Advertisement
ಭತ್ತ ಈಗಾಗಲೆ ಕೊಯ್ಲಿಗೆ ಬಂದಿದ್ದು, ಕೆಲವೆಡೆ ಅರ್ಧ ಕೊಯ್ಲು ನಡೆಸಿ ಗದ್ದೆಯಲ್ಲೇ ಬಿಟ್ಟ ಬೆಳೆಗೆ ಹಾನಿಯಾಗಿದೆ. ತಾಲೂಕಿನಲ್ಲಿ ಈ ಬಾರಿ ಕೃಷಿ ಇಲಾಖೆ ಮಾಹಿತಿಯಂತೆ 400 ಹೆಕ್ಟೇರ್ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಅಕಾಲಿಕವಾಗಿ ಮಳೆ ಸುರಿದ ಪರಿಣಾಮ ಕಷ್ಟಪಟ್ಟು ಬೆಳೆದ ಬೆಳೆ ಕೈ ಸೇರದಂತಾಗಿದೆ.
2ನೇ ಕೊಯ್ಲು ನಡೆಸಿ ಬಹುತೇಕ 25ರಿಂದ 30 ಬಿಸಿಲು ಬಿದ್ದ ಅಡಿಕೆಗಳು ಅಂಗಳದಲ್ಲಿ ಒದ್ದೆಯಾಗಿದ್ದು ಗುಣಮಟ್ಟಕ್ಕೆ ತೊಂದರೆಯಾಗಲಿದೆ. ಹೆಚ್ಚಿನ ಮಂದಿ ಈ ಸಮಯ ವಿವಿಧ ತರಕಾರಿ ಬೆಳೆಗಳಿಗೆ ಒಗ್ಗಿ ಕೊಂಡಿದ್ದು, ಗದ್ದೆಯಲ್ಲಿ ನೀರು ನಿಂತು ಹಾನಿಯಾಗಿದೆ. ಎಳನೀರು ಪ್ರದೇಶದ ಲ್ಲಿ ಕಾಫಿ ಬೆಳೆಗೆ ಹಾನಿಯಾಗಿದೆ.
Related Articles
2020-21ರ ಮಳೆ ಹಾನಿಯಿಂದಾಗಿ 200 ಪ್ರಕರಣ ವರದಿಯಾಗಿದ್ದು, 24,57,606 ರೂ. ಪರಿಹಾರ ತಾಲೂಕು ಆಡಳಿತದಿಂದ ವಿತರಿಸಲಾಗಿದೆ. ವಾಸ್ತವ್ಯದ ಕಚ್ಚಾಮನೆ ಪೂರ್ತಿ ಹಾನಿ 7 ಪಕ್ರರಣದಲ್ಲಿ 5,13,400 ರೂ. ವಿತರಿಸಲಾಗಿದೆ. ವಾಸ್ತವ್ಯದ ಪಕ್ಕಾ ಮನೆ ತೀವ್ರ ಹಾನಿ 20 ಪ್ರಕರಣಗಳಲ್ಲಿ 4,60,116 ರೂ. ವಿತರಿಸಲಾಗಿದ್ದು, ಕಚ್ಚಾಮನೆ ತೀವ್ರ ಹಾನಿ 28 ಪ್ರಕರಣಗಳಲ್ಲಿ 6,88,500 ರೂ. ವಿತರಿಸಲಾಗಿದೆ. ಪಕ್ಕಾ ಮನೆ ಭಾಗಶಃ ಹಾನಿಯಲ್ಲಿ 54 ಪ್ರಕರಣದ ಪೈಕಿ 2,73,800 ರೂ. ವಿತರಿಸಿದ್ದು, ಕಚ್ಚಾ ಮನೆ ಭಾಗಶಃ ಹಾನಿ 67 ಪ್ರಕರಣ ಪೈಕಿ 2,54,440 ರೂ. ವಿತರಿಸಲಾಗಿದೆ. ಗುಡಿಸಲು ಹಾನಿ 2 ಪ್ರಕರಣವಾಗಿದ್ದು, 8,200 ರೂ. ವಿತರಿಸಲಾಗಿದೆ. ಜಾನುವಾರು ಹಟ್ಟಿ ಹಾನಿ 21 ಪ್ರಕರಣ ದಾಖಲಾಗಿದ್ದು 44,100 ರೂ. ವಿತರಿ ಸಲಾಗಿದೆ. ಓರ್ವ ವ್ಯಕ್ತಿಗೆ ಗಾಯ ಗೊಂಡ ಪರಿಹಾರವಾಗಿ 2,790 ರೂ. ಸೇರಿ 200 ಪ್ರಕರಣಗಳ ಪೈಕಿ 24,57,606 ರೂ. ಪರಿಹಾರ ಮೊತ್ತ ವಿತರಿಸಲಾಗಿದೆ.
Advertisement
ನೆಲಕ್ಕಚ್ಚಿದ ಭತ್ತಅಕಾಲಿಕ ಮಳೆಯಿಂದಾಗಿ ಅಡಿಕೆ, ಭತ್ತ ಬೆಳೆಗಾರರಿಗೆ ನಷ್ಟ ಉಂಟಾಗಲಿದೆ. 25 ಮೇಲಷ್ಟು ಬಿಸಿಲು ತಾಗಿದ ಅಡಿಕೆ ಗುಣಮಟ್ಟ ಕಳೆದು ಕೊಂಡರೆ, ಭತ್ತ ನೆಲಕ್ಕಚ್ಚಿದೆ. ಇತ್ತ ತರಕಾರಿ ಬೆಳೆಗೂ ಹಾನಿಯುಂಟಾಗಲಿದೆ.
-ಪ್ರಭಾಕರ ಮಯ್ಯ, ಕೃಷಿ ತಜ್ಞ