Advertisement

ಓಟಿಟಿಯತ್ತ ನಟಿ ಪ್ರಣೀತಾ ಚಿತ್ತ

09:55 AM May 23, 2021 | Team Udayavani |

ನಟಿ ಪ್ರಣೀತಾ ಬಾಲಿವುಡ್‌ ಸಿನಿಮಾದಲ್ಲಿ ನಟಿಸಿರೋದು ಗೊತ್ತೇ ಇದೆ. “ಹಂಗಾಮಾ-2′ ಎಂಬ ಚಿತ್ರದಲ್ಲಿ ಪ್ರಣೀತಾ ನಟಿಸಿ, ಈಗಾಗಲೇ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. ಈಗ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ರಾನ್‌ ಮಾಡಿಕೊಂಡಿದೆ.

Advertisement

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದಾಗಿ ಕಳೆದ ವರ್ಷ ಬಿಡುಗಡೆ ಕಾಣಲಿಲ್ಲ. ಈ ವರ್ಷವಾದರೂ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬಹುದು ಎಂಬ ನಂಬಿಕೆಯಲ್ಲಿದ್ದ ಚಿತ್ರತಂಡಕ್ಕೆ ನಿರಾಶೆ ಕಾದಿದೆ.

ಇದನ್ನೂ ಓದಿ:ಹಾಲುಣಿಸುವ ತಾಯಂದಿರಿಗೆ ವ್ಯಾಕ್ಸಿನೇಶನ್‍ನಲ್ಲಿ ಆದ್ಯತೆ ನೀಡಿ;ತಜ್ಞರ ಸಮಿತಿ ಶಿಫಾರಸ್ಸು

ಕೊರೊನಾದಿಂದಾಗಿ ಈ ವರ್ಷವೂ ಚಿತ್ರಮಂದಿರಗಳು ತೆರೆಯುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಹಾಗಾಗಿ, ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದೆ ಬಂದಿದೆ. ಚಿತ್ರವನ್ನು ರತನ್‌ ಜೈನ್‌ ನಿರ್ಮಿಸಿದ್ದು, ಓಟಿಟಿಯಲ್ಲಿ ಬಿಡುಗಡೆಗೆ ಮುಂದಾಗಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಣೀತಾ ಜೊತೆ ಪರೇಶ್‌ ರಾವಲ್‌, ಶಿಲ್ಪಾ ಶೆಟ್ಟಿ, ರಾಜ್‌ಪಾಲ್‌ ಯಾದವ್‌ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next