Advertisement
ಸಂವಿಧಾನದ ಅನುಚ್ಛೇದ 341 (2) ಅನ್ನು ಉಲ್ಲೇಖಿಸಿ ಸರ್ಕಾರವು ಬೋವಿ, ಕೊರಮ, ಕೊರಚ, ಕೊರವ ಸಮುದಾಯಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗೆ ಹಾಕುವ ಹುನ್ನಾರ ನಡೆಸಿವೆ. ಇದು ಬಿಜೆಪಿ ಮತ್ತು ಆರೆಸ್ಸೆಸ್‌ನ ಗುಪ್ತ ಕಾರ್ಯಸೂಚಿ ಆಗಿದೆ. ಆದ್ದರಿಂದ ಆಯಾ ಸಮುದಾಯಗಳ ಸಚಿವರು, ಶಾಸಕರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
Related Articles
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಮೇಲಿನ ದಾಳಿ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಪ್ರಕಾಶ ರಾಠೊಡ ಆರೋಪಿಸಿದರು.
Advertisement
“ನಾವು (ಕಾಂಗ್ರೆಸ್) ಯಡಿಯೂರಪ್ಪ ಮನೆ ಮೇಲೆ ದಾಳಿ ಮಾಡುವ ಅಗತ್ಯವೇ ಇಲ್ಲ. ಅವರೇನು ಮುಖ್ಯಮಂತ್ರಿಯೇ? ಸಚಿವ ಸಂಪುಟದ ಸದಸ್ಯರೇ? ಅವರೊಬ್ಬ ಬಿಜೆಪಿ ಮುಖಂಡ ಅಷ್ಟೇ. ಈ ಹಿಂದೆ ಪ್ರತಿಭಟನೆಗಳು ನಡೆಸಿದಾಗ, ಯಡಿಯೂರಪ್ಪ ಮನೆ ಮುಂದೆ ಹೋರಾಟ ಮಾಡಿಲ್ಲ. ಮುಖ್ಯಮಂತ್ರಿ ಮನೆ ಮುಂದೆ ಮಾಡಿದ್ದೇವೆ’ ಎಂದು ಹೇಳಿದರು.
ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಮತ್ತಿತರ ಅಂಶಗಳನ್ನು ಸರ್ಕಾರ ವಸ್ತುನಿಷ್ಠವಾಗಿ ಅಧ್ಯಯನ ಮಾಡದೆ, ಹಿಂಬಾಗಿಲಿನಿಂದ ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪರಿಶಿಷ್ಟ ಜಾತಿಯಲ್ಲಿರುವ 99 ಸಮುದಾಯಗಳ ಬೆನ್ನಿಗೆ ಚೂರಿಹಾಕಿ, ನಮ್ಮಲ್ಲಿಯೇ ಒಡಕು ತರುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
ಕೇವಲ ಜನಸಂಖ್ಯೆ ಆಧಾರದಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯನ್ನು ತಿದ್ದಿ ಐದು ಗುಂಪುಗಳನ್ನಾಗಿ ಮಾಡುವುದು ಕಾರ್ಯಸಾಧುವಲ್ಲ. ಏಕೆಂದರೆ ಮೀಸಲಾತಿಗೆ ಹಿಂದುಳಿದಿರುವಿಕೆ ಮಾನದಂಡವಾಗಿರುವಾಗ, ಒಳಮೀಸಲಾತಿಗೂ ಹಿಂದುಳಿದಿರುವಿಕೆಯೇ ಮಾನದಂಡವಾಗಬೇಕೇ ಹೊರತು, ಜನಸಂಖ್ಯೆ ಅಲ್ಲ ಎಂದು ಹೇಳಿದರು.