Advertisement

Sikkim; ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರೇಮ್ ಸಿಂಗ್ ಪ್ರಮಾಣ ವಚನ ಸ್ವೀಕಾರ

05:33 PM Jun 10, 2024 | Team Udayavani |

ಗ್ಯಾಂಗ್ಟೋಕ್ : ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಪಕ್ಷದ ನಾಯಕ ಪ್ರೇಮ್ ಸಿಂಗ್ ತಮಾಂಗ್ ಸತತ ಎರಡನೇ ಅವಧಿಗೆ ಸಿಕ್ಕಿಂ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಗ್ಯಾಂಗ್ಟೋಕ್ ನ ಪಾಲ್ಜೋರ್ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಿಕ್ಕಿಂ ರಾಜ್ಯಪಾಲ ಲಕ್ಷ್ಮಣ್ ಆಚಾರ್ಯ ಅವರು ಪ್ರೇಮ್ ಸಿಂಗ್ ತಮಾಂಗ್ ಮತ್ತು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಸೋನಮ್ ಲಾಮಾ, ಅರುಣ್ ಉಪ್ರೇತಿ, ಸಂದುಪ್ ಲೆಪ್ಚಾ, ಭೀಮ್ ಹ್ಯಾಂಗ್ ಲಿಂಬೂ, ಭೋಜ್ ರಾಜ್ ರಾಯ್, ಜಿಟಿ ಧುಂಗೆಲ್, ಪುರುಣ್ ಕುಮಾರ್ ಗುರುಂಗ್ ಮತ್ತು ಪಿಂಟ್ಶೋ ನಮ್ಗ್ಯಾಲ್ ಲೆಪ್ಚಾ ಅವರು ಸಿಕ್ಕಿಂ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಸಮಾರಂಭದಲ್ಲಿ ಗಣ್ಯರು, ಪಕ್ಷದ ಕಾರ್ಯಕರ್ತರು ಸೇರಿ 30,000 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.

ತಮಾಂಗ್ ಅವರ SKM ಪಕ್ಷ ಒಟ್ಟು 32 ಕ್ಷೇತ್ರಗಳಲ್ಲಿ 58.38 ಮತಗಳೊಂದಿಗೆ 31 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿ ಮತ್ತೆ ಅಧಿಕಾರಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next