Advertisement

ಪ್ರಥಮ್‌ ಬಿಲ್ಡಪ್‌ ಟೈಟಲ್‌ ಲಾಂಚ್‌

03:29 PM Nov 04, 2017 | Team Udayavani |

“ಬಿಗ್‌ಬಾಸ್‌’ನಿಂದ ಬಂದ ಪ್ರಥಮ್‌ ಸಿನಿಮಾ ಮೇಲೆ ಒಪ್ಪಿಕೊಳ್ಳುತ್ತಲೇ ಇದ್ದಾರೆ. ಆದರೆ, ಅವರು “ಬಿಗ್‌ಬಾಸ್‌’ಗೆ ಹೋಗುವ ಮುನ್ನ ಆರಂಭಿಸಿದ “ದೇವ್ರವ್ನೆ ಬುಡು ಗುರು’ ಚಿತ್ರ ಮಾತ್ರ ಇನ್ನೂ ಮುಗಿದಿಲ್ಲ. ಈ ನಡುವೆಯೇ ಒಂದಷ್ಟು ಸಿನಿಮಾಗಳನ್ನು ಪ್ರಥಮ್‌ ಒಪ್ಪಿಕೊಂಡು ತಾನು, ಬಿಝಿ ಎಂಬಂತೆ ಓಡಾಡುತ್ತಿದ್ದಾರೆ. ಈಗ ಪ್ರಥಮ್‌ ಅವರ ಹೊಸ ಸಿನಿಮಾವೊಂದರ ಟೈಟಲ್‌ ಲಾಂಚ್‌ ಆಗಿದೆ.

Advertisement

ಅದು “ಬಿಲ್ಡಪ್‌’. ಹೌದು, ಈ ಹಿಂದೆಯೇ ಪ್ರಥಮ್‌ ತಾನು “ಬಿಲ್ಡಪ್‌’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದ ಪ್ರಥಮ್‌ ಚಿತ್ರದ ಟೈಟಲ್‌ ಲಾಂಚ್‌ ಅನ್ನು ವಿಶೇಷ ವ್ಯಕ್ತಿಯಿಂದ ಬಿಡುಗಡೆ ಮಾಡಿಸುವುದಾಗಿ ಹೇಳಿದ್ದಾರೆ. ಈಗ ಆ ವಿಶೇಷ ವ್ಯಕ್ತಿ ಬಿಡುಗಡೆ ಮಾಡಿದ್ದಾರೆ. ಆ ವ್ಯಕ್ತಿ ಶಿವರಾಜಕುಮಾರ್‌. ಶಿವರಾಜಕುಮಾರ್‌ “ಬಿಲ್ಡಪ್‌’ ಚಿತ್ರದ ಟೈಟಲ್‌ ಲಾಂಚ್‌ ಮಾಡಿ,ಪ್ರಥಮ್‌ಗೆ ಶುಭ ಕೋರಿದ್ದಾರೆ.  

ಈ ಹಿಂದಿನ ತಮ್ಮ ಸಿನಿಮಾಗಳ ಮುಹೂರ್ತವನ್ನು ರಾಜಕಾರಣಿಗಳಿಂದ ಮಾಡಿಸಿದ ಪ್ರಥಮ್‌ ಈ ಬಾರಿ ಟೈಟಲ್‌ ಲಾಂಚ್‌ ಅನ್ನು ಶಿವಣ್ಣನಿಂದ ಮಾಡಿಸಿದ್ದಾರೆ. ಈ ಚಿತ್ರವನ್ನು ಸ್ವತಃ ಪ್ರಥಮ್‌ ನಿರ್ದೇಶಿಸಿ, ನಾಯಕರಾಗಿ ನಟಿಸಲಿದ್ದಾರೆ. ಚಿತ್ರ ಯಾವಾಗ ಆರಂಭವಾಗುತ್ತದೆ, ಯಾರೆಲ್ಲಾ ನಟಿಸುತ್ತಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಸದ್ಯ ಪ್ರಥಮ್‌ ನಟಿಸಿರುವ “ಎಂಎಲ್‌ಎ’, “ದೇವ್ರಂಥ ಮನುಷ್ಯ’ ಚಿತ್ರಗಳು ಚಿತ್ರೀಕರಣದಲ್ಲಿವೆ. 

Advertisement

Udayavani is now on Telegram. Click here to join our channel and stay updated with the latest news.

Next