Advertisement

Kandagal: ಗಬ್ಬೆದು ನಾರುತ್ತಿರುವ ಮಲೀನ ನೀರು; ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು

03:52 PM Jun 16, 2024 | Team Udayavani |

ಕಂದಗಲ್ಲ: ಇಳಕಲ್ಲ ತಾಲೂಕಿನ ಇಂಗಳಗಿ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರಕಾರಿ ಶಾಲೆಯ ಆವರಣ ಮುಂದೆ ಮಳೆ ನೀರು ನಿಂತು ಅದು ಸಂಪೂರ್ಣವಾಗಿ ಮಲೀನಗೊಂಡು ಗಬ್ಬೆದು ನಾರುತ್ತಿದ್ದರಿಂದ ಅಲ್ಲಿನ ನಿವಾಸಿಗಳು ನರಕಯಾತನೆಯಲ್ಲಿ ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Advertisement

ದಿನನಿತ್ಯ ನೂರಾರು ಮಕ್ಕಳು ಅಲ್ಲಿ ಆಟ ಆಡುತ್ತಾರೆ. ನಿಂತ ಮಲೀನ ನೀರಿನಲ್ಲಿಯೇ ಆಟ ಆಡುತ್ತಿದ್ದರಿಂದ ಮಕ್ಕಳಿಗೆ ರೋಗ ರುಜಿನಗಳು ಬರುವ ಭಯದಲ್ಲಿ ಮಕ್ಕಳ ಪಾಲಕರು ಹೆದರುತ್ತಿದ್ದಾರೆ.

ಅಲ್ಲಿನ ಸಾರ್ವಜನಿಕರು ಎರಡು ವರ್ಷಗಳಿಂದ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಗೊರಬಾಳ ಗ್ರಾಮ ಪಂಚಾಯತ್‌ ಗೆ ಹಲವು ಬಾರಿ ಮನವಿ ಮಾಡಿದರೂ ಇದರತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳಾದ ಶಿವುಕುಮಾರ ಬೆಳ್ಳಿಹಾಳ, ರಮೇಶ ನಾಗರಾಳ, ಶಿವಪುತ್ರಯ್ಯ ಮಠಪತಿ, ಶರತಕುಮಾರ ಲೋಕಾಪೂರ ತಮ್ಮ ನೋವನ್ನು ತೋಡಿಕೊಂಡರು.

ಸರಕಾರ ಸ್ವಚ್ಚತೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸ್ಚಚ್ಚತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದರೂ ಇಲ್ಲಿ ಮಾತ್ರ ಸ್ವಚ್ಚತೆ ಎನ್ನುವುದೇ ಏನು ಎಂಬಂತೆ ಇದೆ.

Advertisement

ಸ್ಥಳೀಯ ಅಧಿಕಾರಿಗಳು ಗಮನ ಹರಿಸದ ಕಾರಣ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಜೂನ್ 6 ರಂದು ಗ್ರಾಮದ ಸಮಸ್ಯೆ ಪರಿಹರಿಸುವಂತೆ ಮನವಿ ನೀಡಿದ್ದಾರೆ. ಈ ಸಮಸ್ಯೆ ಪರಿಹರಿಸದೇ ಹೋದರೆ ಗ್ರಾಮದ ಜನರು ಉಗ್ರ ಪ್ರತಿಭಟನೆ ಮಾಡಲಾಗವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮದ ಜನರು ನೋವನ್ನು ತೋಡಿಕೊಂಡಿದ್ದರಿಂದ ಗೊರಬಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಎ.ದಖನಿ ವಿಚಾರಿಸಿದಾಗ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿ ಬಂದಿದ್ದೇನೆ ಒಂದು ವಾರದ ಒಳಗಡೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಅವರು ತಿಳಿಸಿದ್ದಾರೆ.

ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಗ್ರಾಮಕ್ಕೆ ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ ಗೊರಬಾಳ ಗ್ರಾಮ ಪಂಚಾಯತಿಗೆ ಅಲೆದಾಡಿ ಅಲೆದಾಡಿ ಸಾಕಾಗಿದೆ. – ಶಿವು ಬೆಳ್ಳಿಹಾಳ ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next