Advertisement
ಜಿಲ್ಲೆಯಲ್ಲಿ 1,745 ಕಿಂಟ್ವಾಲ್ ಭತ್ತದ ಬೀಜ ದಾಸ್ತಾನಿದೆ. ಮೇ 1ರಿಂದ ಜಿಲ್ಲೆಯ 9 ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ ನಡೆಯುತ್ತಿದೆ. ಈ ರೈತ ಕೇಂದ್ರಗಳಿಂದ ರೈತರು ಭತ್ತ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿದ್ದಾರೆ. ಮೇ 1ರಿಂದ 10ರ ವರೆಗಿನ 10 ದಿನಗಳ ಅಂತರದಲ್ಲಿ ನೋಂದಣಿ ಮಾಡಿಕೊಂಡ 220 ಮಂದಿ ರೈತರು ಬೀಜ ಕೊಂಡು ಹೋಗಿದ್ದಾರೆ. ಮೇ ಅಂತ್ಯದ ವರೆಗೆ ರೈತರಿಗೆ ಭತ್ತದ ಬೀಜ ವಿತರಣೆಯಾಗಲಿದೆ. ಬಹುತೇಕ ರೈತರು ನೋಂದಣಿ ಮಾಡಿಕೊಂಡಿದ್ದು , ಬಾಕಿ ಉಳಿದವರು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.
Related Articles
Advertisement
ಬೀಜಕ್ಕೆ 1 ಕೆ.ಜಿ.ಗೆ 30 ರೂ. ದರವಿದೆ. 8 ರೂ. ಸಬ್ಸಿಡಿ ದೊರಕುತ್ತದೆ. ಸ್ವಂತ ಜಮೀನು ಹೊಂದಿರದವರಿಗೆ, ಅನ್ಯ ಜಿಲ್ಲೆಗಳಲ್ಲಿ ವಾಸವಿದ್ದು ಭತ್ತದ ಕೃಷಿ ನಡೆಸುವವರಿಗೆ ಖರೀದಿ ವೇಳೆ ವಿನಾಯಿತಿ ಇರುವುದಿಲ್ಲ. ಭತ್ತದ ಕೃಷಿ ಮಾಡುವವರು ಮುಂದಿನ ಎರಡು ವರ್ಷಗಳಿಗೆ ಬೇಕಾಗುವಷ್ಟು ಬೀಜವನ್ನು ಸ್ವತಃ ರೈತರೇ ಈ ವರ್ಷದಿಂದ ಸಂಗ್ರಹಿಸಿಟ್ಟು ಕೊಳ್ಳಬೇಕು. ಮುಂದಿನ ಎರಡು ವರ್ಷ ಹಳೆ ರೈತರಿಗೆ ಬೀಜ ವಿತರರಣೆ ಇರುವುದಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.
ಯಂತ್ರಗಳು ಬಾಡಿಗೆಗೆಭತ್ತದ ಕೃಷಿಕರಿಗೆ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ವಿವಿಧ ಯಂತ್ರಗಳು ಬಾಡಿಗೆಗೆ ದೊರಕುತ್ತವೆ.
ಬ್ರಹ್ಮಾವರ, ಅಜೆಕಾರು, ಬೈಂದೂರು 3 ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಯಂತ್ರಗಳು ದೊರೆಯುತ್ತವೆ. ಕೃಷಿ ಯಂತ್ರಗಳ ಆವಶ್ಯಕತೆಯಿರುವವರು ಮುಂಗಡವಾಗಿ ಬಾಡಿಗೆ ಯಂತ್ರಗಳನ್ನು ಕಾಯ್ದಿರಿಸಿಕೊಳ್ಳಬೇಕು. ಮಾಹಿತಿಯ ಅವಶ್ಯವಿರುವವರು ಕೋಟ 8277929753, ಬ್ರಹ್ಮಾವರ 8277932503, ಉಡುಪಿ 8277929751 (8277932515 ಸಹಾಯಕ ನಿರ್ದೇಶಕರು), ಕಾಪು 8277929752, ಕುಂದಾಪುರ 8277929754 (8277932503 ಸಹಾಯಕ ನಿರ್ದೇಶಕರು), ವಂಡ್ಸೆ 8277929755,ಬೈಂದೂರು 8277932520, ಕಾರ್ಕಳ 8277932523 (8277932505 ಸಹಾಯಕ ನಿರ್ದೇಶಕರು) ಅಜೆಕಾರು 8277932527 ಈ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೃಷಿ ಇಲಾಖೆ ತಿಳಿಸಿದೆ. ಬೀಜ ವಿತರಣೆ
ಭತ್ತದ ಕೃಷಿ ಚಟುವಟಿಕೆ ನಡೆಸುವ ರೈತರಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬೀಜದ ವಿತರಣೆಯಾಗುತ್ತಿದೆ. ವಿತರಣೆ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಮುಂದಿನ ಎರಡು ವರ್ಷಗಳಿಗೆ ಬೇಕಾದ ಬಿತ್ತದ ಬೀಜವನ್ನು ರೈತರು ಈ ಬಾರಿ ಸಂಗ್ರಹಿಸಿಟ್ಟುಕೊಳ್ಳುವುದು ಅವಶ್ಯಕ.
-ಕೆಂಪೇಗೌಡ,ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ, ಉಡುಪಿ ಕಾಪು ರೈತ ಸಂಪರ್ಕ ಕೇಂದ್ರದಲ್ಲಿ
ಬಿತ್ತನೆ ಬೀಜಕ್ಕಾಗಿ ನೂಕುನುಗ್ಗಲು
ಕಾಪು: ಕೋವಿಡ್-19 ಹರಡು ವಿಕೆಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆಯೇ ಕಾಪುವಿನ ವಿವಿಧೆಡೆ ಜನಜಂಗುಳಿ ಹೆಚ್ಚಾಗುತ್ತಿದ್ದು ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಕ್ಕಾಗಿ ಜನ ಮುಗಿ ಬಿದ್ದ ಘಟನೆ ಸೋಮವಾರ ನಡೆದಿದೆ. ಮುಂಗಾರು ಋತು ಪ್ರಾರಂಭದ ಹಿನ್ನೆಲೆಯಲ್ಲಿ ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಯಾಗುತ್ತಿದ್ದು ಸೋಮವಾರ ನೂರಾರು ಮಂದಿ ರೈತರು ಏಕಾಏಕಿಯಾಗಿ ಕೃಷಿ ಕೇಂದ್ರಕ್ಕೆ ಆಗಮಿಸಿ, ಬಿತ್ತನೆ ಬೀಜ ಖರೀದಿಗೆ ತೊಡಗಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು. ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಸಾಮಾಜಿಕ ಅಂತರದ ಪಾಲನೆಯಿಲ್ಲದೆ ಜನರು ಗುಂಪು ಗೂಡಿರುವ ಬಗ್ಗೆ ಸ್ಥಳೀಯರು ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಾಪು ಎಎಸ್ಸೆ ರಾಜೇಂದ್ರ ಮಣಿಯಾಣಿ ಜನರೊಂದಿಗೆ ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆಯೊಂದಿಗೆ ಬಿತ್ತನೆ ಬೀಜ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದೆ ಎಚ್ಚರಿಕೆ
ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಕೃಷಿ ನಡೆಸುವ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಸೋಮವಾರ 80 ಮಂದಿಗೆ ಟೋಕನ್ ನೀಡಲಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ರೈತರು ಬಂದ ಪರಿಣಾಮ ನೂಕುನುಗ್ಗಲು ಉಂಟಾಗಿದೆ. ಬಿಸಿಲಿನಿಂದಾಗಿ ಜನ ಒಮ್ಮೆಲೇ ಒಳಗೆ ಬಂದ ಪರಿಣಾಮ ಜನರಿಗೆ ತೊಂದರೆಯಾಗಿದೆ. ಇದುವರೆಗೆ ಯಾವುದೇ ಗೊಂದಲವಿಲ್ಲದೆ 270 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಮುಂದೆ ಪ್ರತೀ ದಿನ 50 ಮಂದಿಗೆ ಮಾತ್ರ ಟೋಕನ್ ನೀಡಿ, ಯಾವುದೇ ತೊಂದರೆಯಿಲ್ಲದೆ ಬೀಜ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು.
-ಪುಷ್ಪಲತಾ, ಕೃಷಿ ಅಧಿಕಾರಿ, ಕಾಪು ರೈತ ಸಂಪರ್ಕ ಕೇಂದ್ರ