Advertisement
ಮುಂಬಯಿಯ ಕ್ರಾಸ್ ಮೈದಾನದಲ್ಲಿ ನಡೆದ 45 ಓವರ್‌ಗಳ ಪಂದ್ಯದಲ್ಲಿ ಜುನ್‌ಜುನ್‌ವಾಲಾ ಕಾಲೇಜನ್ನು ಪ್ರತಿನಿಧಿಸಿದ್ದ ಪ್ರಣವ್, ಗುರುನಾನಕ್ ಕಾಲೇಜು ತಂಡದ ವಿರುದ್ಧ 236 ಬಾರಿಸಿ ಸಂಭ್ರಮಿಸಿದರು.
ಒತ್ತಡ ಮತ್ತು ಇನ್ನಿತರ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಸ್ವಲ್ಪ ದಿನ ಕ್ರೀಡೆಯಲ್ಲಿ ಹಿನ್ನೆಡೆ ಕಂಡಿದ್ದ ಪ್ರಣವ್, ನಿವೃತ್ತಿ ಬಗ್ಗೆಯೂ ಆಲೋಚಿ ಸಿದ್ದರು. ಈಗ ಕ್ರಿಕೆಟ್ ವಲಯದಲ್ಲಿ ಮತ್ತೆ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ. 2016ರ ಜ. 5ರಂದು ಪ್ರಣವ್, ಅಂತರ್ ಶಾಲಾ ಎಚ್‌ಟಿ ಭಂಡಾರಿ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಔಟಾಗದೆ 1,009 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು.
Related Articles
Advertisement
ಅಜೇಯ 1,009ರನ್ ಸಿಡಿಸಿದ ಬಳಿಕ ಪ್ರಣವ್‌ಗೆ ಅನೇಕ ಅವಕಾಶಗಳು ಲಭಿಸಿದ್ದವು. ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಕೂಡ 5 ವರ್ಷಗಳ ಕಾಲ ತಿಂಗಳಿಗೆ 10,000 ರೂ. ವಿದ್ಯಾರ್ಥಿವೇತನ ನೀಡಲು ಆರಂಭಿಸಿತ್ತು. ಆದರೆ ಅನಂತರ ಪ್ರಣವ್ ಸಾಧನೆಯ ಹಿನ್ನೆಡೆ ಕಂಡಿದ್ದರು. ಈಗ ಪ್ರಣವ್ ತನ್ನದೇ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಮೈದಾನಕ್ಕೆ ಮರಳಿರುವುದಾಗಿ ಘೋಷಿಸಿದ್ದಾರೆ.