Advertisement

ಮೈಸೂರು: ಯೋಗ ತಾಲೀಮಿನಲ್ಲಿ ಸಾವಿರಾರು ಮಂದಿ ಭಾಗಿ

11:04 PM Jun 05, 2022 | Team Udayavani |

ಮೈಸೂರು: ಈ ತಿಂಗಳ 21ರಂದು ನಡೆಯುವ ವಿಶ್ವ ಯೋಗ ದಿನದ ಪೂರ್ವಭಾವಿಯಾಗಿ ಪ್ರತಿ ರವಿವಾರ ನಡೆಯುತ್ತಿರುವ ಯೋಗ ತಾಲೀಮು ಎರಡನೇ ಬಾರಿಗೆ ಅರಮನೆ ಆವರಣದಲ್ಲಿ ಜರಗಿತು. ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ವಿವಿಧ ಆಸನಗಳನ್ನು ಪ್ರದರ್ಶಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಟಿ.ಸೋಮಶೇಖರ್‌ ಪೂರ್ವಾಭ್ಯಾಸದ ತಾಲೀಮಿಗೆ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿ, ಪ್ರಧಾನಿ ಮೈಸೂರಿಗೆ ಆಗಮಿಸುತ್ತಿರುವುದರಿಂದ ತಾಲೀಮು ನಡೆಯು ತ್ತಿದೆ. ಯಾರಿಗೆಲ್ಲ ಅವಕಾಶ ನೀಡಬೇಕು ಎಂಬುದರ ಬಗ್ಗೆ 12ರ ಬಳಿಕ ನಿರ್ಧರಿಸಲಾಗುವುದು ಎಂದರು.

ಕಾರ್ಯಕ್ರಮಕ್ಕೆ ನೋಂದಣಿ ಆರಂಭವಾಗಿಲ್ಲ. ನೋಂದಣಿ ಸಂಬಂಧ ನಿರ್ದೇಶಕರನ್ನು ನೇಮಿಸಲಾಗಿದೆ. ಮುಖ್ಯಮಂತ್ರಿಗಳು ಜೂ.8ಕ್ಕೆ ಮೈಸೂರಿಗೆ ಆಗಮಿಸುತ್ತಿದ್ದಾರೆ.. ಅಂದು ಕಾರ್ಯಕ್ರಮದ ರೂಪುರೇಷೆ ಅಂತಿಮವಾಗಲಿದೆ ಎಂದು ಹೇಳಿದರು.

10 ಸಾವಿರ ಜನ ಭಾಗಿ
ಅರಮನೆ ಆವರಣದಲ್ಲಿ ರವಿವಾರ ನಡೆದ ಯೋಗ ತಾಲೀಮಿನಲ್ಲಿ ಮಕ್ಕಳು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಒಟ್ಟು 10 ಸಾವಿರ ಮಂದಿ ಯೋಗಾಸಕ್ತರು ಭಾಗವಹಿಸಿ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಮುಂದಿನ ವಾರ ಜು. 12ರಂದು ನಡೆಯಲಿರುವ ತಾಲೀಮಿನಲ್ಲಿ 20 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next