Advertisement

ಸ್ವತ್ಛತೆಗೆ ಆದ್ಯತೆ ನೀಡಿ: ಮುದ್ನಾಳ

03:42 PM Sep 24, 2018 | |

ಯಾದಗಿರಿ: ಪ್ರತಿಯೊಬ್ಬರು ಸ್ವತ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು. ನಗರದ ವಾರ್ಡ್‌ ನಂ. 17 ಮತ್ತು 18ರಲ್ಲಿ ಸ್ವತ್ಛ ಭಾರತ ಅಭಿಯಾನದಡಿ ಏರ್ಪಡಿಸಿದ್ದ ಸ್ವತ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸರ್ಕಾರ ಪ್ಲಾಸ್ಟಿಕ್‌ ನಿಷೇಧಿ ಸಿದ್ದರೂ ಬಳಕೆ ಮಾತ್ರ ನಿಲ್ಲುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದ ಅವರು, ಯಾವುದೇ ತ್ಯಾಜ್ಯ ವಸ್ತು ಚರಂಡಿಯಲ್ಲಿ ಹಾಕುವುದರಿಂದ ನೀರು ಸರಳವಾಗಿ ಹರಿಯುವುದು ನಿಂತು ಸೊಳ್ಳೆ ಉತ್ಪತ್ತಿಗೆ ಅವಕಾಶ ನೀಡಿದಂತಾಗುತ್ತದೆ ಎಂದು ತಿಳಿಸಿದರು.

Advertisement

ಮಾಜಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ನಗರ ಸ್ವತ್ಛವಾಗಿಡಲು ನಗರಸಭೆ ಜೊತೆಯಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕು. ನಗರಸಭೆಯಲ್ಲಿ ಸ್ವತ್ಛತೆಗಾಗಿ ಹೆಚ್ಚಿನ ಒತ್ತು ನೀಡಲು ನಾವೆಲ್ಲರೂ ಕಂಕಣ ಬದ್ಧರಾಗಬೇಕು ಎಂದು ಹೇಳಿದರು. 

ಸ್ವತ್ಛತಾ ಅಭಿಯಾನದಲ್ಲಿ ನಗರಸಭೆ ಸದಸ್ಯ ಹಣಮಂತ ಇಟಗಿ, ಮಂಜುನಾಥ ದಾಸನಕೇರಿ, ಬಸಮ್ಮ ಕುರಕುಂಬಳ, ರಾಮು ರಾಠೊಡ, ಸ್ವಾಮಿದೇವ ದಾಸನಕೇರಿ, ಎಸ್‌.ಪಿ. ನಾಡೇಕರ್‌, ಮಲ್ಲಿಕಾರ್ಜುನ ಕುರಕುಂಬಳ, ಮಹೇಶ ಕುರುಕುಂಬಳ, ಸಾಯಬಣ್ಣ ಸುಂಗುಲಕರ್‌, ಶರಣಗೌಡ ಬಾಡಿಯಾಳ, ವೆಂಕಟರೆಡ್ಡಿ ಅಬ್ಬೆತುಮಕೂರು, ದೇವೀಂದ್ರನಾಥ ನಾದ, ಸುರೇಶ ರಾಠೊಡ, ಮಹಾದೇವಪ್ಪ ಗಣಪುರ, ಪೌರಾಯುಕ್ತ ಸಂಗಪ್ಪ ಉಪಾಸೆ, ಮಲ್ಲಿಕಾರ್ಜುನ, ಬಲವಂತ ದಾಸನಕೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next