Advertisement

ಪ್ರಣಯ ರಾಜನ ಕನಸಿನ ಕೂಸು ‘ಆರ್ಟ್‌ ಎನ್‌ ಯು’

09:44 AM Jan 23, 2022 | Team Udayavani |

ಹಿರಿಯ ನಟ ಶ್ರೀನಾಥ್‌ ಯುವಕಲಾವಿದರಲ್ಲಿ ಅಡಗಿರುವ ಕಲೆಗೆ ಮತ್ತಷ್ಟು ಹೊಳಪು ನೀಡುವ ನೂತನ ಕಲ್ಪನೆಯೊಂದಿಗೆ “ಆರ್ಟ್‌ ಎನ್‌ ಯು’ ಎಂಬ ಕಲಾ ಸಂಸ್ಥೆಯನ್ನು ತೆರೆದಿದ್ದಾರೆ.

Advertisement

ನಟನೆ, ನಿರ್ದೇಶನ, ಕಥೆ, ಬರೆವಣಿಗೆ, ಸಿನಿಮಾ ತಯಾರಿಕೆ ಹಾಗೂ ತಂತ್ರಜ್ಞಾನ, ಧ್ವನಿ ತರಬೇತಿ, ಪ್ರಸಾದನ ಹೀಗೆ ಸಿನಿಮಾ ಕ್ಷೇತ್ರಕ್ಕೆ ಸಂಬಧಿಸಿದ ಪ್ರತಿಯೊಂದು ಶಿಕ್ಷಣವನ್ನು ನುರಿತ ಕಲಾವಿದರು, ತಜ್ಞರಿಂದ ತರಬೇತಿ ನೀಡುವ ಕಲಾ ಸಂಸ್ಥೆ ಇದಾಗಿದ್ದು, ಫೆಬ್ರವರಿಯಿಂದ ತನ್ನ ತರಗತಿಗಳನ್ನು ಆರಂಭಿಸಲಿದೆ.

ನಗರದ ಎನ್‌ಆರ್‌ ಕಾಲೋನಿಯಲ್ಲಿ ತಮ್ಮ “ಆರ್ಟ್‌ ಎನ್‌ ಯು’ ಉದ್ಘಾಟನೆಗೊಳಿಸಿ ಮಾತನಾಡಿದ ಶ್ರೀನಾಥ್‌, “ನನ್ನ 54 ವರ್ಷಗಳ ಸಿನಿಮಾ ರಂಗದಲ್ಲಿ ಸಾಕಷ್ಟು ಅನುಭವ ಪಡೆದಿದ್ದೇನೆ. ಆದರೆ ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ, ಅದಕ್ಕೆ ಕೊನೆಯಿರುವುದಿಲ್ಲ. ಕಾಲಕ್ಕೆ ತಕ್ಕಂತೆ ಕಲಿಕೆಯು ಬದಲಾಗುತ್ತದೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಅಂತ ಕೂತರೆ ಬೆಳವಣಿಗೆ ಸಾಧ್ಯವಿಲ್ಲ. ಹಾಗಾಗಿ ಕಾಲಕ್ಕೆ ತಕ್ಕಂತೆ ಮಾಧ್ಯಮ, ಧಾರಾವಾಹಿ, ಓಟಿಟಿಯ ಬೆಳವಣಿಗೆ ಇವುಗಳ ಜೊತೆ ಕಲಿಕೆ ಇರಬೇಕು. ಇಂದಿನ ಸಾಕಷ್ಟು ಯುವ ಕಲಾವಿದರಿಗೆ ನಾವು ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕು ಎನ್ನುವ ಆಸೆ ಸಹಜವಾಗಿರುತ್ತದೆ. ಅಂತವರಿಗೆ ಸೂಕ್ತವಾದ ಆಯ್ಕೆಯಾವುದು, ನಾವು ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ಉತ್ತಮ ಮಾರ್ಗದರ್ಶನ ನೀಡುವ ವೇದಿಕೆಯೆ ಈ ಆರ್ಟ್‌ ಎನ್‌ ಯು’ ಎಂದರು.

ಇದನ್ನೂ ಓದಿ:ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ Neha Malik ಹಾಟ್ ಲುಕ್ಸ್

ಈ ಸಂದರ್ಭದಲ್ಲಿ ತಮ್ಮ ಗುರುಗಳಾದ ಪುಟ್ಟಣ್ಣ ಕಣಗಾಲ ಅವರನ್ನು ನೆನೆದು “ನನಗೆ ನಟನೆ, ಸಂಗೀತ ಸಾಹಿತ್ಯದ ಬಗ್ಗೆ ಕಲಿಸಿದವರೇ ಅವರು’ ಎಂದು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಶ್ರೀನಾಥ್‌ ಕುಟುಂಬ ವರ್ಗ ಹಾಗೂ ಆಪ್ತರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next