Advertisement
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಮಾಡುತ್ತಿರುವ ಯಾತ್ರೆಯನ್ನು ಕಾಂಗ್ರೆಸ್ ಪಕ್ಷ 1947ರಲ್ಲಿ ಮಾಡಬೇಕಿತ್ತು. ಅಂದು ಭಾರತ್ ಜೋಡೋ ಮಾಡಿದ್ದರೆ ಗೋವಾ ವಿಮೋಚನೆ ತಡವಾಗುತ್ತಿರಲಿಲ್ಲ. 1950ಕ್ಕಾದರೂ ನಮಗೆ ವಿಮೋಚನೆ ಸಿಗುತ್ತಿತ್ತು. 1955ರಲ್ಲಿ ಪೋರ್ಚುಗೀಸರ ವಿರುದ್ಧ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಯುದ್ಧ ಮಾಡಬೇಕಾಯಿತು ಮತ್ತು ಅನೇಕರು ಹುತಾತ್ಮರಾದರು. ಅಂದು ಭಾರತ ಜೋಡೋ ಮಾಡಿದ್ದರೆ ಈಶಾನ್ಯ ಭಾರತ ಸಂಪೂರ್ಣ ಭಾರತದ ಅವಿಭಾಜ್ಯ ಅಂಗವಾಗಿ, ಪೂರ್ಣ ಕಾಶ್ಮೀರ ಒಳಗೊಂಡ ಭಾರತ ನಮ್ಮದಾಗಿರುತ್ತಿತ್ತು ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ, ದೂರದರ್ಶಿತ್ವ ಯೋಜನೆಗಳನ್ನು ಕಂಡು ಅನ್ಯ ಪಕ್ಷಗಳ ನಾಯಕರು ಬಿಜೆಪಿಗೆ ಬರುತ್ತಿದ್ದಾರೆ. ಅಖಂಡ ಭಾರತ, ನವ ಭಾರತದ ಕನಸು ಕಾಣುವ ಯುವಕರಿಗೆ ಪ್ರಧಾನಿ ಪ್ರೇರಣೆಯಾಗಿದ್ದಾರೆ. ಕ್ಲೀನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಕನಸಿಗೆ ಕೈಜೋಡಿಸುತ್ತಿದ್ದಾರೆ. ನವ ಭಾರತದ ನಿರ್ಮಾಣದ ಕನಸಿನಿಂದಲೇ ಗೋವಾದಲ್ಲಿ ಅನ್ಯಪಕ್ಷೀಯರು ಬಿಜೆಪಿಗೆ ಬಂದಿದ್ದಾರೆ. ಗೋವಾದಲ್ಲಿ ನಡೆದ ಮ್ಯಾಜಿಕ್ ದೇಶದ ಬೇರೆಡೆಯೂ ಆಗಬಹುದು ಎಂದು ಡಾ| ಪ್ರಮೋದ್ ಸಾವಂತ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ : ವಂದೇ ಭಾರತ್ ರೈಲಿಗೆ ಸಾಲು ಸಾಲು ವಿಘ್ನ : ಪ್ರಯಾಣಿಕರನ್ನು ಶತಾಬ್ದಿ ರೈಲಿಗೆ ಶಿಫ್ಟ್