Advertisement
ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ 5.20 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪರಪ್ಪು³-ಆದೂರ್ ಪೆರಾಲ್ ರಸ್ತೆಗೆ ಸೆ. 14ರಂದು ಶಿಲಾನ್ಯಾಸ ನೆರವೇರಿಸಿ ಶಾಸಕರು ಮಾತನಾಡಿದರು. ತಾಲೂಕಿನ ಅಭಿವೃದ್ಧಿ ನಮ್ಮ ಗುರಿಯಾಗಿದ್ದು, ಸುಮಾರು 600 ಕೋ. ರೂ.ಗಳ ಅನುದಾನವನ್ನು ತಾಲೂಕಿಗೆ ತರುವಲ್ಲಿ ಶ್ರಮಿಸಿದ್ದೇನೆ. ಇದೀಗ ಮತ್ತೆ ಗ್ರಾಮ ಗ್ರಾಮದ ಅಭಿವೃದ್ಧಿ ಕನಸನ್ನು ಕಾಣುತ್ತಿದೆ ಎಂದು ಅವರು ಹೇಳಿದರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಮನಸ್ಸಿನಲ್ಲಿ ಅಭಿವೃದ್ಧಿ ಕಲ್ಪನೆ ಇದ್ದರೆ ಯಾವ ರೀತಿ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಶಾಸಕ ಹರೀಶ್ ಪೂಂಜ ಸಾಕ್ಷಿಯಾಗಿದ್ದಾರೆ. ಜನರ ಸೇವೆಗಾಗಿ, ತಾಲೂಕಿನ ಅಭಿವೃದ್ಧಿಗಾಗಿ ಯುವ ಶಾಸಕನಾಗಿ ಮಾಡುತ್ತಿರುವ ಶ್ರಮ ರಾಜ್ಯಕ್ಕೆ ಮಾದರಿ ಎಂದರು.