Advertisement

ಢಾಣಕಶಿರೂರ ಗರ್ಭಿಣಿ ಕೋವಿಡ್ ಮುಕ್ತ: ಕಿಮ್ಸ್‌ನಿಂದ ಬಿಡುಗಡೆ

08:05 AM May 24, 2020 | Team Udayavani |

ಬಾಗಲಕೋಟೆ: ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ ಗರ್ಭಿಣಿ ಸೇರಿದಂತೆ ಮೂವರು ಕೋವಿಡ್‌ನಿಂದ ಗುಣಮುಖರಾಗಿದ್ದು, ಶನಿವಾರ ಸಂಜೆ ಬಿಡುಗಡೆ ಮಾಡಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

Advertisement

ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಢಾಣಕಶಿರೂರ ಗ್ರಾಮದ 23 ವರ್ಷದ ಗರ್ಭಿಣಿ ಪಿ-607 ಕೋವಿಡ್‌ನಿಂದ ಗುಣಮುಖರಾಗಿದ್ದು, ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅದೇ ಗ್ರಾಮದ 23 ವರ್ಷದ ಯುವಕ ಪಿ-688 ಮತ್ತು 32 ವರ್ಷ ಪುರುಷ ಪಿ-690 ಇಬ್ಬರನ್ನು ಬಾಗಲಕೋಟೆ ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪ್ರಕಾಶ ಬಿರಾದಾರ, ಜಿಲ್ಲಾ ವೈದ್ಯಾಧಿಕಾರಿ ಡಾ| ಚಂದ್ರಕಾಂತ ಜವಳಿ ಪ್ರಮಾಣ ಪತ್ರ ವಿತರಿಸಿದರು. ಆಸ್ಪತ್ರೆಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು. ಇಲ್ಲಿಯವರೆಗೆ ಒಟ್ಟು 77 ಕೋವಿಡ್‌ ಸೋಂಕಿತರ ಪ್ರಕರಣಗಳ ಪೈಕಿ 42 ಜನ ಗುಣಮುಖರಾಗಿದ್ದಾರೆ. ಢಾಣಕಶಿರೂರ ಗ್ರಾಮದ 23 ವರ್ಷದ ಗರ್ಭಿಣಿ (ಪಿ-607) ಢಾಣಕಶಿರೂರ ಗ್ರಾಮದಿಂದ ತವರು ಮನೆಯ ಊರಾದ ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಪುರಕ್ಕೆ ತೆರಳಿದಾಗ ಉಸಿರಾಟದ ತೊಂದರೆ (ಸಾರಿ) ಹಿನ್ನೆಲೆಯಲ್ಲಿ ಮೇ 3ರಂದು ಕೋವಿಡ್‌ ಸೋಂಕು ದೃಢಪಟ್ಟಿತ್ತು. ಢಾಣಕಶಿರೂರ ಗ್ರಾಮದ ಮತ್ತಿಬ್ಬರಾದ ಪಿ-688 ಮತ್ತು 690 ವ್ಯಕ್ತಿಗಳಿಗೆ ಗರ್ಭಿಣಿ ಸಂಪರ್ಕದಿಂದ ಮೇ 6 ರಂದು ಕೋವಿಡ್‌ ದೃಢಪಟ್ಟಿತ್ತು. ಈಗ ಈ ಮೂವರು ಕೋವಿಡ್‌ದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 91 ಸ್ಯಾಂಪಲ್‌ಗ‌ಳ ವರದಿ ಬರಬೇಕಾಗಿದೆ. ಹೊಸದಾಗಿ ಮತ್ತೆ 222 ಸ್ಯಾಂಪಲ್‌ಗ‌ಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಇನ್‌ಸ್ಟಿಟ್ಯೂಟ್‌ ಕ್ವಾರಂಟೈನ್‌ನಲ್ಲಿ ಒಟ್ಟು 2415 ಜನರನ್ನು ಇರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 5664 ಜನರ ಸ್ಯಾಂಪಲ್‌ ಕಳುಹಿಸಲಾಗಿದ್ದು, ಈ ಪೈಕಿ 5244 ನೆಗೆಟಿವ್‌, 77 ಪಾಸಿಟಿವ್‌ ವರದಿ ಬಂದಿವೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಕೋವಿಡ್‌-19 ದಿಂದ ಶನಿವಾರದ 3 ಜನ ಸೇರಿ ಒಟ್ಟು 42 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 34 ಜನ ಕೋವಿಡ್‌ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇನ್ನು 7 ಕಂಟೇನ್ಮೆಂಟ್‌ ಝೋನ್‌ಗಳಿವೆ. ಇಲ್ಲಿವರೆಗೆ ಒಟ್ಟು 13 ಸ್ಯಾಂಪಲ್‌ಗ‌ಳು ರಿಜೆಕ್ಟ್ ಆಗಿರುತ್ತವೆ. 14 ದಿನಗಳ ಕಾಲ ಇನ್‌ಸ್ಟಿಟ್ಯೂಶನ್‌ ಕ್ವಾರಂಟೈನ್‌ನಲ್ಲಿದ್ದ 305 ಜನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ 9 ಚೆಕ್‌ಪೋಸ್ಟ್‌ಗಳ ಪೈಕಿ 4 ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿವರೆಗೆ ಚೆಕ್‌ಪೋಸ್ಟ್‌ಗಳ ಮೂಲಕ 53,021 ವಾಹನಗಳ ತಪಾಸಣೆ ಹಾಗೂ 2,04,659 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಢಾಣಕಶಿರೂರಿನ 23 ವರ್ಷದ ಗರ್ಭಿಣಿಗೆ ಮೇ 3ರಂದು ಸೋಂಕು ದೃಢಪಟ್ಟಿತ್ತು. ಅವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿತ್ತು. ಮಹಿಳೆ ಉಳಿಸಿಕೊಳ್ಳಲು ಗರ್ಭಪಾತ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಗರ್ಭಪಾತದ ಬಳಿಕ ಕೋವಿಡ್‌ ಚಿಕಿತ್ಸೆ ಮುಂದುವರಿಸಿ, ಶನಿವಾರ ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಆ ಮಹಿಳೆಯಿಂದ ಢಾಣಕಶಿರೂರಿನಲ್ಲಿ ಮೇ 6ರಂದು 12 ಜನ, ಮೇ 7ರಂದು ಮೂವರು, ಮೇ 11ರಂದು ಓರ್ವ ಹಾಗೂ
ಮೇ 19ರಂದು ನಾಲ್ವರು ಸೇರಿ ಒಟ್ಟು 19 ಜನರಿಗೆ ಸೋಂಕು ವಿಸ್ತರಣೆಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next