ಭರಮಸಾಗರ : ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಪ್ರಿವೆಡ್ಡಿಂಗ್ ವಿಡಿಯೋ ಶೂಟ್ ನಡೆಸಿರುವ ಆರೋಪ ಕೇಳಿಬಂದಿದೆ.
ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯ ವೃತ್ತಿ ನಿರ್ವಹಿಸುತ್ತಿರುವ ಡಾ.ಅಭಿಷೇಕ್ ಮತ್ತು ಭಾವಿ ಪತ್ನಿ ಮೇಲೆ ಈ ಆರೋಪ ಕೇಳಿಬಂದಿದ್ದು. ಇದೀಗ ಪ್ರಿವೆಡ್ಡಿಂಗ್ ವಿಡಿಯೋ ಸಾಮಾಜಿಕ ಜಾಲತಾಲಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬರಿಗೆ ಆಪರೇಷನ್ ಥಿಯೇಟರ್ ನಲ್ಲಿ ಅಪರೇಷನ್ ನಡೆಸುತ್ತಿರುವ ಡಾ.ಅಭಿಷೇಕ್ ತನ್ನ ಭಾವಿ ಪತ್ನಿಯನ್ನು ಮತ್ತೊಂದು ಬದಿಯಲ್ಲಿ ನಿಲ್ಲಿಸಿಕೊಂಡು ತನಗೆ ಸಹಾಯ ಮಾಡುತ್ತಿರುವಂತೆ ನಟಿಸಿರುವ ವಿಡಿಯೋ ಹರಿದಾಡುತ್ತಿದೆ ಜೊತೆಗೆ ವಿಡಿಯೋ ಕಾರ್ಯ ನಡೆಸುತ್ತಿರುವ ಹುಡುಗರು ಖುಷಿಯಲ್ಲಿ ನಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸರ್ಕಾರಿ ಆಸ್ಪತ್ರೆಯ ಅಪರೇಷನ್ ಥಿಯೇಟರ್ ನ್ನು ಹೀಗೆ ಸ್ವಂತಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ಬೇಜವಬ್ದಾರಿ ಮೇರೆದಿರುವ ಡಾ.ಅಭಿಷೇಕ್ ಜೋಡಿಯ ವಿರುದ್ದ ಎಲ್ಲೆಡೆಯಿಂದ ತೀವ್ರ ಖಂಡನೆ ಕೇಳಿಬರುತ್ತಿದೆ.
ಇದನ್ನೂ ಓದಿ: Ramanagara: ಸಿದ್ದಪ್ಪಾಜಿ ದೇವರ ಮುಂದೆ ಕೈಮುಗಿದು ನಿಂತ ಜಾಂಬವಂತ.! CCTVಯಲ್ಲಿ ದೃಶ್ಯ ಸೆರೆ