ತೋಟಗಾರಿಕಾ ಕೃಷಿಗೆ ಆದ್ಯತೆ ನೀಡಲಾಗುವುದು ಎಂದ ತೋಟಗಾರಿಕಾ ಸಚಿವ ಎಂ.ಸಿ.ಮನಗೊಳಿ, ಹೆಚ್ಚು ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಗುಲ್ಬರ್ಗಾ ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ರೈತರ ಬೇಡಿಕೆಗೆ ಅನುಗುಣನವಾಗಿ ಪಾಲಿಹೌಸ್ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
Advertisement
ಚಿಕ್ಕಬಳ್ಳಾಪುರ ತಾಲೂಕಿನ ಐತಿಹಾಸಿಕ ನಂದಿ ಗಿರಿಧಾಮದಲ್ಲಿ ಬುಧವಾರ ಜಿಲ್ಲೆಯ ತೋಟಗಾರಿಕಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅವರು ಮಾತನಾಡಿ, ಕೃಷಿ ಸಚಿವರು, ನಾನು ಇತ್ತೀಚೆಗೆ ಇಸ್ರೇಲ್‌ಗೆ ಎಂಟು ದಿನಗಳ ಅಧ್ಯಯನ ಪ್ರವಾಸ ಕೈಗೊಂಡಿದ್ದು. ಅದರಂತೆ ಇಸ್ರೇಲ್ ಮಾದರಿಯಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸಬಹು ದಾದ ಕೃಷಿ ಪದ್ಧತಿಗಳ ಬಗ್ಗೆ ವರದಿಯೊಂದನ್ನು ಮುಂದಿನ ಸಚಿವ ಸಂಪುಟದ ಮುಂದೆ ತರಲಾಗುವುದು ಎಂದರು.
ಪದ್ಧತಿಗಳು ಅಗತ್ಯವಿದೆ. ರೈತರು ಕೇವಲ ಆಹಾರ ಪದಾರ್ಥಗಳಾದ ಭತ್ತ, ಮುಸುಕಿನ ಜೋಳ ಬೆಳೆದರೆ ಮಾತ್ರ
ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಿಲ್ಲ. ರೈತರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಗೊಳ್ಳಬೇಕಾದರೆ ಹಣ್ಣು, ತರಕಾರಿ ಬೆಳಗಳನ್ನು ಹೆಚ್ಚು ಬೆಳೆಯಲು ಪ್ರೋತ್ಸಾಹಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೃಷಿ ಜತೆಗೆ ತೋಟಗಾರಿಕಾ ಬೆಳೆಗಳಿಗೂ ಇಸ್ರೇಲ್ ಮಾದರಿ ತೋಟಗಾರಿಕಾ ಪದ್ಧತಿಯನ್ನು ಅನುಷ್ಠಾನಗೊಳಿಸಲು ನಿರ್ಧರಿದೆ. ಇಸ್ರೇಲ್‌ನಲ್ಲಿ ಹನಿ ನೀರಾವರಿ ಬಳಕೆ ಮಾಡಿ ನೀರಿನ ಮಿತ ಬಳಕೆ ಮಾಡಲಾಗುತ್ತಿದೆ. ಜತೆಗೆ ಸಾಕಷ್ಟು ವೈಜ್ಞಾನಿಕವಾಗಿ ಅಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಬೆಳೆಯಿಂದ ಬೆಳೆಗೆ ಸಾಕಷ್ಟು ಅಂತರ ಇರುತ್ತದೆ. ಅದೇ ರೀತಿ ರಾಜ್ಯದ ರೈತರಿಗೂ ಸಹ ಇಸ್ರೇಲ್ ಮಾದರಿ ಕೃಷಿ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು. ಚಿಕ್ಕಬಳ್ಳಾಪುರಕ್ಕೆ ಕೋಲ್ಡ್ ಸ್ಟೋರೆಜ್: ಜಿಲ್ಲೆಯಲ್ಲಿ ದ್ರಾಕ್ಷಿ, ಟೊಮೆಟೋ, ಆಲೂಗಡ್ಡೆ, ಹೂ, ಹಣ್ಣುಗಳನ್ನು ಹೆಚ್ಚಿನ
ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಬೆಳೆಗಳ ಸಂಸ್ಕರಣೆಗೆ ಅಗತ್ಯವಾಗಿ ಬೇಕಾದ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ದ್ರಾಕ್ಷಿ ಬೆಳೆಗೆ ಸಂಬಂಧಿಸಿದಂತೆ ವೈನ್‌ಪಾಕ್ ಆರಂಭಕ್ಕೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
Related Articles
Advertisement