Advertisement
ಈ ಬ್ಯಾಂಕ್‌ನಲ್ಲಿ ಹಣ, ಎಟಿಎಂ, ಚೆಕ್ ಬುಕ್‌ನ ಸುದ್ದಿಯೇ ಇರಲ್ಲ. ಏಕೆಂದರೆ, ಇಲ್ಲಿ ಹಣಕಾಸಿನ ವ್ಯವಹಾರವೇ ನಡೆಯುವುದಿಲ್ಲ. ಇಲ್ಲಿ ನಡೆಯುವುದು ಆಧ್ಯಾತ್ಮಿಕ ವ್ಯವಹಾರ. ಅಂದರೆ, ಮನಶಾÏಂತಿ ಹಾಗೂ ನೆಮ್ಮದಿಗಾಗಿ ಜನ ಈ ಬ್ಯಾಂಕ್‌ನಲ್ಲಿ ಖಾತೆ ತೆರೆಯುತ್ತಿದ್ದಾರೆ. ಇಲ್ಲಿ ಚಲಾವಣೆಯಾಗುವ ಏಕೈಕ ಕರೆನ್ಸಿಯೆಂದರೆ, ‘ಭಗವಾನ್ ಶ್ರೀರಾಮ.’
ಖಾತೆದಾರರಿಗೆ 108 ಕಾಲಂಗಳಿರುವ 30 ಪುಟಗಳ ಪುಸ್ತಿಕೆಯೊಂದನ್ನು ನೀಡಲಾಗುತ್ತದೆ. ಅದರಲ್ಲಿ ಅವರು ಪ್ರತಿ ದಿನ 108 ಬಾರಿ ‘ರಾಮ ನಾಮ’ವನ್ನು ಬರೆಯಬೇಕು. ಈ ಪುಸ್ತಿಕೆಯನ್ನು ಆಯಾ ಸದಸ್ಯನ ಖಾತೆಯಲ್ಲಿ ಡೆಪಾಸಿಟ್ ಮಾಡಲಾಗುತ್ತದೆ. ಇತರೆ ಬ್ಯಾಂಕ್‌ಗಳಂತೆ ಪಾಸ್‌ಬುಕ್‌ಗಳನ್ನೂ ವಿತರಿಸಲಾಗುತ್ತದೆ. ಖಾತೆಯ ಪ್ರಮಾಣವು ರಾಮ ನಾಮದ ಸಂಖ್ಯೆಗಳನ್ನು ಆಧರಿಸಿರುತ್ತದೆ. ಇದನ್ನು ಲಿಖೀತ ಜಪ ಎಂದು ಹೇಳಲಾಗುತ್ತದೆ. ರಾಮ ನಾಮವನ್ನು ಬರೆಯುತ್ತಾ, ಬರೆಯುತ್ತಾ ಆ ವ್ಯಕ್ತಿಯು ಮನಶಾÏಂತಿಯನ್ನು ಗಳಿಸುವನು ಎನ್ನುತ್ತಾರೆ ಬ್ಯಾಂಕ್ ಮ್ಯಾನೇಜರ್ ಅಶುತೋಷ್.
Related Articles
Advertisement