ ವೇಷ ಸ್ಪರ್ಧೆ ಮತ್ತು ಹುಲಿ ಕುಣಿತ ಸ್ಪರ್ಧೆ ಆಯೋಜನೆಯಲ್ಲಿ ತೊಡಗಿವೆ.

Advertisement

Udayavani is now on Telegram. Click here to join our channel and stay updated with the latest news.

Next