Advertisement

ಸಂವಿಧಾನ ಜಾಗೃತಿ ಸಮ್ಮೇಳನದ ಪ್ರಯುಕ್ತ ಪ್ರಬಂಧ ಸ್ಪರ್ಧೆ

09:06 PM Dec 14, 2019 | Lakshmi GovindaRaj |

ಚಾಮರಾಜನಗರ: ವಿದ್ಯಾರ್ಥಿಗಳಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬಹುಜನ ವಿದ್ಯಾರ್ಥಿ ಸಂಘಯು ರಾಜ್ಯ ಮಟ್ಟದ ಸಂವಿಧಾನ ಜಾಗೃತಿ ಸಮ್ಮೇಳನ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ 5 ಲಕ್ಷ ರೂ. ಬಹುಮಾನದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಯೋಜಕ ಪರ್ವತ್‌ರಾಜ್‌ ತಿಳಿಸಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.26ರವರೆಗೆ ಸಂವಿಧಾನ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಫೆ.2ರಂದು ಸಂವಿಧಾನ ಜಾಗೃತಿ ಸಮ್ಮೇಳನ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಅಯೋಜಿಸಿದೆ. ವಿಜೇತರಿಗೆ 5 ಲಕ್ಷ ರೂ.ವರೆಗೆ ಬಹುಮಾನ ಘೋಷಿಸಿದ್ದು, ಹಲವು ವಿಭಾಗಗಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಯಾ ವಿಭಾಗಗಳಿಗೆ ಭಾರತ ಸಂವಿಧಾನಕ್ಕೆ ಸಂಬಂಧಪಟ್ಟಂತೆ ಪ್ರತ್ಯಕ ವಿಷಯಗಳನ್ನು ನೀಡಲಾಗಿದೆ ಎಂದರು.

ಪದವಿ ಸ್ನಾತಕೋತರ ಸಂಶೋಧನಾ ವಿಭಾಗಕ್ಕೆ ಭಾರತೀಯ ಸಮಾಜ ಪರಿವರ್ತನೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳು, ರಾಜ್ಯ ನೀತಿ ನಿರ್ದೇಶಕ ತತ್ವಗಳ ಪಾತ್ರ ಎಂಬ ವಿಷಯವನ್ನು ನೀಡಲಾಗಿದೆ. ಪದವಿಪೂರ್ವ ಕಾಲೇಜು ಹಾಗೂ ತತ್ಸಮಾನ ಕೋರ್ಸ್‌ ವಿಭಾಗಕ್ಕೆ ಭಾರತ ಸಂವಿಧಾನದ ಪ್ರಸ್ತಾವನೆಯ ಮಹತ್ವ ಎಂಬ ವಿಷಯ ನೀಡಲಾಗಿದೆ.

ಪ್ರೌಢ ಶಾಲಾ ವಿಭಾಗಕ್ಕೆ ನಮ್ಮ ಸಂವಿಧಾನ ರಚನೆಯಲ್ಲಿ ಭಾರತ ಸಂವಿಧಾನ ಪಿತಾಮಹರಾಗಿ ಡಾ. ಬಿ.ಆರ್‌. ಅಂಬೇಡ್ಕರ್‌ ಪಾತ್ರ ಎಂಬ ವಿಷಯವನ್ನು ನೀಡಲಾಗಿದೆ. ತಾಲೂಕ ಮಟ್ಟದಿಂದ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಜಿಲ್ಲಾ ಮಟ್ಟಕ್ಕೆ ಕಳುಹಿಸಿ ಕೊಡಲಾಗುತ್ತದೆ. ಜಿಲ್ಲಾ ಮಟ್ಟದಿಂದ 60 ವಿದ್ಯಾರ್ಥಿಗಳನ್ನು ಆಯ್ಕೆಮಾಡಿ, ರಾಜ್ಯ ಮಟ್ಟಕ್ಕೆ ಕಳುಹಿಸಿ ಕೊಡಲಾಗುವುದು ಎಂದರು.

ಬಹುಮಾನದ ವಿವರ: ಸ್ನಾತಕೋತ್ತರ/ ಪದವಿ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 1 ಲಕ್ಷ ರೂ, ದ್ವಿತೀಯ ಬಹುಮಾನ 50 ಸಾವಿರ ರೂ., ತೃತೀಯ ಬಹುಮಾನ 25 ಸಾವಿರ ರೂ., ಸಮಾಧಾನಕರ ಬಹುಮಾನ ಹತ್ತು ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ., ಪದವಿ ಪೂರ್ವ, ಐಟಿಐ, ಡಿಪ್ರೋಮ, ನರ್ಸಿಂಗ್‌ ಇತರೆ ತತ್ಸಮಾನ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 50 ಸಾವಿರ ರೂ.,

Advertisement

ದ್ವಿತೀಯ ಬಹುಮಾನ 25 ಸಾವಿರ ರೂ., ತೃತೀಯ ಬಹುಮಾನ 15 ಸಾವಿರ ರೂ., ಸಮಾಧಾನಕರ ಬಹುಮಾನ ಹತ್ತು ವಿದ್ಯಾರ್ಥಿಗಳಿಗೆ 3 ಸಾವಿರ ರೂ., ಇರುತ್ತದೆ. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 25 ಸಾವಿರ ರೂ, ದ್ವಿತೀಯ ಬಹುಮಾನ 15 ಸಾವಿರ ರೂ, ತೃತೀಯ ಬಹುಮಾನ 5 ಸಾವಿರ ರೂ. ಸಮಾಧಾನಕರ ಬಹುಮಾನ ಹತ್ತು ವಿದ್ಯಾರ್ಥಿಗಳಿಗೆ 2 ಸಾವಿರ ರೂ. ನಿಗದಿ ಪಡಿಸಲಾಗಿದೆ ಎಂದರು.

ಸೂಚನೆ: ಪ್ರಬಂಧದ ಮೊದಲ ಪುಟದಲ್ಲಿ ಸ್ಪರ್ಧಿಗಳು ತಮ್ಮ ಹೆಸರು, ತರಗತಿ, ವಿಭಾಗ, ಶಾಲೆ ಅಥವಾ ಕಾಲೇಜು, ವಿಳಾಸ, ಮೊಬೈಲ್‌ ನಂಬರು ಸ್ಪಷ್ಟವಾಗಿ ಬರೆದಿರಬೇಕು. ಪ್ರಬಂಧದ ಮೊದಲ ಪುಟದಲ್ಲಿ ಶಾಲಾ ಕಾಲೇಜಿನ ಮುಖ್ಯ ಶಿಕ್ಷಕರು ಅಥವಾ ಪ್ರಾಂಶಪಾಲರು ಅಥವಾ ಸಂಸ್ಥೆಯ ವಿಷಯ ವಿಭಾಗದ ಮುಖ್ಯಸ್ಥರ ಸಹಿ, ಮೊಹರನ್ನು ಕಡ್ಡಾಯವಾಗಿ ತೆಗೆದುಕೊಂಡಿರಬೇಕು. ಪ್ರಬಂಧದಲ್ಲಿ ಪ್ರೌಢಶಾಲಾ ಹಾಗೂ ಪದವಿಪೂರ್ವ ವಿಭಾಗದ ಸ್ಪರ್ಧಾಳುಗಳು 1 ಸಾವಿರ ಪದಗಳು, ಪದವಿ, ಸ್ನಾತಕೋತ್ತರ, ಸಂಶೋಧನಾ ವಿಭಾಗದ ಸ್ಪರ್ಧಿಗಳು 2500 ಪದಗಳು ಮೀರದಂತೆ ಬರೆದಿರಬೇಕು.

ಪ್ರಬಂಧವನ್ನು ಎ4 ಶೀಟಗಳಲ್ಲಿ ನೀಲಿ ಅಥವಾ ಕಪ್ಪು ಶಾಯಿಯಿಂದ ಮಾತ್ರ ಬರೆದಿರಬೇಕು. ಪ್ರಬಂಧವನ್ನು ವಿದ್ಯಾರ್ಥಿಯ ಕೈ ಬರಹದಿಂದ ಕೂಡಿರಬೇಕು. ಅಕ್ಷರಗಳನ್ನು ಅಂದವಾಗಿ ಸ್ಪಷ್ಟವಾಗಿ ಬರೆಯಬೇಕು. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಬರೆಯಬಹುದು. ವಿಷಯ ತಜ್ಞರಿಂದ ಮೌಲ್ಯಮಾಪನ ಮಾಡಿಸುವುದರಿಂದ ಮೌಲ್ಯಮಾಪಕರ ತೀರ್ಮಾನ ಅಂತಿಮವಾಗಿರುತ್ತದೆ. ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ. ಪ್ರಬಂಧವನ್ನು 2020 ಜ.10ರ ಸಂಜೆ 6 ಗಂಟೆಯ ಒಳಗೆ ಅಂಚೆ, ಅಥವಾ ನಾವು ನೀಡುವ ವಿಳಾಸಕ್ಕೆ ಖುದ್ದಾಗಿ ತಲುಪಿಸಬೇಕು ಎಂದು ಹೇಳಿದರು.

ಪ್ರಬಂಧ ತಲುಪಿಸುವ ವಿಳಾಸ: ತ್ಯಾಗು ಇಂಟರ್‌ನೆಟ್‌, ಬಿ.ರಾಚಯ್ಯ ಜೋಡಿರಸ್ತೆ, ವಿದ್ಯಾವಿಕಾಸ ಕಾಲೇಜು ಪಕ್ಕ, ರಾಮಸಮುದ್ರ, ಚಾಮರಾಜನಗರ ಟೌನ್‌. ಚಾಮರಾಜನಗರ-751313 ಇಮೇಲ್‌: bvschamarajnagara@gmail.com ಇಲ್ಲಿಗೆ ಪ್ರಬಂಧ ತಲುಪಿಸಬೇಕು. ಮಾಹಿತಿಗೆ ಮೊಬೈಲ್‌ 9480092284, 879251933, 7406910060, 9620068601 ಸಂಪರ್ಕಿಸಿ ಎಂದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಎನ್‌.ಮಹೇಂದ್ರ, ಉಪಾಧ್ಯಕ್ಷೆ ಮೇಘಾ, ಸಂಘಟನಾ ಕಾರ್ಯದರ್ಶಿ ಸಹನ, ಪತ್ರಿಕಾ ಕಾರ್ಯದರ್ಶಿ ಸಚಿನ್‌, ಸಂಘಟನಾ ಕಾರ್ಯದರ್ಶಿ ಸಹನಾ, ಶಿಕ್ಷಣ ಕಾರ್ಯದರ್ಶಿ ಕುಶಲಾ, ವೆಂಕಟೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next