Advertisement

State Govt ಗೋ ಹಂತಕರಿಗೆ ಬೆಂಬಲ ನೀಡುತ್ತಿದೆ, ಹಿಂದೂಗಳನ್ನು ನಿರ್ಲಕ್ಷಿಸುತ್ತಿದೆ:

02:30 PM Jan 15, 2025 | Kavyashree |

ಶಿವಮೊಗ್ಗ: ಕರ್ನಾಟದಲ್ಲಿ ರಾಜ್ಯ ಸರ್ಕಾರ ಹಿಂದೂಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ, ಗೋ ಹಂತಕರಿಗೆ ಬೆಂಬಲ ನೀಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದರು.

Advertisement

ಜ.15ರ ಬುಧವಾರ ಶಿವಮೊಗ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಇತ್ತೀಚಿಗೆ ಬಿಜೆಪಿ ಸರ್ಕಾರ ಇದ್ದಾಗ ಎಲ್ಲಾ ಜಿಲ್ಲೆಗಳಲ್ಲೂ ಗೋ ಶಾಲೆ ನಿರ್ಮಾಣ ಮಾಡಬೇಕು ಎಂದು ನಿರ್ಣಯ ಆಗಿತ್ತು. ಅದರಂತೆ 14 ಗೋ ಶಾಲೆಗಳನ್ನು ತೆರೆದಿದ್ದೆವು. ಈಗಿನ ಸರ್ಕಾರ ಗೋ ಶಾಲೆ ತೆರೆಯಲ್ಲ ಅಂತ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದಾರೆ ಎಂದರು.

ಗುಂಡಾಗಳಿಗೆ ಇದರಿಂದ ಕುಮ್ಮಕ್ಕು ಸಿಕ್ಕಿದೆ, ಏನು ಮಾಡಲ್ಲ ಇವರು ಅಂತ ಗೊತ್ತಾಗಿದೆ ಎಂದ ಅವರು, ಚಾಮರಾಜಪೇಟೆಯಲ್ಲಿ ಮೂರು ಗೋ ಮಾತೆಯ ಕೆಚ್ಚಲು ಕಟ್ ಮಾಡಿದ್ದಾರೆ. ಇದೊಂದು ರಾಕ್ಷಿಸ ಕೃತ್ಯ. ಇಂತಹ ಕೃತ್ಯ ರಾಜ್ಯದ ಇತಿಹಾಸದಲ್ಲೇ ಮೊದಲು. ಇಂತಹ ಕೃತ್ಯ ನಾವೆಂದೂ ಕಂಡಿಲ್ಲ ಎಂದರು.

ಯಾರನ್ನೋ ಹಿಡಿದುಕೊಂಡು ಒಂದು ಅರೆಸ್ಟ್ ಮಾಡಿ, ಇವನು ಹುಚ್ಚ ಅಂತಿದ್ದಾರೆ. ಪೊಲೀಸ್ ಇಲಾಖೆ ಯಾರದ್ದೋ ರಾಜಕಾರಣಿಯ ಪಾದಕ್ಕೆ ಬಿದ್ದ ಹಾಗೇ ನಡೆದುಕೊಳ್ಳುತ್ತಿದೆ. ಸ್ವಾಬಿಮಾನ ಬಿಟ್ಟು, ಹಿಂದೂ ಸಮಾಜಕ್ಕೆ ಅಪಮಾನ ಮಾಡಿ, ಯಾವುದೋ ಪ್ರಮೋಶನ್ ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.

ಪೊಲೀಸ್ ಇಲಾಖೆಗೆ ಇದೊಂದು ಅಪಮಾನ. ಬಂಧನ ಆಗಿರುವವನು ಹುಚ್ಚ ಆಗಿದ್ರೆ ರಾತ್ರಿ ಹೋಗಿ ಕೆಚ್ಚಲು ಕಡಿಯುತ್ತಿದ್ದನಾ ? ಇದರ ಹಿಂದೆ ದೊಡ್ಡ ದುಷ್ಕೃತ್ಯ ಇದೆ. ಜೊತೆಗೆ ದೊಡ್ಡ ರಾಷ್ಟ್ರದ್ರೋಹಿ ತಂಡವೇ ಇದೆ ಎಂದು ಹೇಳಿದರು.

Advertisement

ಗೋವಿನ ಕೆಚ್ಚಲು ಕಟ್ ಮಾಡಿರೋ ಪಾಪಕ್ಕೆ ಈ ರಾಜ್ಯ ಸರ್ಕಾರ ಉಳಿಯುತ್ತೆ ಅಂತ ಅನಿಸುವುದಿಲ್ಲ. ಪೊಲೀಸ್ ಇಲಾಖೆಯ ಕುಟುಂಬಸ್ಥರು ಸಹ ಇದರ ಶಾಪ ಅನುಭವಿಸುತ್ತಾರೆ ಎಂದ ಅವರು, ಕರ್ನಾಟಕದ ಮುಂದಿನ ಹಂತ ಏನು ಎಂಬುದರ ಮೊದಲ ಹಂತ ಇದು ಎಂದು ಸ್ವಾಮೀಜಿಗಳು ಹೇಳಿದ್ದಾರೆ ಎಂದರು.

ಮುಂದುವರೆದು ಮಾತನಾಡಿ, ಹಿಂದೂಗಳ ಮೇಲೆ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಯಲಿದೆ ಎಂದಿದ್ದಾರೆ. ಮುಸ್ಲಿಂಮರ ಕಾರ್ಯಕ್ರಮಕ್ಕೆ ಹೀಗೆ ಆಗಿದ್ರೆ ಕಾಂಗ್ರೆಸ್ ನವರು ಬೊಬ್ಬೆ ಹೊಡೆಯುವರು. ಮುಸ್ಲಿಂರು ಬೆಂಕಿ ಹಚ್ಚಿ ಬಿಡುತ್ತಿದ್ದರು. ಸಿಎಂ ಗೆ ಈ ಶಾಪ ತಟ್ಟುವ ಮೊದಲೇ ದೇಶದ್ರೋಹಿಗಳನ್ನು ಬಂಧಿಸಲಿ ಎಂದು ಹೇಳಿದರು.

ಸರಿಯಾಗಿ ಬಿಗಿ ಮಾಡಿದ್ರೆ ದುಷ್ಟ ನಸ್ರು ಯಾವ ಗ್ರೂಪ್ ಜೊತೆ ಇದ್ದಾನೆ ಎಂದು ತಿಳಿಯುತ್ತೆ. ಹಿಂದೂಗಳು ಬೆಂಬಲ ಕೊಟ್ಟಿದಕ್ಕೆ ನಿಮಗೆ 140 ಸೀಟ್ ಬಂದಿರುವುದು. ಗೋ ತಾಯಿಯ ಶಾಪ ತಟ್ಟಿ ಈ ಸರ್ಕಾರ ಉಳಿಯಲ್ಲ ಎಂದ ಅವರು, ರಾಷ್ಟ್ರದ್ರೋಹಿಗಳನ್ನು ಸರ್ಕಾರ ಕೂಡಲೇ ಬಂಧಿಸಬೇಕು ಎಂದರು.

ಭಗವಾನ್ ಎಂತ ಅಯೋಗ್ಯ, ಎಂತಾ ಮಗ ಅಂತ ಹೇಳುತ್ತಿದ್ದೇ ಈಗ ಬೇಡ. ಅವರ ಅಪ್ಪ- ಅಮ್ಮನಿಗೂ ಗೊತ್ತಿರಲಿಲ್ಲ ಅನಿಸುತ್ತೇ ಇವನು ಇಂತ ಅಯೋಗ್ಯ ಎಂದು ಎಂದ ಅವರು, ಡಿ.ಕೆ ಶಿವಕುಮಾರ್ ಶೃಂಗೇರಿಗೆ ಹೋಗಿ ಒಂದು ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿದರು.

ಸಾಧು ಸಂತರಿಂದ ಧರ್ಮ ದೇಶ ಉಳಿಯುತ್ತಿದೆ ಎಂದಿದ್ದಾರೆ. ಎಷ್ಟು ಕೋಟಿ ಸಾಧು ಸಂತರ ರಕ್ಷಣೆಗೆ ಬಜೆಟ್ ನಲ್ಲಿ ಹಣ ನೀಡುತ್ತೀರಾ ಹೇಳಿ ಎಂದು ಸರ್ಕಾರವನ್ನು ಪ್ರಶ್ನಿಸಿದ ಅವರು, ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಅನೇಕ ಮಠಗಳಿಗೆ ಹಣ ನೀಡಿದ್ದೆವು. ಕೆಲ ಸಾಧು ಸಂತರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಹಣ ಸಹ ಇಲ್ಲದಂತಹ ಪರಿಸ್ಥಿತಿ ಇದೆ ಎಂದರು.

ಬಜೆಟ್ ನಲ್ಲಿ ಹಣ ಮೀಸಲಿಟ್ಟು ಎಲ್ಲಾ ಚಿಕ್ಕ ಚಿಕ್ಕ ಮಠಗಳಿಗೆ ಹಣ ನೀಡಲಿ. ಶತ್ರು ಸಂಸ್ಕಾರ ಮಾಡಲು ಪೂಜೆ ಸಲ್ಲಿಸಿ ಬಂದಿದ್ದಾರೆ. ಡಿಕೆಶಿ ಅವರಿಗೆ ದೈವ ಭಕ್ತಿ ಇದೆ. ಗೋ ಮಾಂಸ ರಪ್ತಿನಲ್ಲಿ ಭಾರತವೇ ಮೊದಲ ಸ್ಥಾನ ಎನ್ನುವ ಅಂಕಿ ಅಂಶವೇ ಸುಳ್ಳು. ಕೆಚ್ಚಲು ಕಡಿದವನ ಪರ ಸರ್ಕಾರವೇ ನಿಂತರೇ ಹೇಗೆ ಎಂದು ಪ್ರಶ್ನಿಸಿದರು.

ಗೋ ಹತ್ಯೆ ಹಂತಕರ ಬಂಧನ ಮಾಡುವಂತೆ ಆಗ್ರಹಿಸಿ, ರಾಷ್ಟ್ರಭಕ್ತರ ಬಳಗದಿಂದ ಜ.16ರ ಗುರುವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.