Advertisement

ಆಸ್ಟ್ರೇಲಿಯ ಓಪನ್‌ ಬ್ಯಾಡ್ಮಿಂಟನ್‌: ಪ್ರಣೀತ್‌, ಸಮೀರ್‌ಗೆ ಮುನ್ನಡೆ

07:00 AM May 11, 2018 | |

ಸಿಡ್ನಿ: ಆಸ್ಟ್ರೇಲಿಯ ಓಪನ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾರತದ ಸಾಯಿ ಪ್ರಣೀತ್‌, ಸಮೀರ್‌ ವರ್ಮ ಮುನ್ನಡೆ ಸಾಧಿಸಿದ್ದಾರೆ. ಇವರಿಬ್ಬರೂ ಮೊದಲ ಸುತ್ತಿನ ಪಂದ್ಯದಲ್ಲಿ ನೇರ ಗೇಮ್‌ಗಳ ಅಂತರದ ಗೆಲುವು ಸಾಧಿಸಿದ್ದಾರೆ.

Advertisement

ಬಿ. ಸಾಯಿ ಪ್ರಣೀತ್‌ 21-12, 21-14 ಅಂತರದಿಂದ, ಕೇವಲ 32 ನಿಮಿಷದ ಹೋರಾಟದಲ್ಲಿ ಇಂಡೋನೇಶ್ಯದ ಮೌಲಾನ ಪಾಂಜಿ ಅಹ್ಮದ್‌ ಅವರನ್ನು ಸೋಲಿಸಿದರು. ಮತ್ತೂಂದು ಸಿಂಗಲ್ಸ್‌ ಪಂದ್ಯದಲ್ಲಿ ಸಮೀರ್‌ ವರ್ಮ ಜಪಾನ್‌ನ ಟಕುಮ ಅವರನ್ನು 21-16, 21-12 ಅಂತರದಿಂದ ಪರಾಭವಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next