ಜಮಖಂಡಿ: ಜೆಡಿಎಸ್ ಪಕ್ಷ ಸಂಘಟನೆಗೆ ಎಲ್ಲರೂ ಶ್ರಮಿಸಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತಿಯನ್ನಾಗಿ ಅ ಧಿಕಾರಕ್ಕೆ ತರಲು ಸಿದ್ಧತೆ ನಡೆದಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಚನ್ನಬಸು ಕತಾಟೆ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 31ರಂದು ಬಾಗಲಕೋಟೆಗೆ ಆಗಮಿಸಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ತಾಲೂಕಿನಿಂದ ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ತೆರಳಲಿದ್ದಾರೆ. ವಿವಿಧ ಪಕ್ಷಗಳನ್ನು ತೊರೆದು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ ಆಗಲಿದ್ದಾರೆ.
ಜಮಖಂಡಿ ಜಿಲ್ಲೆ ಮತ್ತು ಸಾವಳಗಿ ತಾಲೂಕು ಕೇಂದ್ರ ಘೋಷಣೆ, ರೇಲ್ವೆ ಮಾರ್ಗ ಚಾಲನೆಗೆ ಜೆಡಿಎಸ್ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮನವರಿಕೆ ಮಾಡಲಾಗುವುದು. ಬೇಡಿಕೆಗಾಗಿ ಬೆಂಗಳೂರ ಚಲೋ ಚಳವಳಿ ಸಿದ್ಧತೆ ನಡೆದಿದೆ ಎಂದರು. ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡುವಂತೆ ಕುಮಾರಸ್ವಾಮಿ ಅವರನ್ನು ಒತ್ತಾಯಿಸಲಾಗಿದ್ದು, ಉತ್ತರ ಕರ್ನಾಟಕಕ್ಕೆ ಸಭಾಪತಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಮುಂದಿನ ಜಿಪಂ ಚುನಾವಣೆಯಲ್ಲಿ 5 ಕೇತ್ರದಲ್ಲಿ ಹಾಗೂ ತಾ.ಪಂ. 19 ಕೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಕಳೆದ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹೇಳಿಕೊಳ್ಳುವಷ್ಟು ಸಾಧನೆ ಮಾಡದೇ ಇದ್ದರೂ ಮುಂದಿನ ದಿನಮಾನದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಕಾರ್ಯಕರ್ತರನ್ನು ಮತ್ತೇ ಪಕ್ಷಕ್ಕೆ ಕರೆ ತರುವ ಕೆಲಸ ನಡೆದಲಿದೆ.
ಇದನ್ನೂ ಓದಿ:ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್ ಕಾಲೇಜುಗಳ ಉಪನ್ಯಾಸಕರ ವರ್ಗಕ್ಕೆ ಕೌನ್ಸೆಲಿಂಗ್: ಡಿಸಿಎಂ
ಕುಮಾರಸ್ವಾಮಿ ಅವರ ಪಂಚಸೂತ್ರ, ಸಾಲಮನ್ನಾಗಳಂತಹ ಯೋಜನೆ ರಾಜ್ಯದಲ್ಲಿ ಮತ್ತೇ ಜಾರಿಗೊಳಿಸುವ ಉದ್ದೇಶ ಕುಮಾರಸ್ವಾಮಿ ಹೊಂದಿದ್ದು, ಈ ಕುರಿತು ಚಿಂತನ-ಮಂಥನ ನಡೆಸಲಾಗುತ್ತಿದೆ ಎಂದರು. ಜೆಡಿಎಸ್ ಮುಖಂಡ ಗುಡುಸಾಬ ಹೊನವಾಡ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾಡಯ್ನಾ ಹಿರೇಮಠ, ನಿಸಾರ ಜೈನಾಪುರ, ಮಹ್ಮದಸಾಬ ಕಕ್ಕೇರಿ, ಡಿ.ಎಸ್ .ಪಾಟೀಲ, ಅಸ್ಲಂ ಜಮಾದರ, ಕಡಪ್ಪ ಹೊಸಮನಿ ಇದ್ದರು.