Advertisement
ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಇಲಾಖೆಗೆ ಸಂಬಂಧಿಸಿದಂತೆ ತಮ್ಮ ದೂರದೃಷ್ಟಿ ಹಾಗೂ ಚಿಂತನೆಗಳನ್ನು ಹಂಚಿಕೊಂಡರು.
Related Articles
Advertisement
ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ “ಡಿಜಿಟಲ್ ಪವರ್ ಟು ಎಂಪವರ್‌ವೆುಂಟ್’ ಎಂಬ ಘೋಷಣೆ ಮಾಡಿದ್ದರು. ತಂತ್ರಜ್ಞಾನ ಜನರ ಜೀವನ ಮಟ್ಟವನ್ನು ಅಭಿವೃದ್ದಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಮಹತ್ತರವಾದ ಯೋಜನೆಗಳನ್ನು ಪ್ರಧಾನಿ ಮೋದಿ ಜಾರಿ ಗೊಳಿಸಿದ್ದಾರೆ. ಈ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸ ಲಾಗುವುದು. ಇಂದು ಸರಕಾರದ ಆನೇಕ ಸೌಲಭ್ಯಗಳು ಜನರ ಬಳಿಗೆ ತ್ವರಿತವಾಗಿ ಹಾಗೂ ಯಾವುದೇ ಅಡೆತಡೆ ಇಲ್ಲದೆ ತಲುಪಲು ಸಾಧ್ಯವಾಗಿದೆ. ಸರಕಾರ ಜನ
ಕಲ್ಯಾಣಕ್ಕೆ ವೆಚ್ಚ ಮಾಡುವ ಒಂದು ರೂಪಾಯಿ
ಯಲ್ಲಿ ಕೇವಲ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂಬ ಅಂಶವನ್ನು ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು. ಆದರೆ ಪ್ರಸ್ತುತ ನರೇಂದ್ರ ಮೋದಿ ಅವರ ದಕ್ಷ ಆಡಳಿತ ಹಾಗೂ ಡಿಜಿಟಲೈಸೇಶನ್ ಪ್ರಕ್ರಿಯೆಯಿಂದಾಗಿ ಸರಕಾರ ಜನಪರ ಯೋಜನೆಗಳಿಗೆ ವೆಚ್ಚ ಮಾಡುವ ಪ್ರತಿಯೊಂದೂ ರೂಪಾಯಿ ಕೂಡ ಜನರಿಗೆ ತಲುಪಲು ಸಾಧ್ಯವಾಗಿದೆ.
ಕೌಶಲ ಅಭಿವೃದ್ಧಿ ನಿಟ್ಟಿನಲ್ಲಿ ಇಲಾಖೆಯ ಮುಂದಿನ ಕಾರ್ಯ-ಯೋಜನೆಗಳೇನು?
ಕೌಶಲ ಅಭಿವೃದ್ಧಿಯ ನಿಟ್ಟಿನಲ್ಲಿ ಇನ್ನಷ್ಟು ಉಪಕ್ರಮ ಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರಧಾನಿ ಮೋದಿ ಅವರು ಈಗಾಗಲೇ ಘೋಷಿಸಿರುವ ನೂತನ ಶಿಕ್ಷಣ ನೀತಿಯು ಕೌಶಲ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಲಿದೆ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಶಿಕ್ಷಣದ ಗುರಿಯ ಬಗ್ಗೆ ಸ್ಪಷ್ಟತೆಯನ್ನು ಮೂಡಿಸಲಾಗುತ್ತದೆ ಮತ್ತು ಅವರಿಗೆ ವೃತ್ತಿಯಾಧಾರಿತ ಅಥವಾ ಉನ್ನತ ಶಿಕ್ಷಣ ವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಸ್ಪಷ್ಟ ದಿಕ್ಕು ತೋರಿಸಲಿದೆ. ಉದ್ಯೋಗಾಧಾರಿತ ಕೌಶಲಗಳು ನೂತನ ಶಿಕ್ಷಣ ನೀತಿ ಯಲ್ಲಿ ಸೇರಿವೆ. ಇದರಲ್ಲಿ ಕೇಂದ್ರ ಕೌಶಲ ಅಭಿವೃದ್ಧಿ ಇಲಾ ಖೆಯ ಕೂಡಾ ಮಹತ್ವರ ಪಾತ್ರವನ್ನು ನಿರ್ವಹಿಸಲಿದೆ.
ಜನಾಶೀರ್ವಾದ ಯಾತ್ರೆ ಅನುಭವ ಹೇಗಿದೆ?
ಇದೊಂದು ವಿಶಿಷ್ಟ ಅನುಭವ. ಜನತೆ ಅಶೀರ್ವಾದ ಮಾಡಿದ್ದಾರೆ. ಅವರನ್ನು ಸಂಪರ್ಕಿಸಿ, ಅವರಿಗೆ ಅಭಿನಂದನೆ ಸಲ್ಲಿಸಿ, ಸಂವಾದ ನಡೆಸಿ, ಅವರ ಅಭಿಪ್ರಾಯ ಪಡೆದುಕೊಳ್ಳುವ ಜತೆಯಲ್ಲಿ ಜನರ ನಿರೀಕ್ಷೆಗಳೇನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಜನಾ ಶೀರ್ವಾದ ಯಾತ್ರೆಯಲ್ಲಿ ಮಾಡಲಾಗುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಪ್ರಚಾರ, ಫಲಾಪೇಕ್ಷೆ ಯಿಲ್ಲದೆ ಜನರ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು ಅವರ ಈ ಕಾರ್ಯ ನಮಗೆ ಇನ್ನಷ್ಟು ಜನಸೇವೆಗೆ ಸ್ಫೂರ್ತಿಯನ್ನು ನೀಡಿದೆ.
ಡಿಜಿಟಲೈಸೇಶನ್ನ ವಿಸ್ತರಣೆ ಹೇಗೆ? :
ಪ್ರಧಾನಿ ನರೇಂದ್ರ ಮೋದಿ ಅವರ “ಸಬ್‌ಕಾ ಸಾಥ್, ಸಬ್ ಕಾ ವಿಕಾಸ್, ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್’ ಧ್ಯೇಯದ ಸಾಕಾರದಲ್ಲಿ ಡಿಜಿಟ ಲೈಸೇಶನ್‌ನ ಪಾತ್ರವು ಮಹತ್ವದ್ದಾಗಿದೆ. ಇಂಟರ್ ನೆಟ್ ಸಂಪರ್ಕ, ದೂರಸಂಪರ್ಕ ವ್ಯವಸ್ಥೆ ಹೆಚ್ಚಿಸು ವುದು, ಗುಣಮಟ್ಟದ ಸೇವೆ ಲಭ್ಯವಾಗುವಂತೆ ಮಾಡುವುದು ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಮೊಬೈಲ್ ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡುವ ಗುರಿಯನ್ನು ಇರಿಸಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಇಲಾಖೆಯು ಒತ್ತು ನೀಡಲಿದೆ.
-ಕೇಶವ ಕುಂದರ್