Advertisement

ಶ್ರೀಕ್ಷೇತ್ರ ಕಾರಿಂಜ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

04:28 PM Jan 29, 2018 | Team Udayavani |

ಪುಂಜಾಲಕಟ್ಟೆ : ಪುರಾಣ ಪ್ರಸಿದ್ಧ ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾ| ಕಾವಳಮೂಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಾ. 26ರಿಂದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಸಿದ್ಧತೆಗಾಗಿ ಪೂರ್ವಭಾವಿ ಸಮಾಲೋಚನ ಸಭೆ ರವಿವಾರ ಶ್ರೀಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ ಮಾತನಾಡಿ, ಕಳೆದ 16 ವರ್ಷಗಳ ಹಿಂದೆ ದೇಗುಲದ ಬ್ರಹ್ಮ ಕಲಶೋತ್ಸವ ವಿಜೃಂಭಣೆಯಿಂದ ನಡೆದಿತ್ತು. ಶಾಸ್ತ್ರ ಪ್ರಕಾರದೋಷಾದಿ ಪರಿಹಾರ ನಿಮಿತ್ತ ಪ್ರತೀ 12 ವರ್ಷಗಳಿಗೆ ಬ್ರಹ್ಮಕಲಶ ನಡೆಯ ಬೇಕಾಗಿತ್ತು. ಇದೀಗ ನಾಲ್ಕು ವರ್ಷ ಹೆಚ್ಚಳವಾದರೂ ಮಾ. 26ರಿಂದ 5 ದಿನ ಬ್ರಹ್ಮಕಲಶವನ್ನು ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ. ಪರಿಸರದ ನಾಲ್ಕು ಗ್ರಾಮಗಳ ಗ್ರಾಮಸ್ಥರು ಮನಪೂರ್ವಕವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಬ್ರಹ್ಮಕಲಶಕ್ಕೆ ಈ ಬಾರಿ ಮತ್ತೆ ತನ್ನ ಅಧ್ಯಕ್ಷತೆಯ ಸಮಿತಿಗೆ ಅವಕಾಶ ದೊರೆತಿರುವುದು ಸುಯೋಗ ಎಂದ ಅವರು, ದೇವಸ್ಥಾನದಲ್ಲಿ ಪ್ರಸ್ತುತ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು. ಸುಮಾರು 96 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಸುತ್ತು ಗೋಪುರ ನಿರ್ಮಾಣಗೊಳ್ಳುತ್ತಿದ್ದು, ಜಾತ್ರೆ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಬ್ರಹ್ಮಕಲಶೋತ್ಸವದ ವೈದಿಕ ಸಮಿತಿ ರಚಿಸಲಾಯಿತು. ಕ್ಷೇತ್ರಕ್ಕೆ ಸಂಬಂಧಿಸಿ ಕಾವಳ ಮೂಡೂರು, ಕಾವಳಪಡೂರು,ದೇವಸ್ಯ ಮೂಡೂರು, ದೇವಸ್ಯಪಡೂರು ಗ್ರಾಮಸ್ಥರಿಗೆ ಅನ್ನಸಂತರ್ಪಣೆ ವ್ಯವಸ್ಥೆ ವಹಿಸಲಾಯಿತು. ದೋಷ ಪರಿಹಾರಕ್ಕೆ ಜೋತಿಷ ಪ್ರಶ್ನೆ ಇರಿಸಿ ಪರಿಹಾರ ನಡೆಸಲು ನಿರ್ಣಯಿಸಲಾಯಿತು. ಪ್ರ. ಅರ್ಚಕ ನಟರಾಜ್‌ ಉಪಾಧ್ಯಾಯ, ಗ್ರಾಮಣಿ ವೆಂಕಟರಾಜ ಎಳಚಿತ್ತಾಯ, ತಂತ್ರಿ ಗಣಪತಿ ಮುಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ ಸಲಹೆ-ಸೂಚನೆ ನೀಡಿದರು.

ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್‌, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಗ್ರಾ. ಪಂ. ಉಪಾಧ್ಯಕ್ಷೆ ಭವಾನಿ ಶ್ರೀಧರ್‌, ಸದಸ್ಯರಾದ ವೀರೇಂದ್ರ ಅಮೀನ್‌, ಚಂದ್ರಶೇಖರ ಕರ್ಣ, ಧ.ಗ್ರಾ. ಯೋಜನೆ ಮೇಲ್ವಿಚಾರಕಿ ಹರಿಣಾಕ್ಷಿ, ಪ್ರಮುಖರಾದ ಮಾಣಿ ಕ್ಯರಾಜ್‌ ಜೈನ್‌, ಧನಂಜಯ ಹೆಗ್ಡೆ, ಮೋಹನ ಭಟ್‌, ಸೂರ್ಯಹಾಸ ಭಟ್‌, ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಹೇಮಂತ ಕುಮಾರ್‌, ರಾಜಾರಾಮ ನಾಯಕ್‌, ಪ್ರವೀಣ ಪಡಂತ್ರ್ಯಬೆಟ್ಟು, ವಾಸುದೇವ ಗೌಡ, ಶಾಂತಿ ಪ್ರಸಾದ್‌ ಜೈನ್‌, ಮನ್ಮಥರಾಜ್‌ ಕಾಜವ, ಉದಯ ನಾಯಕ್‌ ಮಾಂಗಾಜೆ, ದೀಪಕ್‌ ಕುಮಾರ್‌ ಜೈನ್‌, ಆನಂದ ಆಳ್ವ ಬತ್ತನಾಡಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಆಚಾರ್ಯ ಬಾಳ್ತಬೈಲ್‌, ವಿಶ್ವನಾಥ ಪೂಜಾರಿ ಪೀರ್ಯ, ಸದಾಶಿವ ಪ್ರಭು, ಕೃಷ್ಣಪ್ಪ ಗೌಡ ತಾಳಿತ್ತೂಟ್ಟು, ವೆಂಕಪ್ಪ ನಾಯ್ಕ ಕಾರಿಂಜಬೈಲ್‌, ಸುಜಲಾ ಶೆಟ್ಟಿ, ಸವಿತಾ ಮತ್ತಿತರರು ಉಪಸ್ಥಿತರಿದ್ದರು. ಆದಿರಾಜ್‌ ಜೈನ್‌ ಸ್ವಾಗತಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next