ಉಡುಪಿ: ಪಿಎಫ್ಐ ಸಂಘಟನೆಯನ್ನು ನಿಷೇಧಿಸಿ, ಮುಖಂಡರನ್ನು ಬಂಧಿಸುವುದರಿಂದ ಅವರ ಆಟ ಮುಗಿಯುವುದಿಲ್ಲ. ಅದರ ಕಾರ್ಯಕರ್ತರು ಇನ್ನೂ ಇದ್ದಾರೆ. ಕುತಂತ್ರ, ಷಡ್ಯಂತ್ರ, ದೇಶದ್ರೋಹಿ ಪ್ರವೃತ್ತಿಗಳ ನ್ನು ಬ್ಯಾನ್‌ನಿಂದ ತಡೆಯಲು ಸಾಧ್ಯವಿಲ್ಲ. ಪಿಎಫ್ಐ ಪುಂಡಾಟಿಕೆಯ ಕಡಿವಾಣಕ್ಕೆ ಕೇಂದ್ರ, ರಾಜ್ಯ ಸರಕಾರ ಸೂಕ್ತ ಯೋಜನೆ ರೂಪಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿ ನಲ್ಲಿ “ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ’ ಎಂದು ದುಷ್ಕರ್ಮಿಗಳು ಬರೆದಿರುವ ಬರೆಹದ ಬಗ್ಗೆ ಅವರು ಬುಧವಾರ ಉಡುಪಿಯಲ್ಲಿ ಪ್ರತಿಕ್ರಿಯಿಸಿದರು.
ಸ್ವಾತಂತ್ರ್ಯ ಸಿಕ್ಕಿದಾಗಲೇ ಮುಸಲ್ಮಾನ ರಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಬಿತ್ತಬೇಕಿತ್ತು. ತುಷ್ಟೀಕರಣ ಮಾಡಿ ಕಾಂಗ್ರೆಸ್ ಅವರನ್ನು ದಾರಿ ತಪ್ಪಿಸಿದ ಪರಿಣಾಮವಾಗಿ ಹೀಗಾಗಿದೆ. ಕಾಂಗ್ರೆಸ್ ಮುಸ್ಲಿಮರನ್ನು ಪ್ರತ್ಯೇಕವಾಗಿ ಬೆಳೆಸಿದ್ದು ಇದಕ್ಕೆ ಕಾರಣ. ಭಯೋತ್ಪಾದನೆ, ಕೊಲೆ, ಗಲಭೆ ಕಾಂಗ್ರೆಸ್‌ನ ತುಷ್ಟೀಕರಣದ ಕೊಡುಗೆಯಾಗಿದ್ದು, ಮುಸ್ಲಿಮರಲ್ಲಿ ರಾಷ್ಟ್ರೀಯತೆ ಬೆಳೆಯುತ್ತದೆ ಎಂಬ ನಂಬಿಕೆಯಿಲ್ಲ ಎಂದರು.
ಎಸ್ಕಾರ್ಟ್ ಭದ್ರತೆ ನೀಡದ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಈ ಜಿಲ್ಲೆಯಿಂದಲೇ ನನಗೆ ಬೆದರಿಕೆ ಬಂದಿತ್ತು. ಆದರೆ ನನ್ನನ್ನು ನಿರ್ಲಕ್ಷಿಸಿದ್ದಾರೆ ಎಂದರು.
15 ವರ್ಷದಿಂದ ಶಸ್ತ್ರಪೂಜೆ ಮಾಡು ತ್ತಿದ್ದೇನೆ. ಶಸ್ತ್ರಪೂಜೆ ಮಾಡುವುದು ನವರಾತ್ರಿಯ ಪರಂಪರೆ ಎಂದರು.