Advertisement
ಅಂದಹಾಗೆ ನಾವು ಇವತ್ತು ಸಿಗಡಿ ಘೀ ರೋಸ್ಟ್ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ಹಾಗಾದರೆ ಮತ್ತೇಕೆ ತಡ “ಸಿಗಡಿ ಘೀ ರೋಸ್ಟ್” ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ…..
ಬೇಕಾಗುವ ಸಾಮಗ್ರಿಗಳು
ಸಿಗಡಿ-ಅರ್ಧ ಕೆ.ಜಿ., ಅರಿಶಿನ ಪುಡಿ-ಅರ್ಧ ಚಮಚ, ಮೊಸರು-4 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್-2 ಚಮಚ, ಒಣಮೆಣಸು-4ರಿಂದ 5, ಕೊತ್ತಂಬರಿ ಬೀಜ(ಧನಿಯಾ)-1ಚಮಚ, ಜೀರಿಗೆ-ಅರ್ಧ ಚಮಚ, ಕಾಳುಮೆಣಸು-4ರಿಂದ5, ಖಾರದ ಪುಡಿ-2 ಚಮಚ, ತುಪ್ಪ-4ಚಮಚ, ಕರಿಬೇವು-ಸ್ವಲ್ಪ, ಮೆಂತ್ಯೆ-ಅರ್ಧ ಚಮಚ, ಈರುಳ್ಳಿ-1, ಲವಂಗ, ಚಕ್ಕೆ, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಸಿಗಡಿಯನ್ನು ಸ್ವಚ್ಛಗೊಳಿಸಿ ಒಂದು ಪಾತ್ರೆಗೆ ಹಾಕಿ ಅದಕ್ಕೆ ಖಾರದ ಪುಡಿ, ಅರಿಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಸರು ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ಅರ್ಧ ಗಂಟೆಗಳ ಕಾಲ ಹಾಗೆ ಬಿಡಿ.
Related Articles
Advertisement
ನಂತರ ಒಂದು ಪ್ಯಾನ್ ಗೆ ಮಿಶ್ರಣ ಮಾಡಿಟ್ಟ ಸಿಗಡಿಯನ್ನು ಹಾಕಿ ಅರ್ಧ ಬೇಯುವವರೆಗೆ ಬೇಯಿಸಿಕೊಂಡು ಆಮೇಲೆ ನೀರು ಮತ್ತು ಸಿಗಡಿಯನ್ನು ಬೇರೆ ಬೇರೆ ತೆಗೆದಿಟ್ಟುಕೊಳ್ಳಿ.
ತದನಂತರ ಇನ್ನೊಂದು ಪ್ಯಾನ್ ಗೆ 2ಚಮಚ ತುಪ್ಪ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಕೈ ಅಡಿಸಿ ಆಮೇಲೆ ರುಬ್ಬಿಟ್ಟ ಮಸಾಲೆ ಹಾಗು ತೆಗೆದಿಟ್ಟ ಸಿಗಡಿ ನೀರು ಮತ್ತು ರುಚಿಗೆ ಬೇಕಾದಷ್ಟು ಉಪ್ಪನ್ನು ಸೇರಿಸಿ ಫ್ರೈ ಮಾಡಿ.
ನಂತರ ಬೆಂದ ಸಿಗಡಿಯನ್ನು ಸೇರಿಸಿ ಅದಕ್ಕೆ 2 ಚಮಚ ತುಪ್ಪ ಬೆರೆಸಿ ಕೊನೆಗೆ ಕರಿಬೇವು ಹಾಕಿದರೆ ಬಿಸಿ-ಬಿಸಿಯಾದ ಸಿಗಡಿ ಘೀ ರೋಸ್ಟ್ ಸವಿಯಲು ಸಿದ್ಧ.
-ಶ್ರೀರಾಮ್ ಜಿ . ನಾಯಕ್