Advertisement

ಪ್ರತಾಪ್‌ ಸಿಂಹ, ಸೂಲಿಬೆಲೆ, ಈಶ್ವರಪ್ಪಗೆ ಜೀವ ಬೆದರಿಕೆ

08:00 AM Sep 07, 2017 | Team Udayavani |

ಶಿವಮೊಗ್ಗ/ಮೈಸೂರು: ಸಾಮಾಜಿಕ ಜಾಲತಾಣದ ಮೂಲಕ ನನ್ನ ಕೊಲೆಗೆ ಪ್ರಚೋದನೆ ನೀಡುತ್ತಿರುವವರ ವಿರುದಟಛಿ ಕಾನೂನು ಕ್ರಮ ಕೈಗೊಳ್ಳುವಂತೆ ಸಂಸದ ಪ್ರತಾಪ್‌ ಸಿಂಹ, ಮೈಸೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಹಿನ್ನೆಲೆಯಲ್ಲಿ ಅನಂತಮೂರ್ತಿ ಬಿ. ಎಂಬಾತ ಟ್ವಿಟರ್‌ ಮೂಲಕ ಕೊಲೆ ಬೆದರಿಕೆಯೊಡ್ಡಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರುಗಿಸಿ, ರಕ್ಷಣೆ ನೀಡಬೇಕೆಂದು ಕೋರಿದ್ದಾರೆ.

Advertisement

ಅನಂತಮೂರ್ತಿ ಬಿ. ಎಂಬಾತನ ಟ್ವಿಟರ್‌ ಖಾತೆಯಿಂದ “ಮುಗಿಸಿ ಚಕ್ರವರ್ತಿ ಸೂಲಿಬೆಲೆ ಮತ್ತು ಪ್ರತಾಪ್‌ ಸಿಂಹ ಇವರನ್ನ’ ಎಂಬ ಬೆದರಿಕೆ ಇರುವ ಟ್ವಿಟರ್‌ ಸಂದೇಶ ಹಾಗೂ ಅದರ ಸ್ಕ್ರೀನ್‌ ಶಾಟ್‌ನೊಂದಿಗೆ ದೂರು ನೀಡಿದ್ದಾರೆ.

ಈಶ್ವರಪ್ಪರಿಂದ ದೂರು: ಅಪರಿಚಿತ ವ್ಯಕ್ತಿ ಯೋರ್ವನಿಂದ ತಮಗೆ ಬೆದರಿಕೆ ಕರೆ ಬಂದಿದ್ದು, ಸೂಕ್ತ ರಕ್ಷಣೆ ನೀಡುವಂತೆ ಕೆ.ಎಸ್‌. ಈಶ್ವರಪ್ಪ ಬುಧವಾರ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಅಭಿನವ್‌ ಖರೆ ಅವರನ್ನು ಭೇಟಿಯಾಗಿ ದೂರು ನೀಡಿದರು. ಮಂಗಳವಾರ 67803837 ಸಂಖ್ಯೆಯಿಂದ ಕರೆಮಾಡಿ ನೀನು ಹಿಂದೂಗಳ ಪರವಾಗಿ ಇದ್ದಿಯಾ. ನಿನ್ನ ನಾವು ಕೊಲೆ ಮಾಡುತ್ತೇವೆ’ ಎಂದು ಉರ್ದು ಮಿಶ್ರಿತ ಕನ್ನಡದಲ್ಲಿ ನನಗೆ ಬೆದರಿಕೆ ಹಾಕಿದರು ಎಂದು ಎಸ್‌ಪಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next