Advertisement

ಕೆರಿಬಿಯನ್‌ ಕ್ರಿಕೆಟ್‌ ಲೀಗ್‌ನಲ್ಲಿ ಪ್ರವೀಣ್‌ ತಾಂಬೆ?

10:24 PM Jun 25, 2020 | Sriram |

ಹೊಸದಿಲ್ಲಿ: ಕೆರಿಬಿಯನ್‌ ಕ್ರಿಕೆಟ್‌ ಲೀಗ್‌ನಲ್ಲಿ (ಸಿಪಿಎಲ್‌) ಪಾಲ್ಗೊಳ್ಳಲಿರುವ ಕ್ರಿಕೆಟಿಗರ ಯಾದಿಯೊಂದನ್ನು ಪ್ರಕಟಿಸಲಾಗಿದೆ. ಇದರಲ್ಲಿ 537 ಮಂದಿ ಆಟಗಾರರಿದ್ದು, ಭಾರತದ ಪ್ರವೀಣ್‌ ತಾಂಬೆ ಹೆಸರು ಕೂಡ ಕಾಣಿಸಿಕೊಂಡಿದೆ. ಈ ಯಾದಿಯಲ್ಲಿರುವ ಮತ್ತೋರ್ವ ಭಾರತೀಯನೆಂದರೆ ಅಸದ್‌ ಪಠಾಣ್‌.

Advertisement

48 ವರ್ಷದ ಪ್ರವೀಣ್‌ ತಾಂಬೆ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಆಡುತ್ತಿದ್ದಾಗ ಮಿಂಚಿದ ಬೌಲರ್‌. 2013-15ರ ಅವಧಿಯಲ್ಲಿ ತಾಂಬೆ ಈ ತಂಡವನ್ನು ಪ್ರತಿನಿಧಿಸಿದ್ದರು. 2020ರ ಹರಾಜಿನಲ್ಲಿ ಕೆಕೆಆರ್‌ ಪಾಲಾಗಿದ್ದರು. ಆದರೆ ಮಂಡಳಿ ಅನುಮತಿ ಪಡೆಯದೆ ಟಿ10 ಪಂದ್ಯಾವಳಿಯೊಂದರಲ್ಲಿ ಆಡಿದ ಕಾರಣ ತಾಂಬೆ ಅವರನ್ನು ಬಿಸಿಸಿಐ ಅನರ್ಹಗೊಳಿಸಿತು. ಐಪಿಎಲ್‌ನಲ್ಲಿ 33 ಪಂದ್ಯಗಳನ್ನಾಡಿದ್ದು, 28 ವಿಕೆಟ್‌ ಉರುಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next