Advertisement

Mangaluru: ಬೀದಿ ವ್ಯಾಪಾರದ ಸ್ಥಳದಲ್ಲಿ ಶುಚಿತ್ವದ ಕೊರತೆ

03:29 PM Aug 07, 2024 | Team Udayavani |

ಸುರತ್ಕಲ್‌: ಮಳೆಗಾಲದಲ್ಲಿ ಬೀದಿ ವ್ಯಾಪಾರದ ಸ್ಥಳದಲ್ಲಿ ಕೊಳೆತ ತರಕಾರಿ, ಹಣ್ಣುಹಂಪಲು ತೋಡು ಸೇರಿದರೆ, ಮೀನು ವ್ಯಾಪಾರದ ನೀರು ರಸ್ತೆ ಬದಿಯೇ ಸುರಿಯಲಾಗುತ್ತಿತ್ತು. ತಾತ್ಕಾಲಿಕ ಶೆಡ್‌ಗಳಲ್ಲಿ ನೀರು ನಿಂತು ಸ್ವಚ್ಛತೆಗೆ ಧಕ್ಕೆ ತರಲಾಗುತ್ತಿದೆ.

Advertisement

ಸೊಳ್ಳೆ ಉತ್ಪತ್ತಿಯ ತಾಣವಾಗಿಯೂ ಮಾರ್ಪಾಡಾಗುತ್ತಿರುವುದು ಟೈಗರ್‌ ಕಾರ್ಯಾಚರಣೆಯ ವೇಳೆ ಕಂಡುಬಂದಿದೆ. ಸುರತ್ಕಲ್‌ ಮಾರ್ಕೆಟ್‌ಬಳಿ, ಕಾನಾ ,ಕಾಟಿಪಳ್ಳ ಸಹಿತ ವಿವಿಧೆಡೆ ಕಾರ್ಯಾಚರಣೆ ಮುಂದುವರೆಯಿತು. ಸುರತ್ಕಲ್‌ ಪಾಲಿಕೆ ವಿಭಾಗೀಯ ವ್ಯಾಪ್ತಿಯಲ್ಲಿ ನಿರತಂತರವಾಗಿ ಬೀದಿ ಬದಿ ವ್ಯಾಪಾರದ ತೆರವು, ಶೆಡ್‌ ತೆರವು ಸಹಿತ ಫುಟ್‌ ಪಾತ್‌ ಅತಿಕ್ರಮಣವನ್ನು ತೆರವು ಮಾಡಿ ಮುಂದೆ ಅತಿಕ್ರಮಣ ಮಾಡದಂತೆ ಬ್ಯಾನರ್‌ ಅಳವಡಿಸಲಾಗಿದೆ.

ಸ್ವತ್ಛತೆ ಕಾಪಾಡದ ಅಂಗಡಿ ಮಾಲಕರಿಗೆ ದಂಡ ವಿಧಿಸಿ ಎಚ್ಚರಿಕೆಯನ್ನೂ ನೀಡಲಾಯಿತು. ಸುರತ್ಕಲ್‌ ವಿಭಾಗೀಯ ಆಯುಕ್ತೆ ವಾಣಿ ವಿ ಆಳ್ವ ನೇತೃತ್ವದಲ್ಲಿ ಆರೋಗ್ಯ ವಿಭಾಗದ ಸಂಜಯ್‌, ಸುಭಾಶ್‌, ಕಂದಾಯ ವಿಭಾಗದ ಜಿ.ಮೂರ್ತಿ, ಯಾದವ್‌, ಪಾಲಿಕೆ ಸೂಪರ್‌ ವೈಸರ್‌ಗಳ ತಂಡದ ಕಾರ್ಯಾಚರಣೆಗೆ ಪೊಲೀಸರು ಭದ್ರತೆ ಒದಗಿಸಿದರು.

ಅನಧಿಕೃತ ಬೀದಿ ಬದಿ ವ್ಯಾಪಾರವನ್ನು ತೆರವುಗೊಳಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆಯ “ಆಪರೇಷನ್‌ ಟೈಗರ್‌ ಕಾರ್ಯಾಚರಣೆ’ ಮುಂದುವರೆದಿದೆ.

ಸೋಮವಾರ ರಾತ್ರಿ ನಗರದ ಲೇಡಿಹಿಲ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರವು ಕಾರ್ಯಚರಣೆ ನಡೆಯಿತು. ಪಾಲಿಕೆಯ ವಲಯ ಆಯುಕ್ತೆ ರೇಖಾ ಜೆ. ಶೆಟ್ಟಿ ನೇತೃತ್ವ ವಹಿಸಿದ್ದರು. ಪಾಲಿಕೆಯ ಆರೋಗ್ಯ, ಕಂದಾಯ ಇಲಾಖೆ ಸಹಿತ ಇತರ ಇಲಾಖೆ ಅಧಿಕಾರಿಗಳು, ಸಿಬಂದಿ ಇದ್ದರು.

Advertisement

ಇಂದು ನಗರ ಪಾಲಿಕೆ ಕಚೇರಿ ಚಲೋ

ಮಂಗಳೂರು ಮಹಾನಗರ ಪಾಲಿಕೆಯಿಂದ ಟೈಗರ್‌ ಕಾರ್ಯಾಚರಣೆ ಹೆಸರಿನಲ್ಲಿ ಬಡ ಬೀದಿಬದಿ ವ್ಯಾಪಾರಿಗಳ ಬದುಕುವ ಹಕ್ಕನ್ನು ಕಸಿಯುತ್ತಿದೆ ಎಂದು ಆರೋಪಿಸಿ, ಸಮಾನಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಆ.7ರಂದು ಬೆಳಗ್ಗೆ 10.45ಕ್ಕೆ ನಗರದ ಪಿವಿಎಸ್‌ ಜಂಕ್ಷನ್‌ನಿಂದ ಮೆರವಣಿಗೆ ಹೊರಟು 11ಗಂಟೆಗೆ ಲಾಲ್‌ ಬಾಗ್‌ನಲ್ಲಿರುವ ನಗರಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next