Advertisement
ಮಾತು ಮುತ್ತು, ಮಾತು ಜ್ಯೋರ್ತಿ ಲಿಂಗ, ಆಡುವ ಮೊದಲು ಯೋಚಿಸು, ನುಡಿದಂತೆ ನಡೆಯಬೇಕು, ಇಲ್ಲವಾದರೆ ಸುಮ್ಮನಿರಬೇಕು ಎನ್ನುವ ಅದೆಷ್ಟೋ ವಿಚಾರಗಳು ನಮಗೆ ತಿಳಿದಿದ್ದರೂ ಸಹ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹೊರಿಸಿ ನಾವು ನಿಶ್ಚಿಂತರಾಗಿ ಮಾತನಾ ಡುವಾಗ, ಮೇಲೆ ಹೇಳಿದ ಯಾವುದೇ ಮಾತಿನ ಕುರಿತು ಯೋಚಿಸುವುದಿಲ್ಲ.
Related Articles
Advertisement
ಈ ವಿಷಯದಲ್ಲಿ ನಾವು ಬೇರೆ-ಬೇರೆ ಮನೋಭಾವದವರನ್ನು ಕಾಣಬಹುದು. ಒಂದಿಷ್ಟು ಜನ ಏನೋ ಒಂದು ಕೆಲಸ ಮಾಡಿಮಾತನಾಡುವವರು. ಕೆಲವರು ಏನೂ ಮಾಡದೆ ಮಾತನಾಡಲು ತಿಳಿದಿದೆ ಎಂದು ಮಾತನಾಡುವವರು. ಇನ್ನು ಕೆಲ ವರು ಜವಾಬ್ದಾರಿ ಬಯಸದೇ ಕೇವಲ ಅಧಿಕಾರಕ್ಕಾಗಿ ಮಾತನಾಡುವವರು, ಇನ್ನು ಜವಾಬ್ದಾರಿ ವಹಿಸಿಕೊಳ್ಳಲು ಸ್ವಲ್ಪಮಟ್ಟಿನ ಆಸಕ್ತಿ ಇದ್ದರೂ ನನಗೆ ವೈಯಕ್ತಿಕವಾಗಿ ಕರೆ ಕೊಡಲಿಲ್ಲ. ನನ್ನ ಸಹಾಯ ಪ್ರತ್ಯೇಕವಾಗಿ ಕೇಳಲಿಲ್ಲ, ನಾನೇಕೆ ಹೋಗಬೇಕು? ಹಾಗೇನಾದರು ಹೋದರೆ ಅದು ನನ್ನ ಸ್ವಾಭಿಮಾನದ ಪ್ರಶ್ನೆ ಎನ್ನುವವರು. ಇವರ ಅಂತರಾಳದ ಆತ್ಮಕ್ಕೆ ನಿಜವಾಗಲೂ ಸಮಸ್ಯೆಗಳಿಗೆ ಸ್ಪಂದಿಸಿ, ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ನಾನು ಆ ಕೆಲಸ ಮಾಡುತ್ತೇನೆ ಎನ್ನುವ ಆತ್ಮಸ್ಥೆರ್ಯ ಖಂಡಿತಾ ಇರುವುದಿಲ್ಲ. “ಕೈಯಲ್ಲಿ ಆಗದೇ ಇರುವವರು ಮೈಯೆಲ್ಲ ಪರಚಿಕೊಂಡರು ಎನ್ನು ವಂತೆ’ ತನ್ನ ಕೈಯ ಲ್ಲಾಗದೇ ಇರುವುದನ್ನು ಬೇರೆಯವರು ಮಾಡಿದರೆ ಅಸೂಯೆ ಪಡುವ ಪ್ರವೃತ್ತಿ ಇವರದ್ದು. ಉಪದೇಶ ನೀಡುವುದು ಸುಲಭ, ಪಾಲಿಸುವುದು ಕಷ್ಟ. ಮಾತನಾಡುವುದು ಸುಲಭ, ಮಾಡುವುದು ಕಷ್ಟ. ಆದ್ದರಿಂದ ಏನನ್ನು ಮಾಡದೇ ಮಾಡಿದ ಕೆಲಸಕ್ಕೆ ಸರಿ-ತಪ್ಪುಗಳನ್ನು ಹೇಳುತ್ತಾ ತಮ್ಮನ್ನೇ ತಾವು ಅಧಮರೆನಿಸಿಕೊಳ್ಳುವುದನ್ನು ಈಗಿಂದೀಗಲೇ ನಿಲ್ಲಿಸೋಣ. ಸರ್ವರಿಗೂ ಉಪಕಾರಿಯಾಗುವ, ಸಮಾಜಕ್ಕೆ ಒಳಿತಾಗುವ ಕೆಲಸಗಳಿದ್ದರೆ ಆಡಿ ಸಮಯ ಹಾಳು ಮಾಡುವುದಕ್ಕಿಂತ ಅದೇನೆಂದು ನೋಡಿ ಬರುವುದು ಉತ್ತಮವಲ್ಲವೇ? ಇತರರ ನೋವು ಮತ್ತು ಸಂತೋಷವನ್ನು ನೋಡಿ, ಕೇಳಿ ಹಂಚಿಕೊಳ್ಳಬಹುದು ಆದರೆ ಅನುಭವಿಸಲಾರೆವು ತಾನೇ? ಸಾಧ್ಯವಾದರೆ ಇತರರಿಗೆ ಸಹಾಯ ಮಾಡುವ ಇಲ್ಲವಾ ದರೆ ತೊಂದರೆ ಕೊಡುವ ಕೆಲಸಕ್ಕೆ ಹೋಗು ವುದು ಖಂಡಿತಾ ಒಳ್ಳೆಯದಲ್ಲ. ಪರರನ್ನು ಹಳಿಯುವ ಬುದ್ಧಿ ನಮ್ಮದಾಗದಿರಲಿ. -ವಾಣಿಶ್ರೀ ಭಂಡಾರಿ ಅಮ್ಮಂಜೆ, ಉಡುಪಿ