ಡಿ.22ರಂದು ಚೆನ್ನೈನಿಂದ ಹೊರಟು ಡಿ.23ಕ್ಕೆ ದೇಗುಲ ಪ್ರವೇಶ ಮಾಡುವ ಆಸಕ್ತಿ ಹೊಂದಿದ್ದಾರೆ. ಸೆ.28ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪು ಅಯ್ಯಪ್ಪ ಭಕ್ತರಾದ ನಮಗೆ ಹೆಚ್ಚಿನ ಉತ್ಸಾಹ ತಂದಿದೆ. ಆದರೆ ಪ್ರತಿಭಟನಾಕಾರರಿಂದಾಗಿ ಮಹಿಳೆಯರಿಗೆ ದೇಗುಲ ಪ್ರವೇಶ ಸಾಧ್ಯವಾಗದ್ದು ಬೇಸರ ತಂದಿದೆ ಎಂದು ತಂಡದ ಸದಸ್ಯೆ ವಸುಮತಿ ವಸಂತ್ ಹೇಳಿದ್ದಾರೆ.
Advertisement
ದೇಗುಲ ಪ್ರವೇಶಕ್ಕೆ ಪ್ರತಿರೋಧ ಎದುರಾಗಬಹುದು ಎಂಬ ವಿಚಾರ ತಿಳಿದಿದೆ. ಅದನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ. ಇದುವರೆಗೆ ಸುಮಾರು 16 ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಿ ವಿಫಲರಾಗಿದ್ದಾರೆ.