Advertisement
ಇದಕ್ಕಾಗಿ ರಥಬೀದಿಯಲ್ಲಿ ಸಿದ್ಧತೆ ಆರಂಭಗೊಂಡಿದ್ದು, ವಿಟ್ಲಪಿಂಡಿಯಂದು ಗೋವಳರು ಮೊಸರು ಕುಡಿಕೆಗಳನ್ನು ಒಡೆಯಲು ಗುರ್ಜಿಗಳ ಕಂಬವನ್ನು ನೆಡುವ ಕೆಲಸ ನಡೆಯುತ್ತಿದೆ.
Related Articles
Advertisement
ಕೃಷ್ಣಾಷ್ಟಮಿ ಸಂಭ್ರಮಕ್ಕೆ ಪ್ರತ್ಯೇಕ ಸಮಿತಿಗಳನ್ನು ರಚಿಸಿ ಪ್ರಮುಖರಿಗೆ ಜವಾಬ್ದಾರಿ ವಹಿಸಲಾಗಿದೆ. ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಲಹೆ, ಮಾರ್ಗದರ್ಶನದಂತೆ ತಯಾರಿ ಕಾರ್ಯ ಆರಂಭಗೊಂಡು, ಈಗಾಗಲೆ ಹಲವು ಪೂರ್ವಭಾವಿ ಸಭೆಗಳು ನಡೆದಿದೆ.
ನಗರದಲ್ಲಿ ಹುಲಿ ವೇಷ ತಂಡಗಳು ಅಷ್ಟಮಿಗೆ ಹುಲಿ ಕುಣಿತ ಪ್ರದರ್ಶಿಸಲು ಸಜ್ಜುಗೊಳ್ಳುತ್ತಿವೆ. ನಗರ, ಗ್ರಾಮಾಂತರ ಭಾಗದ ಖ್ಯಾತ ಹುಲಿವೇಷಧಾರಿಗಳ ತಂಡದ ಪೋಸ್ಟರ್‌ಗಳು ರಾರಾಜಿಸುತ್ತಿದೆ. ವಿವಿಧ ಸಂಘ, ಸಂಸ್ಥೆಗಳು ಕೃಷ್ಣ ವೇಷ ಸ್ಪರ್ಧೆ ಮತ್ತು ಹುಲಿ ಕುಣಿತ ಸ್ಪರ್ಧೆ ಆಯೋಜಿಸಲು ತಯಾರಿ ನಡೆಸಿವೆ. ಭಕ್ತರು, ಪ್ರವಾಸಿಗರು
ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಉತ್ಸವ ಕಣ್ತುಂಬಿಕೊಳ್ಳಲು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. 4ನೇ ಶನಿವಾರ, ರವಿವಾರ ರಜೆ ಇರುವುದರಿಂದ ಮತ್ತು ಆ.26-27 ಹೆಚ್ಚುವರಿ ರಜೆ ಇದ್ದಲ್ಲಿ ಸ್ಥಳೀಯರು ಸಹಿತ, ಹೊರ ಜಿಲ್ಲೆ, ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಈಗಾಗಲೆ ಬಹುತೇಕ ಹೊಟೇಲ್, ಛತ್ರ, ಲಾಡ್ಜ್ಗಳಲ್ಲಿ ದೂರದ ಊರಿನ ಭಕ್ತರು ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ.