Advertisement

ಪ್ರಸವ ಪೂರ್ವ ಲಿಂಗಪತ್ತೆ ಅಪರಾಧ: ಪೂವಿತ

01:21 PM May 24, 2020 | mahesh |

ಚಿಕ್ಕಮಗಳೂರು: ಪ್ರಸವಪೂರ್ವ ಲಿಂಗಪತ್ತೆ ಹಾಗೂ ಹತ್ಯೆ ಮಾಡುವುದು ಕಾನೂನಿನಡಿ ಶಿಕ್ಷಾರ್ಹ ಅಪರಾಧ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
ಎಸ್‌. ಪೂವಿತ ಹೇಳಿದರು. ಶುಕ್ರವಾರ ನಗರದ ಜಿಪಂ ಮಿನಿ ಸಭಾಂಗಣದಲ್ಲಿ ನಡೆದ ಸಿ.ಪಿ ಮತ್ತು ಪಿ.ಎನ್‌.ಡಿ.ಟಿ. ಜಿಲ್ಲಾ ಸಲಹ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಿ.ಪಿ. ಮತ್ತು ಪಿ.ಎನ್‌.ಡಿ.ಟಿ. ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರೊಂದಿಗೆ ಹೆಣ್ಣುಮಕ್ಕಳ ಅನುಪಾತ ಹೆಚ್ಚಿಸಿ ಹೆಣ್ಣು ಮತ್ತು ಗಂಡು ಮಕ್ಕಳ ಅನುಪಾತವನ್ನು ಸಮಗೊಳಿಸಬೇಕು. ಗಂಡು ಮಗು ಬೇಕು ಎನ್ನುವ ಪೋಷಕರ ಹಂಬಲ ಹಾಗೂ ಮೂಢನಂಬಿಕೆಗಳು ಹೆಣ್ಣು ಶಿಶು ಹತ್ಯೆಗೆ ಕಾರಣವಾಗಿದೆ. ಸಮಾಜದಲ್ಲಿ ಇದನ್ನು ಹೋಗಲಾಡಿಸಬೇಕು ಎಂದರು.

Advertisement

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಕ್ಯಾನಿಂಗ್‌ ಕೇಂದ್ರಗಳಿಗೆ ಸಮಿತಿ ಸದಸ್ಯರು ಅನಿರೀಕ್ಷಿತ ಭೇಟಿ ನೀಡುವುದರೊಂದಿಗೆ ಅವುಗಳ ನಿರ್ವಹಣೆ ಮತ್ತು
ತಪಾಸಣೆ ಮಾಡುವುದರೊಂದಿಗೆ ಅಕ್ರಮಗಳನ್ನು ತಡೆಯಬೇಕು ಎಂದರು. ಜಿಲ್ಲೆಯಲ್ಲಿ ಈಗಾಗಲೇ ಖಾಸಗಿ ಹಾಗೂ ಸರ್ಕಾರಿ ಸೇರಿ 53 ಸ್ಕ್ಯಾನಿಂಗ್‌ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದ ಅವರು, ಸ್ಕ್ಯಾನಿಂಗ್‌ ಕೇಂದ್ರದವರು ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದರು.

ಸ್ಕ್ಯಾನಿಂಗ್‌ ಕೇಂದ್ರಗಳು ನೋಂದಾಯಿತ ವೃತ್ತಿಪರರು ಕಾಯ್ದೆಗಳ ಆಶಯಗಳ ವಿರುದ್ಧವಾಗಿ ನಡೆದುಕೊಂಡರೆ ಅವುಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳವುದರ ಜೊತೆಗೆ ನೋಂದಣಿಯನ್ನು ಅಮಾನತ್ತಿನಲ್ಲಿ ಇಡಲಾಗುವುದು ಎಂದರು. ಪ್ರಸವಪೂರ್ವ ಪರೀಕ್ಷೆಯನ್ನು ವರ್ಣತಂತುಗಳ ವೈಪರೀತ್ಯ, ಜನಟಿಕ್‌ ಮೆಟೋಪಾಲಿಸ್ಸ್ ಡಿಸಿಸ್ಸ್ ಸೇರಿದಂತೆ ಮತ್ತಿತರ ಕಾಯಿಲೆಗಳನ್ನು ಗುರುತಿಸಲು ಮಾಡಿಸಬೇಕೆ ಹೊರತು ಬೇರೆ ಯಾವುದಕ್ಕೂ ಪರೀಕ್ಷಿಸಬಾರದು ಎಂದರು.

ಎಲ್ಲಾ ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ತಪಾಸಣೆ ಮಾಡುವಾಗ ಕೋವಿಡ್‌-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್, ಸ್ಯಾನಿಟೈಸ್‌, ಹ್ಯಾಂಡ್‌ಗ್ಲೌಸ್‌ ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದರು. ಯಾವುದೇ ಅಸ್ಪತ್ರೆ ಅಥವಾ ನರ್ಸಿಂಗ್‌ ಹೋಮ್‌ ಗಳಲ್ಲಿ ಲಿಂಗಪತ್ತೆ ಭ್ರೂಣಹತ್ಯೆ ನಡೆಯುತ್ತಿದೆ ಎಂಬ ಸುಳಿವು ಸಿಕ್ಕಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಹಾಗೂ ಮಹಿಳಾ ಸಹಾಯವಾಣಿ 1091 ಕ್ಕೆ ಉಚಿತ ಕರೆ ಮಾಡುವುದರೊಂದಿಗೆ ಮಾಹಿತಿ ನೀಡಬಹುದು ಎಂದರು.

ಸಭೆಯಲ್ಲಿ ಸಮಿತಿ ಅಧ್ಯಕ್ಷ ಡಾ| ರಾಮಕೃಷ್ಣ, ಸದಸ್ಯರಾದ ಡಾ| ಶುಭಾ ವಿಜಯ್‌, ಡಾ| ರವಿ ಶಂಕರ್‌, ನೇತ್ರಾವತಿ ವೆಂಕಟೇಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next