Advertisement

ಬಾತುಕೋಳಿಯಿಂದ ಬಚಾವಾದ ಪಿಎಂ ಮೋದಿ!

06:00 AM Apr 23, 2018 | Team Udayavani |

ಲಂಡನ್‌: ಇತ್ತೀಚೆಗೆ ಲಂಡನ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಡೌನಿಂಗ್‌ ಸ್ಟ್ರೀಟ್‌ನಲ್ಲಿರುವ ಬ್ರಿಟನ್‌ ಪ್ರಧಾನಿ ಥೆರೇಸಾ ಮೇ ಕಚೇರಿಯಲ್ಲಿ ಉಪಾಹಾರ ಸೇವಿಸುತ್ತಿರುವಾಗ, ಅದೇ ಕಚೇರಿಯ ಒಂದು ಮೂಲೆಯಲ್ಲಿ ಗೂಡು ಕಟ್ಟಿಕೊಂಡು ಕುಳಿತಿದ್ದ ಗರ್ಭಿಣಿ ಬಾತುಕೋಳಿಯ ಮೇಲೆ ಒಂದು ಕಣ್ಣಿಟ್ಟೇ ಇದ್ದರು! ಯಾಕೆ ಗೊತ್ತಾ? ಆ ಬಾತುಕೋಳಿ ಯಾವುದೇ ಹೊತ್ತಲ್ಲೂ ಇವರ ಮೇಲೆ ಬಂದು ಎರಗಬಹುದಾಗಿತ್ತು. ನಿಜ, ಇದೇ ಕಾರಣಕ್ಕೆ ಯಾವುದೇ ಕಾರಣಕ್ಕೂ ಈ ಬಾತುಕೋಳಿಯ ಬಳಿ ಹೋಗಬೇಡಿ ಎಂದು, ಕಚೇರಿಗೆ ಕಾಲಿಡುವುದಕ್ಕೂ ಮೊದಲೇ ಮೋದಿಗೆ ಸೂಚನೆ ನೀಡಲಾಗಿತ್ತಂತೆ.

Advertisement

ಸಾಮಾನ್ಯವಾಗಿ ಡೌನಿಂಗ್‌ ಸ್ಟ್ರೀಟ್‌ನಲ್ಲಿ ಈ ಸಮಯದಲ್ಲಿ ಬಾತುಕೋಳಿಗಳು ಗರ್ಭ ಧರಿಸುತ್ತವೆ. ಈ ವೇಳೆ ಅವು ಅತ್ಯಂತ ರಕ್ಷಣಾತ್ಮಕವಾಗಿರುತ್ತವೆ. ಇನ್ನೂ ಜನಿಸದ ತಮ್ಮ ಕುಡಿಯನ್ನು ರಕ್ಷಿಸಲು ಸಮೀಪ ಬಂದವರನ್ನು ಕುಕ್ಕಿಬಿಡುತ್ತವೆ. ಈ ಸಂದರ್ಭದಲ್ಲಿ ಮೋದಿ ಸೇರಿದಂತೆ ವಿಶ್ವದ ಹಲವು ಗಣ್ಯರು ಕಾಮನ್ವೆಲ್ತ್‌ ರಾಷ್ಟ್ರಗಳ ಮುಖ್ಯಸ್ಥರ ಸಭೆಗೆಂದು ಲಂಡನ್‌ಗೆ ಆಗಮಿಸಿದ್ದರು. ಇವರೆಲ್ಲರಿಗೂ ಈ ಬಾತು ಕೋಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿತ್ತಂತೆ. ಗಣ್ಯರ ಅದೃಷ್ಟ ಚೆನ್ನಾಗಿದ್ದರೆ, ಉಷ್ಣತೆ ಹೆಚ್ಚಿರುವುದರಿಂದ ಸಮೀಪದಲ್ಲಿರುವ ಕೊಳಕ್ಕೆ ಹೋಗಬಹುದು. ಹಾಗೆ ಹೋಗದಿದ್ದರೆ ಅವು ಕಚೇರಿಯ ಬಳಿಯೇ ಇರುತ್ತವೆ. ಒಂದು ವೇಳೆ ಬಾತುಕೋಳಿ ಗಣ್ಯರನ್ನು ಕುಕ್ಕಿಬಿಟ್ಟರೆ ಅದು ದೊಡ್ಡ ವಿವಾದಕ್ಕೆ ಕಾರಣವಾಗಬಹುದು ಎಂಬ ಭೀತಿ, ಇಂಗ್ಲೆಂಡ್‌ ಪ್ರಧಾನಿ ಕಚೇರಿಯ ಸಿಬ್ಬಂದಿಗೆ ಕಾರ್ಯಕ್ರಮ ಮುಗಿಯುವವರೆಗೂ ಕಾಡುತ್ತಲೇ ಇತ್ತು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next