Advertisement

Sullia: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಉಲ್ಲೇಖೀಸಿದ ಪೋಸ್ಟ್‌: ದೂರು

10:26 PM Sep 28, 2024 | Team Udayavani |

ಸುಳ್ಯ: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣವನ್ನು ಉಲ್ಲೇಖೀಸಿ ಅದರಲ್ಲಿ ಇಬ್ಬರ ಹೆಸರನ್ನು ಹಾಕಿ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೋರ್ವರು ಪೋಸ್ಟ್‌ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಘಟನೆ ಬಗ್ಗೆ ಇತ್ತಂಡಗಳಿಂದ ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿದೆ.

Advertisement

ಪ್ರವೀಣ್‌  ಕೊಲೆ ಪ್ರಕರಣವನ್ನು ಉಲ್ಲೇಖೀಸಿ ಹಾಗೂ ವಿವಿಧ ಆರೋಪಗಳನ್ನು ಹೊರಿಸಿ ಇಬ್ರಾಹಿಂ ಖಲೀಲ್‌ ಎಂಬವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.  ಇದು  ವೈರಲ್‌ ಆಗುತ್ತಿದ್ದು, ವಿವಿಧ ರೀತಿಯಲ್ಲಿ ಚರ್ಚೆಗಳಿಗೆ ಕಾರಣವಾಗುತ್ತಿವೆ.  ಜಮಾಲ್‌ ಮತ್ತು ಅಜರುದ್ದೀನ್‌ ಎಂಬಿಬ್ಬರ ವಿರುದ್ಧವೂ ವಿವಿಧ ಆರೋಪ ಹೊರಿಸಿ ಬರಹವನ್ನು ಪೋಸ್ಟ್‌ ಮಾಡಲಾಗಿದ್ದು, ಇದರಲ್ಲಿ ಪ್ರವೀಣ್‌ ಪ್ರಕರಣವೂ ಉಲ್ಲೇಖವಾಗಿತ್ತು.

ಈ ಸಂಬಂಧ ನಿಂತಿಕಲ್ಲು ಸಮೀಪದ ಇಬ್ರಾಹಿಂ ಖಲೀಲ್‌ ವಿರುದ್ಧ ಬೆಳ್ಳಾರೆ ಜಮಾಅತರು ಪೊಲೀಸ್‌ ಠಾಣೆಗೆ  ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ 2018ರಿಂದ ಬೆಳ್ಳಾರೆಯ ಜಮಾಲ್‌ ಮತ್ತು ಅಝರುದ್ದೀನ್‌ ಅವರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಇಬ್ರಾಹಿಂ ಖಲೀಲ್‌ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ. ವೈಯಕ್ತಿಕ ವಿಚಾರದಲ್ಲಿ ಆರೋಪಗಳನ್ನು ಮಾಡಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next